ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ನೆಚ್ಚಿನ ನಟರ ಶುಭಾಶಯ, ಯಶ್ ಖಡಕ್ ಡೈಲಾಗ್
ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯ/ ಚಂದನವನದ ತಾರೆಗಳಿಂದ ಶುಭಾಶಯ/ ಶಿವರಾಜ್ ಕುಮಾರ್, ಉಪೇಂದ್ರ, ರಚಿತಾ ರಾಮ್, ಆಶಿಕಾ ರಂಗನಾಥ್, ದರ್ಶನ್, ಯಶ್ ಸೇರಿದಂತೆ ನಟ ನಟಿಯರಿಂದ ಶೂಭಾಶಯ
ಬೆಂಗಳೂರು(ನ. 01) ಕನ್ನಡ ರಾಜ್ಯೋತ್ಸವಕ್ಕೆ ಚಂದನವನದ ತಾರೆಗಳು ಶುಭಕೋರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ವಯಶ್, ನವರಸ ನಾಯಕ ಜಗ್ಗೇಶ್ ಆದಿಯಾಗಿ ನಾಐಕ ನಟರು ಕನ್ನಡ ನಾಡು ನುಡಿಯ ಮಹತ್ವ ಸಾರಿ ಹೇಳಿದ್ದಾರೆ.
ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಗಣೇಶ್ ಸಹ ಕನ್ನಡ ಹಬ್ಬಕ್ಕೆ ಶುಭಕೋರಿದ್ದಾರೆ. ಬುದ್ಧಿವಂತ ಉಪೇಂದ್ರ ತಮ್ಮದೇ ಶೈಲಿಯಲ್ಲಿ ಶುಭಾಶಯ ಹೇಳಿದ್ದಾರೆ. ರಚಿತಾ ರಾಮ್, ಆಶಿಕಾ ರಂಗನಾಥ್ ಸೇರಿದಂತೆ ನಟಿಯರು ಕನ್ನಡ ಹಬ್ಬದ ಶುಭಾಶಯ ಕೋರಿದ್ದಾರೆ. ಯಶ್ ಅವರ ಖಡಕ್ ಡೈಲಾಗ್ ಶುಭಾಶಯ ಎಲ್ಲರಿಗಿಂತ ಒಂದು ಕೈ ಮಿಗಿಲಾಗಿ ನಿಲ್ಲುತ್ತದೆ.
ಉಪೇಂದ್ರ
ಜಪಿಸಿದರೆ ಗದ್ದಿ ತಪಿಸಿದರೆ ಸಿದ್ಧಿ ಥಳಿಸಿದರೆ ಶುದ್ಧಿ ಉಳಿಸಿದರೆ ಬುದ್ಧಿ ಬಳಸಿದರೆ ಮಾತ್ರ ಉಳಿದು,ಬೆಳೆದು,ನಮ್ಮತನವನು ಮೆರೆಸುವುದು ಭಾಷೆ... ಅದೇ ನಮ್ಮ ಕನ್ನಡ ಭಾಷೆ
ಕನ್ನಡ ನಿತ್ಯ ಉತ್ಸವದ ಶುಭಾಷಯಗಳು
ದರ್ಶನ್ ತೂಗುದೀಪ್
ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಾಡಧ್ವಜ ಕಡೆಗಣನೆ; ಸುರೇಶ್ ಕುಮಾರ್ ಸ್ಪಷ್ಟನೆ
ಯಶ್
ಅಣ್ತಮ್ಮಾ....
ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡ್ಬೇಕು....ಗಡಿಗಳನ್ನ ಮೀರಿ ಗರಿಗೆದರ್ಬೇಕು...
ಸಾಗರದಾಚೆಗೂ ಚಾಚಿ ನಿಲ್ಬೇಕು....ಕನ್ನಡ ಅಂದ್ರೆ ಮೈ ರೋಮ ಎದ್ದೇಳ್ಬೇಕು...ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು.... ಕನ್ನಡ ಉಳಿಸಿ ಬೆಳಸಿ ಅಂತ ಬೇಡ್ಕೋಳೋ ಕಾಲ ಹೋಯ್ತು....ಈಗೇನಿದ್ರು ಕನ್ನಡ ಕಲಿತು, ಕಲಿಸಿ, ಬಳಸಿ...
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ....ಸಿರಿಗನ್ನಡಂ ಬಾಳ್ಗೆ....
ಜಗ್ಗೇಶ್
ಜನುಮ ನೀಡುತ್ತಾಳೆ ನಮ್ಮತಾಯಿ..
ಅನ್ನ ನೀಡುತ್ತಾಳೆ ಭೂಮಿತಾಯಿ..
ಮಾತು ನೀಡುತ್ತಾಳೆ ಕನ್ನಡ ತಾಯಿ..
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ..
ಕನ್ನಡ ಕುಲಕೋಟಿಗಳಿಗೆ ಅಮ್ಮನ ಭಾಷೆಯ ದಿನದ ಶುಭಕಾಮನೆಗಳು.. ಶುಭದಿನ ಶುಭೋದಯ...
ಗಣೇಶ್
ಕನ್ನಡ ಅಂದ್ರೆ ಬರೀ ಭಾಷೆಯಲ್ಲ ನಮ್ಮ ಸ್ವಾಭಿಮಾನದ ಗುರುತು "ಕನ್ನಡ ಹಬ್ಬದ ಶುಭಾಶಯಗಳು"
ಶಿವರಾಜ್ ಕುಮಾರ್
ಹೊನ್ನಂಥ ನಾಡು ಶ್ರೀಗಂಧದ ಕಾಡು ವಿಶ್ವದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೂ ಕರುನಾಡ ಹಬ್ಬದ ಶುಭಾಶಯಗಳು.
ಪುನೀತ್ ರಾಜ್ ಕುಮಾರ್
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ...ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು....ಜೈ ಕರ್ನಾಟಕ
ರಚಿತಾ ರಾಮ್
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ...ಕನ್ನಡವಾಗಿರು.. ಕನ್ನಡವೇ ಸತ್ಯ ಕನ್ನಡವೇ ನಿತ್ಯ.. ಸಮಸ್ತ ಕನ್ನಡಿಗರಿಗೆ "ಕನ್ನಡ ರಾಜ್ಯೋತ್ಸವದ" ಹಾರ್ದಿಕ ಶುಭಾಶಯಗಳು
ಆಶಿಕಾ ರಂಗನಾಥ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.. ರಾಜ್ಯೋತ್ಸ್ತವ ಬರಿ ಒಂದುದಿನಕ್ಕೆ ಸೀಮೀತವಲ್ಲ ಕನ್ನಡಿಗರಿಗೆ ಎಲ್ಲಾ ದಿನವೂ ರಾಜ್ಯೋತ್ಸವವೇ.. ಆದ್ರೆಎಲ್ಲಾ ಹಬ್ಬಗಳಂತೆ ಒಂದುದಿನ ಎಲ್ಲರೂ ಸೇರಿ ಆಚರಿಸೋದೆ ಖುಷಿ..