ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬ ಅಭಿಮಾನಿಗೂ ರಚಿತಾ ರಾಮ್‌ ಧನ್ಯವಾದಗಳನ್ನು ಹೇಳಲು ವಿಡಿಯೋ ಮಾಡಿದ್ದಾರೆ. ಅಲ್ಲದೇ ನಾಚಿಕೊಂಡು ಐ ಲವ್ ಯು ಹೇಳಿರುವುದು ಯಾಕೆ?

28ರ ವಸಂತಕ್ಕೆ ಕಾಲಿಟ್ಟ ರಚಿತಾ ರಾಮ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 7 ವರ್ಷಗಳು ಕಳೆದಿವೆ. ಸುಮಾರು 21 ಚಿತ್ರಗಳಲ್ಲಿ ಅಭಿನಯಿಸಿ, 12 ಚಿತ್ರಗಳನ್ನು ಕೈಯಲ್ಲಿಟ್ಟಿಕೊಂಡಿರು ಒನ್‌ ಆಫ್‌ ದಿ ಟಾಪ್‌ ನಟಿ ಅಂದ್ರೆ ಈ ಗುಳಿಕೆನ್ನೆ ಚೆಲುವೆ. ಅಕ್ಟೋಬರ್ 3ರಂದು ಸರಳವಾಗಿ ಹುಚ್ಚು ಹಬ್ಬ ಆಚರಿಸಿಕೊಂಡ ರಚ್ಚು ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಲು ವಿಡಿಯೋ ಮಾಡಿದ್ದಾರೆ. 

ರಚಿತಾ ರಾಮ್‌ ಈಗ ಡಜನ್‌ಸ್ಟಾರ್‌; ಕೈಯಲ್ಲಿದೆ 12 ಚಿತ್ರಗಳು! 

ವಿಡಿಯೋದಲ್ಲಿ ಏನು ಹೇಳಿದ್ದಾರೆ?
'ಎಲ್ಲರಿಗೂ ನಮಸ್ಕಾರ. ನಾನು ಮೊದಲ ಬಾರಿ ವಿಡಿಯೋ ಮಾಡಿ ಮಾತನಾಡುತ್ತಿರುವುದು. ಏಕೆಂದರೆ ಎಲ್ಲರಿಗೂ ಥ್ಯಾಂಕ್ಸ್ ಹೇಳುವುದಕ್ಕೆ. ನನ್ನ ಬರ್ತಡೇಗೆ ಪ್ರತಿಯೊಬ್ಬರೂ ತುಂಬಾನೇ ತುಂಬಾನೇ ಸ್ಪೆಷಲ್ ಆಗಿ ವಿಶ್ ಮಾಡಿದ್ದೀರಾ. ಈಗಲೂ ಮಾಡುತ್ತಿದ್ದೀರೀ. ಸಾರಿ ಸ್ವಲ್ಪ ಲೇಟ್‌ ಆಯ್ತು, ವಿಡಿಯೋ ಮಾಡುವುದಕ್ಕೆ. ನಾನು ಸಾರಿ ಕೇಳುತ್ತಾ, ಥ್ಯಾಂಕ್ಸ್ ಹೇಳುತ್ತಿದ್ದೀನಿ. ನಿಮ್ಮೆಲ್ಲರಿಗೂ ಏನೋ ಹೇಳಬೇಕು ಅನಿಸುತ್ತಿದೆ...ಅ..ಅ.... ಐ ಲವ್ ಯು...ಐ ಲವ್ ಯು ಆಲ್‌...' ಎಂದು ಮಾತನಾಡಿದ್ದಾರೆ.

View post on Instagram

ಇನ್ನು ಹುಟ್ಟುಹಬ್ಬ ಪ್ರಯುಕ್ತ ರಚಿತಾ ರಮ್ಮ ಮುಂದಿನ 6 ಹೊಸ ಸಿನಿಮಾಗಳ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಕೆಲ ಮೂಲಗಳ ಮಾಹಿತಿ ಪ್ರಕಾರ ರಚಿತಾ ಕೈಯಲ್ಲಿ ಈಗಾಗಲೇ 12 ಸಿನಿಮಾಗಳಿದ್ದು ಶೆಡ್ಯೂಲ್ ಕ್ಲಾಷ್ ಆಗುತ್ತಿರುವ ಕಾರಣ ಕೆಲವೊಂದು ಸಿನಿಮಾಗಳಿಂದ ಹೊರ ಬಂದಿದ್ದಾರೆ. ಬುಲ್ ಬುಲ್ ಚಿತ್ರದ ಮೂಲಕ ಎಂಟ್ರಿಕೊಟ್ಟ ರಚಿತಾ ರಾಮ್‌ ಅವರನ್ನು ಮತ್ತೆ ದರ್ಶನ್‌ ಜೊತೆ ಸಿನಿಮಾದಲ್ಲಿ ನೋಡಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ.

"