ಆರ್‌ ಕೇಶವಮೂರ್ತಿ

ನಟಿಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅನಿಸಿದ್ದು ಯಾಕೆ?

 ಕೇವಲ ನಟಿಯರಿಗೆ ಮಾತ್ರ ನೋಟಿಸ್ ಕೊಡುತ್ತಿದ್ದಾರೆ. ನಟಿಯರನ್ನು ಮಾತ್ರ ಅರೆಸ್ಟ್ ಮಾಡುತ್ತಿದ್ದಾರೆ. ಯಾಕೆ ನಿರ್ದೇಶಕ, ನಿರ್ಮಾಪಕ, ಹೀರೋಗಳು ಅರೆಸ್ಟ್ ಆಗಿಲ್ಲ. ಅವರು ಯಾಕೆ ವಿಚಾರಣೆಗೆ ಬಂದಿಲ್ಲ. ಇದೇ ನನ್ನ ಅನುಮಾನಕ್ಕೆ ಕಾರಣ.

ಅರೆಸ್ಟ್ ಆದ ನಟಿಯರ ಪರ ಪಾರುಲ್ ಬ್ಯಾಟಿಂಗ್, ಸರ್ಕಾರ, ಪೊಲೀಸರ ವಿರುದ್ಧ ಬಹಿರಂಗ ಪತ್ರ 
 

ಅಂದರೆ ನಟ, ನಿರ್ದೇಶಕ, ನಿರ್ಮಾಪಕರನ್ನು ವಿಚಾರಣೆ ಮಾಡಿ ಅಂತಾನಾ?

 ಡ್ರಗ್ ಜಾಲದ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೆ ಒಂದು ನ್ಯಾಯ, ಪುರುಷರಿಗೆ ಒಂದು ನ್ಯಾಯ ಯಾಕೆ ಎಂಬುದು. ನಾನು ನಟಿ ಎನ್ನುವ ಕಾರಣಕ್ಕೆ ನನ್ನ ಅಭಿಪ್ರಾಯ ಅಥವಾ ಪ್ರಶ್ನೆಯನ್ನು ಚಿತ್ರರಂಗಕ್ಕೆ ಮಾತ್ರ ಸೀಮಿತ ಮಾಡಬೇಡಿ.

ಅಂದರೆ ನಿಮ್ಮ ಪ್ರಕಾರ ಪುರುಷರು ಹಾಗೂ ಬೇರೆ ಕ್ಷೇತ್ರದವರೂ ಅಂತನಾ?

ಹೌದು. ಡ್ರಗ್ ಬಳಕೆ, ಮಾರಾಟ ಕೇವಲ ಚಿತ್ರರಂಗದಲ್ಲಿ ಮಾತ್ರ ಇದೆಯೇ. ಎಲ್ಲಾ ಕಡೆ ಇರುತ್ತದೆ. ಹಾಗಾದರೆ ಯಾಕೆ ಈ ಜಾಲದಲ್ಲಿ ರಾಜಕಾರಣಿಗಳು, ಐಟಿ, ವೈದ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದವರು ಬರುತ್ತಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರುವ ಜಾಲದಲ್ಲಿ ಕೇವಲ ಸಿನಿಮಾ ಮಂದಿ ಮಾತ್ರ ಇದ್ದಾರೆಯೇ. ಅದರಲ್ಲೂ ನಟಿಯರು ಮಾತ್ರನಾ ಎಂಬುದು ನನ್ನ ವಾದ.

ಡ್ರಗ್ಸ್ ಜಾಲದಲ್ಲಿ ನಟಿಯರು ಮಾತ್ರ ಇರುವುದೇ? ನಟರಿಲ್ಲವೇ? 
 
ನಟರನ್ನು ಹಾಗೂ ರಾಜಕಾರಣಿಯ ಪುತ್ರನನ್ನೂ ವಿಚಾರಣೆಗೆ ಕರೆದಿದ್ದಾರಲ್ಲ?

 ಕೇವಲ ವಿಚಾರಣೆ ಮಾಡಿದ್ದಾರೆ. ಆದರೆ, ಅರೆಸ್ಟ್ ಮಾಡಿಲ್ಲ. ಬಂ‘ನಕ್ಕೊಳಗಾಗಿರುವುದು ಇಬ್ಬರು ನಟಿಯರು ಮಾತ್ರ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ. ಆದರೆ, ಆ ತಪ್ಪು ನಿರ್ದಿಷ್ಟವಾಗಿ ಮಹಿಳೆಯರಿಗೆ ಸೀಮಿತ ಆಗದಿರಲಿ. ಇದನ್ನು ನೀವು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಿ. ಈ ವಿಚಾರದಲ್ಲಿ ಸ್ತ್ರೀವಾದಿಗಳು ಆಗಲಿ ಮಹಿಳಾಪರ ಚಿಂತಕರು ಯಾಕೆ ‘್ವನಿ ಎತ್ತುತ್ತಿಲ್ಲ ಎಂಬುದು ನನಗೆ ಅಚ್ಚರಿ ಆಗುತ್ತದೆ.

ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿಲ್ಲವೇ?
 
ತನಿಖೆ ವಿಚಾರದಲ್ಲಿ ಪ್ರಾಮಾಣಿಕತೆ ಇದೆ. ಯಾವ ರೀತಿ ಎಂದರೆ ಕೇವಲ ನಟಿಯರನ್ನು ಮಾತ್ರ ವಿಚಾರಣೆ ಮಾಡಿ ಬಂಧಿಸುವಂತೆ ಇಲ್ಲಿವರೆಗೂ ಆಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲಿ ಮಹಿಳೆಯರನ್ನೇ ಗುರಿ ಮಾಡುತ್ತಿದ್ದಾರೆ. ರಿಯಾ ಚಕ್ರವರ್ತಿ ಆದ ಮೇಲೆ ಈಗ ದೀಪಿಕಾ ಪಡುಕೋಣೆಗೆ ನೋಟಿಸ್ ಹೋಗಿದೆ. ನನ್ನ ಈ ಪ್ರಶ್ನೆಯನ್ನೇ ನಟಿ ರಮ್ಯಾ ಕೂಡ ಎತ್ತಿದ್ದಾರೆ.
 
ಡ್ರಗ್ ಜಾಲ ಸುಶಾಂತ್ ಸಾವಿನ ತನಿಖೆಯಿಂದ ಹುಟ್ಟಿಕೊಂಡಿರುವುದು. ಬಾಲಿವುಡ್ ಅನ್ನು ಹತ್ತಿರದಿಂದ ನೋಡಿದವರು ಇದಕ್ಕೆ ಏನಂತೀರಿ?

ಡ್ರಗ್ ಜಾಲ ನಿಯಂತ್ರಣಗೊಳ್ಳಬೇಕು. ಸಮಾಜಕ್ಕೆ ಮಾರಕ ಎನಿಸುವ ಎಲ್ಲ ದುಶ್ಚಟಗಳನ್ನು ಇಲ್ಲವಾಗಿಸಬೇಕು. ನೀವೇ ಹೇಳಿದಂತೆ ಅದೇ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಏನಾಯಿತು, ಡ್ರಗ್ ಜಾಲದ್ದೇ ಈಗ ಸುದ್ದಿ ಅಲ್ಲವೇ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು. ಡ್ರಗ್ ಜಾಲದಲ್ಲಿ ಇರುವವರು ಎಲ್ಲರು ಆಚೆ ಬರಬೇಕು.

ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದಾರೆ ಅಂತೀರಾ?

ಡ್ರಗ್ ಇಶ್ಯೂನ ರಾಜಕೀಯ ಮಾಡುತ್ತಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಎಲ್ಲರು ಇದರ ಬಗ್ಗೆಯೇ ಮಾತನಾಡುತ್ತಾ ಯಾವುದಕ್ಕೆ ಮಹತ್ವ ಕೊಡಬೇಕೋ ಅದಕ್ಕೆ ಕೊಡುತ್ತಿಲ್ಲ ಅಷ್ಟೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ರೈತರು ಪ್ರತಿ‘ೆಟನೆ ಮಾಡುತ್ತಿದ್ದಾರೆ, ಚೈನಾ ಗಡಿ ವಿವಾದ ಮತ್ತೆ ಸದ್ದು ಮಾಡುತ್ತಿದೆ. ನಿರುದ್ಯೋಗದ ಬಗ್ಗೆ ಮಾತು ಆಡುತ್ತಿದ್ದಾರೆ. ಆದರೆ, ಮಾ‘್ಯಮಗಳು ಸೇರಿದಂತೆ ಎಲ್ಲರು ಡ್ರಗ್ಸ್ ಬಗ್ಗೆ ಮಾತನಾಡುತ್ತಿದ್ದಾರೆ.

ಸರಿ, ನೀವು ಯಾವುದಾದರೂ ಪಾರ್ಟಿಗಳಿಗೆ ಹೋಗಿದ್ದೀರಾ?

ನಾನು ಯಾವುದೇ ಪಾರ್ಟಿಗಳಲ್ಲಿ  ಭಾಗವಹಿಸಿಲ್ಲ. ನಾನು ಈ ವಿಚಾರದಲ್ಲಿ ಸ್ವಚ್ಛವಾಗಿದ್ದೇನೆ. ಆ ಕಾರಣಕ್ಕೆ ನಾನು ‘್ವನಿ ಎತ್ತಿರುವುದು.