ಕುತೂಹಲ ಹುಟ್ಟಿಸುತ್ತಿದೆ ನಿಖಿಲ್‌ ಕುಮಾರಸ್ವಾಮಿ ಪೋಸ್ಟ್‌.  ಚಿಂತೆ ಇಲ್ಲದಿರುವ ವ್ಯಕ್ತಿನೇ ಇಲ್ಲ ಎಂದದ್ದು ಯಾರಿಗೆ?

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಲೆಟೇಸ್ಟ್‌ ಆಗಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಅದರಲ್ಲೂ ಕುರಿ ಮರಿಯನ್ನು ಹೊತ್ತುಕೊಂಡು ಬರೆದ ಸಾಲು ಯಾರಿಗಿರಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ.

ಹೇಗಿತ್ತು ನೋಡಿ ನಿಖಿಲ್ ಕುಮಾರಸ್ವಾಮಿ- ರೇವತಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ?

'ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಚಿಂತೆ ಇಲ್ಲದಿರೋ ವ್ಯಕ್ತಿನೇ ಇಲ್ಲ. ಜೀವನದಲ್ಲಿ ಸವಾಲುಗಳು ಏನೇ ಇರಲಿ ನಾವು ಎದೆಗುಂದದೇ ಎದುರಿಸಬೇಕು' ಎಂದು ಬರೆದುಕೊಂಡಿದ್ದಾರೆ. 

View post on Instagram

ಅಭಿಮಾನಿಗಳು 'ಅಣ್ಣ ಈ ಸಾಲುಗಳು ಯಾರಿಗೆ, ಏನಾದರೋ ಸಮಸ್ಯೆ ಎದುರಾಯ್ತಾ?' ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ವಿಶೇಷ ಏನೆಂದರೆ ನಿಖಿಲ್‌ ಕುಮಾರಸ್ವಾಮಿ ಬೆಸ್ಟ್‌ ಫ್ರೆಂಡ್‌ ಅಭಿಷೇಕ್ ಅಂಬರೀಶ್‌ ಈ ಫೋಟೋವನ್ನು ಲೈಕ್‌ ಮಾಡಿದ್ದಾರೆ. 

ನಿಖಿಲ್ ಲೇಟೆಸ್ಟ್‌ ನ್ಯೂಸ್:

ಇತ್ತೀಚಿಗೆ ನಿಖಿಲ್‌ ತಮ್ಮ ಸಹೋದರಿಯರ ಜೊತೆ ಸರಳವಾಗಿ ರಕ್ಷಾ ಬಂಧನ ಆಚರಿಸಿ ಫೋಟೋ ಶೇರ್ ಮಾಡಿಕೊಂಡಿದ್ದು ಅಣ್ಣ-ತಂಗಿ, ಅಕ್ಕ-ತಮ್ಮ ಭಾಂದವ್ಯದ ಬಗ್ಗೆ ತಮ್ಮದೇ ವಿಭಿನ್ನ ಶೈಲಿಯಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ ಹಾಗೂ ವರಮಹಾಲಕ್ಷ್ಮಿ ಹಬ್ಬದ ದಿನದಂದು ತಾಯಿ ಅನಿತಾ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಜೊತೆ ಟ್ರೆಡಿಷನಲ್‌ ಲುಕ್‌ನಲ್ಲಿ ಫೋಟೋ ಅಪ್ಲೋಡ್‌ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ ಹೀಗಿತ್ತು ನೋಡಿ!

View post on Instagram