ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ನಟಿಯಾಗಿ ಗುರುತಿಸಿಕೊಂಡಿದ್ದ ವರ್ಷಾ ಕಾಮೇಶ್ ಯಾರಿಗೆ ತಾನೇ ಗೊತ್ತಿಲ್ಲ? ಈಗಲೂ ಟಿವಿಯಲ್ಲಿ 'ನೆನಪಿರಲಿ' ಸಿನಿಮಾ ಪ್ರಸಾರವಾದರೆ ಎಲ್ಲರೂ ಮೊದಲ ಬಾರಿಯಂತೆ ವೀಕ್ಷಿಸುತ್ತಾರೆ. ತಮ್ಮ ಹೈಟ್‌ ಹಾಗೂ ಟ್ಯಾಲೆಂಟ್‌ಗೆ ಭೇಷ್ ಎಂದೆನಿಸಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಹಲವು ವರ್ಷಗಳ ಕಾಲ ಬಣ್ಣದ ಲೋಕದಿಂದ ದೂರ ಉಳಿಸಿದ್ದರು, ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅವರನ್ನು 'ಶಾಲಿವುಡ್‌'ನಲ್ಲಿ ನೋಡಿ ಜನರು ಖುಷಿ ಪಟ್ಟಿದ್ದಾರೆ. 

 

ಶಾಲಿವುಡ್?
ನಟಿ ಹಾಗೂ ಬಿಗ್ ಬಾಸ್‌ ಸ್ಪರ್ಧಿಯಾಗಿದ್ದ ಶಾಲಿನಿ ಯುಟ್ಯೂಬ್‌ನಲ್ಲಿ ಶಾಲಿವುಡ್‌ ಎಂಬ ಚಾನಲ್ ತೆರೆದಿದ್ದಾರೆ. ಹಾಸ್ಯ ವಿಡಿಯೋಗಳು, ರೆಸಿಪಿ ಹಾಗೂ ಬ್ಯೂಟಿ ಟಿಪ್ಸ್‌ ಶೇರ್ ಮಾಡಿಕೊಳ್ಳುತ್ತಾರೆ. ಈ ಚಾನಲ್‌ನಲ್ಲಿ 'Mom & Me' ಎಂದು ಸೀರಿಸ್‌ ಶುರು ಮಾಡಿದ್ದಾರೆ. ಅಮ್ಮ ಮಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂದು ತೋರಿಸಿದ್ದಾರೆ. ಇದರಲ್ಲಿ ವರ್ಷಾರನ್ನು ಮಗಳ ಪಾತ್ರದಲ್ಲಿ ನೋಡಬಹುದು. ಪ್ರತಿ ವಿಡಿಯೋ ರಿಲೀಸ್‌ ಆದ ದಿನ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಡೇಟ್ ಮಾಡುತ್ತಾರೆ. ಎಲ್ಲಾ ಸರಣಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 'ರಿಯಾಲಿಟಿಗೆ ತುಂಬಾ ಹತ್ತಿರವಾಗಿದೆ', 'ನಿಮ್ಮ ಆ್ಯಕ್ಟಿಂಗ್ ಸೂಪರ್' ಹಾಗೂ 'ಬೇಗ ದೊಡ್ಡ ಪರದೆ ಮೇಲೆ ಬನ್ನಿ ಮೇಡಂ' ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿರುತ್ತಾರೆ.

'ಪಾಪ ಪಾಂಡು' ಶಾಲಿನಿ 'ಶಾಲಿವುಡ್‌' ಹೇಗಿದೆ ನೋಡಿ! 

ಸೀರಿಸ್‌ನಲ್ಲಿ ವರ್ಷಾ ಅವರ ಹೊಸ ಲುಕ್ ನೋಡಿ ಕೆಲವರು ಆರೋಗ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ ವರ್ಷಾ ಅವರನ್ನು ಅನಾರೋಗ್ಯ ಕಾಡಿತ್ತು. ಚಿಕಿತ್ಸೆಯೂ ಪಡೆಯುತ್ತಿದ್ದಾರೆ. ಜೀವನದಲ್ಲಿ ಸಾಧನೆ ಮಾಡಬೇಕೆಂಬ ಛಲದಿಂದ ಮತ್ತೊಮ್ಮೆ ವೀಕ್ಷಕರನ್ನು ಮನೋರಂಜಿಸಲು ಸಿದ್ಧರಾಗಿ ಬಂದಿದ್ದಾರೆ. ವರ್ಷಾ ಅವರು ಬೇಗ ಗುಣಮುಖರಾಗಿ ತಮ್ಮ ಅಭಿಮಾನಿಗಳನ್ನು ಹೀಗೆ ಮನೋರಂಜಿಸುತ್ತಿರಲಿ ಎಂದು ಆಶಿಸುತ್ತೇವೆ. ಮುಂದಿನ ದಿನಗಳಲ್ಲಿ ರಿಲೀಸ್‌ ಆಗುವ ಅವರ  ಯೂಟ್ಯೂಬ್ ಸೀರಿಸ್‌ ವಿಡಿಯೋಗಳನ್ನು ನೋಡೋಣ.