ಕೊರೋನಾ ಗುಂಗಿನಿಂದ ಹೊರಬರಲು ನಿಮಗೆ ಒಂದು ಅವಕಾಶ ಇಲ್ಲಿದೆ.  ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಇದೇ ಮೊದಲ ಸಾರಿ ಭಾವಗೀತೆಯೊಂದಕ್ಕೆ ಜೀವ ತುಂಬಿದ್ದಾರೆ.

ಬೆಂಗಳೂರು(ಏ. 01) ಮೊಟ್ಟ ಮೊದಲು ಎಂಬಂತೆ ಸ್ವತಃ ಗಾಯಕರೂ ಆಗಿರುವ ರಘು ದೀಕ್ಷಿತ್ ಭಾವಗೀತೆ ಹಾಡಿ ರಂಜಿಸಿದ್ದಾರೆ. ಸದ್ಯ ಫೇಸ್ ಬುಕ್ ಅಲ್ಲಿ ಸಂಯೋಚಿತ ಅಂತ ಹೆಸರಾಂತ ಗಾಯಕರು ಹಾಡುಗಳ ಹಾಡ್ತಿದ್ದಾರೆ. ಸಂಗೀತ ನಿರ್ದೇಶಕ ಪ್ರವೀಣ್ ಡಿ ಅವರ ಪ್ರೀತಿಯ ಒತ್ತಾಯಕ್ಕೆ ರಘು ದೀಕ್ಷಿತ್ ಫಸ್ಟ್ ಟೈಮ್ ಭಾವ ಗೀತೆ ಹಾಡಿದ್ದೇನೆ ಎಂದು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ರಚನೆಯ ಈ ಭಾವ ಗೀತೆಯನ್ನ ಪ್ರವೀಣ್ ಡಿ ಸಂಯೋಜಿಸಿದ್ದಾರೆ. ರಘು ದೀಕ್ಷಿತ್ ಈ ಹಾಡನ್ನ ಹಾಡಿ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿ ಖುಷಿಪಟ್ಟಿದ್ದಾರೆ.

650 ಕೋಟಿ ಕೊಟ್ಟ ಸನ್ನಿ ಲಿಯೋನ್!

ಕೊರೋನಾದ ಈ ಗುಂಗಿನಿಂದ ಹೊರಗೆ ಬರಲು ನಿಮಗೊಂದು ಅವಕಾಶ ಇಲ್ಲಿದೆ. ರಘು ದೀಕ್ಷಿತ್ ಸ್ವರ ಮಾಧುರ್ಯದಲ್ಲಿ ಗಾಯನ ಆಸ್ವಾದಿಸಿ, ಮಿಸ್ ಮಾಡಿಕೊಳ್ಳಬೇಡಿ.

View post on Instagram