ಬೆಂಗಳೂರು (ಮಾ. 20): ಸುನೀಲ್‌ಕುಮಾರ್ ದೇಸಾಯಿ ಅವರ ‘ಉದ್ಘರ್ಷ’ ಸಿನಿಮಾ ಇದೇ ಮಾ.22 ರಂದು ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲೂ ಒಂದು ಸಾವಿರಕ್ಕೂ
ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ.

ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಇಬ್ಬರು ಬೇಬಿ ಡಾಲ್ಸ್

ಈ ಸಂತಸವನ್ನು ಹೇಳಿಕೊಂಡಿದ್ದು ಸ್ವತಃ ದೇಸಾಯಿ ಅವರೇ. ಕನ್ನಡದಲ್ಲೇ 500 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ವಿತರಕ ಜಾಕ್ ಮಂಜು ಅವರು ಈ ಚಿತ್ರವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಅನೂಪ್‌ಸಿಂಗ್ ಠಾಕೂರ್, ಕಬೀರ್‌ಸಿಂಗ್ ದುಹಾನ್, ಕಬಾಲಿಯ ಸಾಯಿ ಧನ್ಸಿಕಾ, ಶ್ರದ್ಧಾ ದಾಸ್, ಕನ್ನಡದ ಕಿಶೋರ್, ತಾನ್ಯಾ ಹೋಪ್ ಹೀಗೆ ಕಲಾವಿದರ ದೊಡ್ಡ ದಂಡೇ ಇದೆ.

ಸುಮಲತಾ ಬೆಂಬಲಿಸಿದ ನಟ ಯಶ್, ದರ್ಶನ್ ಗೆ ಹೊಸ ಟೆನ್ಶನ್!

ಕಲಾವಿದರಾಗಿ ಇವರೆಲ್ಲ ಎಲ್ಲ ಭಾಷೆಗಳಿಗೂ ಗೊತ್ತಿದ್ದಾರೆ. ಈ ಕಾರಣಕ್ಕೆ ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೇರೆ ಭಾಷೆಯ ಪ್ರೇಕ್ಷಕರ ಮುಂದೆಯೂ ದರ್ಶನ ಕೊಡುತ್ತಿದೆ. ‘ಉದ್ಘರ್ಷ ಸಿನಿಮಾ ನಾಲ್ಕು ಭಾಷೆಯಲ್ಲೂ ಏಕ ಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಬೇರೆ ಬೇರೆ ಸ್ಕ್ರೀನ್‌ಗಳಲ್ಲಿ ನಾಲ್ಕು ಭಾಷೆಯಲ್ಲೂ ಸಿನಿಮಾ ನೋಡಬಹುದು.

ಬೆಂಗಳೂರಿನಲ್ಲೂ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಕೂಡ ತೆರೆಗೆ ಬರಲಿದೆ. ಯಾಕೆಂದರೆ ಬೆಂಗಳೂರಿನಲ್ಲೂ ಬೇರೆ ಭಾಷಿಕರು ಇದ್ದಾರೆ. ಅವರನ್ನು ತಲುಪುವುದಕ್ಕಾಗಿಯೇ ಈ ಪ್ಲಾನ್ ಮಾಡಿಕೊಂಡಿದ್ದೇವೆ. ಆದರೆ, ಕನ್ನಡ ಸಿನಿಮಾವೊಂದು ಒಂದು ಸಾವಿರ ಸ್ಕ್ರೀನ್ ಗಳಲ್ಲಿ ತೆರೆಗೆ ಬರುತ್ತಿರುವುದು ಹೆಮ್ಮೆಯ ವಿಚಾರ. ಈ ಜನರೇಷನ್‌ಗೂ ಅಪ್‌ಡೇಟ್ ಆಗುವಂತೆ ಈ ಸಿನಿಮಾ ಮಾಡಲಾಗಿದೆ’ ಎಂಬುದು ಸುನೀಲ್ ಕುಮಾರ್ ದೇಸಾಯಿ ಅವರ ಮಾತು.