ಸಲಗ ಏ.15, ಕೋಟಿಗೊಬ್ಬ 3 ಏ.29, ಭಜರಂಗಿ 2 ಮೇ 14
ಬಹುತೇಕ ಸ್ಟಾರ್ ಸಿನಿಮಾಗಳ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಏಪ್ರಿಲ್ 15ರಂದು ಕೆ ಪಿ ಶ್ರೀಕಾಂತ್ ನಿರ್ಮಾಣದ, ದುನಿಯಾ ವಿಜಯ್ ನಿರ್ದೇಶನದ ‘ಸಲಗ’, ಏಪ್ರಿಲ್ 29ಕ್ಕೆ ಸೂರಪ್ಪ ಬಾಬು ನಿರ್ಮಾಣದ, ಶಿವ ಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’ ಹಾಗೂ ಮೇ.14ರಂದು ಜಯಣ್ಣ ನಿರ್ಮಾಣದ, ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಅಲ್ಲಿಗೆ ಎಲ್ಲಾ ಸ್ಟಾರ್ ಸಿನಿಮಾಗಳು ಸರತಿ ಸಾಲಲ್ಲಿ ಬಿಡುಗಡೆಗೆ ನಿಂತಂತೆ ಆಗಿದೆ. ಈಗಾಗಲೇ ‘ಪೊಗರು’ ಚಿತ್ರ ಫೆ.19ಕ್ಕೆ, ಮಾಚ್‌ರ್ 11ಕ್ಕೆ ‘ರಾಬರ್ಟ್’ ಹಾಗೂ ಏಪ್ರಿಲ್ 1ಕ್ಕೆ ‘ಯುವರತ್ನ’ ಚಿತ್ರಗಳು ಬಿಡುಗಡೆಯ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿವೆ.
ದುನಿಯಾ ವಿಜಯ್, ಸಂಜನಾ ಇನ್ ಏಷ್ಯಾನೆಟ್ ಸುವರ್ಣ ನ್ಯೂಸ್; ಹೇಗಿದೆ ಸಂಕ್ರಾಂತಿ ಸಡಗರ?
ವಿಶೇಷ ಎಂದರೆ ಏಪ್ರಿಲ್ ತಿಂಗಳಲ್ಲೇ ಮೂವರು ಸ್ಟಾರ್‌ಗಳು ತೆರೆ ಮೇಲೆ ಬರುತ್ತಿದ್ದಾರೆ. ‘ಯುವರತ್ನ’ ಮೂಲಕ ಪುನೀತ್‌ರಾಜ್‌ಕುಮಾರ್, ‘ಸಲಗ’ ಚಿತ್ರದಿಂದ ದುನಿಯಾ ವಿಜಯ್, ‘ಕೋಟಿಗೊಬ್ಬ 3’ ಚಿತ್ರದ ಮೂಲಕ ಸುದೀಪ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಎರಡ್ಮೂರು ವಾರಗಳ ಅಂತರದಲ್ಲಿ ಸ್ಟಾರ್‌ಗಳು ಹೀಗೆ ಒಂದೇ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಬರುತ್ತಿರುತ್ತಿರುವ ಯೋಜನೆ ನೋಡಿ ಆಯಾ ನಟರ ಅಭಿಮಾನಿಗಳಲ್ಲಿ ಕ್ರೇಜ್ ಮತ್ತಷ್ಟುಹೆಚ್ಚಾಗಿದೆ.
ಹೊಸ ರೆಕಾರ್ಡ್ ಮಾಡಿದ ಕೋಟಿಗೊಬ್ಬ 3 ಸಿನಿಮಾ..!
ಒಬ್ಬರಿಗೊಬ್ಬರು ಸ್ಪರ್ಧೆಗೆ ಬೀಳದಂತೆ ನಮ್ಮ ತಂಡದ ನಿರ್ಮಾಪಕರು ನಿರ್ಮಿಸಿರುವ ಚಿತ್ರಗಳನ್ನು ಚಿತ್ರಮಂದಿರಗಳಿಗೆ ತರುತ್ತಿದ್ದೇವೆ. ಹೀಗಾಗಿ ಮೊದಲೇ ಆಯಾ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದೇವೆ. - ಸೂರಪ್ಪ ಬಾಬು, ನಿರ್ಮಾಪಕ
2021ರ ಹೊಸ ವರ್ಷದ ಆರಂಭದ ನಾಲ್ಕು ತಿಂಗಳನ್ನು ಆರು ಮಂದಿಯ ಸ್ಟಾರ್ ನಟರ ಚಿತ್ರಗಳು ಕಬ್ಜ ಮಾಡಿವೆ.
ಭಜರಂಗಿ ಲೋಕಿ ಹೊಸ ಅವತಾರ; ಇದು ಪಕ್ಕಾ ಹೀರೋ ಮೆಟಿರಿಯಲ್!
ನಮ್ಮ ಸಕ್ರಿಯ ನಿರ್ಮಾಪಕರ ತಂಡದಿಂದ ಈ ವರ್ಷ ಮೊದಲು ಬಿಡುಗಡೆಯಾಗುತ್ತಿರುವ ಸಿನಿಮಾ ‘ಪೊಗರು’. ಈ ಚಿತ್ರದ ನಿರ್ಮಾಪಕ ಗಂಗಾಧರ್, ನಾಯಕ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಬೇಕು. ಆ ಮೂಲಕ ಮತ್ತಷ್ಟುದೊಡ್ಡ ಸಿನಿಮಾಗಳ ಬಿಡುಗಡೆಗೆ ಧೈರ್ಯ ತುಂಬಲಿ ಎಂದು ಆಶಿಸುತ್ತೇನೆ.- ಕೆ ಪಿ ಶ್ರೀಕಾಂತ್, ನಿರ್ಮಾಪಕ