ಹಾಸ್ಯ ನಟರಾದ ಸಾಧು ಕೋಕಿಲಾ, ಚಿಕ್ಕಣ್ಣ,ರವಿಶಂಕರ್ ಗೌಡ, ಕುರಿ ಪ್ರತಾಪ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅವರೆಲ್ಲರೂ ಒಂದೆಡೆ ಸೇರಿಕೊಂಡಿದ್ದಾರೆಂದರೆ, ಇದೊಂದು ಪಕ್ಕಾ ಕಾಮಿಡಿ ಚಿತ್ರ ಎನ್ನುವುದು ಗ್ಯಾರಂಟಿ. ಸದ್ಯಕ್ಕೆ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದ ಟ್ರೇಲರ್ ಅದಕ್ಕೆ ಸಾಕ್ಷಿ.

'ಲಕ್ಕಿ'ಗೂ ಮೊದಲು ದರ್ಶನ್ ಚಿತ್ರ ನಿರ್ಮಿಸಬೇಕಿತ್ತು: ರಾಧಿಕಾ ಕುಮಾರಸ್ವಾಮಿ!

ಎರಡೂವರೆ ನಿಮಿಷದ ಟ್ರೇಲರ್ ಸಖತ್ ಆಗಿದೆ. ಮೇಲ್ನೋಟಕ್ಕೆ ಹಾರರ್ ಕತೆ ಇರಬಹುದೆನ್ನುವ ಅನುಭವವಾದರೂ ಭರಪೂರ ಹಾಸ್ಯದ ಮೂಲಕವೇ ಕತೆ ಹೇಳುವ ಪ್ರಯತ್ನ ಟ್ರೇಲರ್‌ನಲ್ಲಿ ಕಾಣುತ್ತದೆ. ಇಡೀ ಸಿನಿಮಾ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಬಲ್ಲದು ಎನ್ನುವುದನ್ನು ಈ ಟ್ರೇಲರ್ ಹೇಳುತ್ತದೆ.ಯುವ ನಿರ್ದೇಶಕ ಮಂಜು ಸ್ವರಾಜ್ ಇದೇ ಮೊದಲು ಕಾಮಿಡಿ ಸಿನಿಮಾ ಮಾಡಿದ್ದಾರೆ.

ಇದು ಎಸ್.ವಿ.ಬಾಬು ನಿರ್ಮಾಣದ ಚಿತ್ರ. ನಟಿ ಶ್ರುತಿ ಹರಿಹರನ್ ಕೂಡ ಈ ಚಿತ್ರದ ಪ್ರಮುಖ ಆಕರ್ಷಣೆ. ಅವರೊಂದಿಗೆ ಕಾರುಣ್ಯ ರಾಮ್, ಗಿರಿ, ಶಿವರಾಂ, ಉಗ್ರಂ ಮಂಜು, ಕರಿಸುಬ್ಬು, ಬಾಲ ನಟಿ ಪ್ರಶ್ವಿತಾ ಕಾಣಿಸಿಕೊಂಡಿದ್ದಾರೆ. ಅಭಿಮಾನ್ ರಾಯ್ ಸಂಗೀತ ನೀಡಿದ್ದು, ಸುರೇಶ್ ಬಾಬು ಛಾಯಾಗ್ರಹಣ ಹಾಗೂ ಎನ್. ಎಂ. ವಿಶ್ವ ಸಂಕಲನ ಚಿತ್ರಕ್ಕಿದೆ. ನವೆಂಬರ್ 15ಕ್ಕೆ ತೆರೆಗೆ ಬರುತ್ತಿದೆ.