ಬೆಂಗಳೂರು (ಏ. 12): ಶಿವರಾಜ್ ಕುಮಾರ್ ಅಭಿನಯದ ಕವಚ ಸಿನಿಮಾ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಶಿವಣ್ಣ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಎಲ್ಲಾ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. 

ಕ್ರೌರ್ಯ ಮತ್ತು ಕರುಣೆಯ ‘ಕವಚ’!

ಇದೀಗ ಕವಚ ವಿದೇಶದಲ್ಲಿಯೂ ಅಬ್ಬರಿಸಲು ಸಿದ್ಧವಾಗಿದೆ. ಇಂದು ಅಮೇರಿಕಾದ 20 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಾಣುತ್ತಿದೆ. ಇದೇ ತಿಂಗಳ 28 ರಿಂದ ಕೆನಡಾದಲ್ಲಿಯೂ ಕಾರುಬಾರು ಶುರು ಮಾಡಲಿದೆ. 

ಬೆಂಗಳೂರಿನ ಇತಿ ಆಚಾರ್ಯ ಪಂಜಾಬಿ ಕತಿ!

ಮಲಯಾಳಂನಲ್ಲಿ ಬಂದ ‘ಒಪ್ಪಂ’ ಚಿತ್ರದ ರಿಮೇಕ್ ಇದು. ಮೊದಲ ಬಾರಿಗೆ ಶಿವಣ್ಣ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಅಪ್ಪ-ಮಗಳ ನಡುವಿನ ಸಂಬಂಧವನ್ನು ಅದ್ಭುತವಾಗಿ ತೆರೆದಿಟ್ಟಿದೆ ಈ ಸಿನಿಮಾ. ಜಿವಿಆರ್ ವಾಸು ಈ ಚಿತ್ರವನ್ನು ನಿರ್ದೇಶಿಸಿದ್ದು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇಶಾ ಕೊಪ್ಪಿಕರ್, ವಸಿಷ್ಠ ಸಿಂಹ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.