ಕೊನೆಗೂ ಒಂದು ದೊಡ್ಡ ಸಿನಿಮಾ ಮೂಲಕ ಪ್ರೇಕ್ಷ​ಕರ ಮುಂದೆ ಬರು​ತ್ತಿ​ದ್ದೀ​ರಿ?

ಹೌದು. ಇದು ನನ್ನ ಕನ​ಸಿನ ಸಿನಿಮಾ. ಇಲ್ಲಿ​ಯವ​ರೆಗೂ ಕನ್ನ​ಡ​ದಲ್ಲಿ ನಾಲ್ಕೈದು ಚಿತ್ರ​ಗ​ಳಲ್ಲಿ ನಟಿ​ಸಿ​ದ್ದೇನೆ. ಈಗ ‘ಕವ​ಚ ನನ್ನ ಕೆರಿ​ಯ​ರ್‌​ನಲ್ಲೇ ದೊಡ್ಡ ಸಿನಿಮಾ ಆಗ​ಲಿದೆ ಎನ್ನುವ ಭರ​ವಸೆ ಇದೆ. ಅದಕ್ಕೆ ಕಾರಣ ಇದು ಶಿವಣ್ಣ ನಾಯ​ಕ​ನಾಗಿ ನಟಿ​ಸಿರುವ ಬ್ಯೂಟಿ​ಫುಲ್‌ ಕಂಟೆಂಟ್‌ ಇರುವ ಸಿನಿಮಾ.

ಶಿವಣ್ಣ ಜತೆ ನಟಿ​ಸಿದ ಅನು​ಭವ ಹೇಗಿ​ತ್ತು?

ಮೊದಲ ಬಾರಿಗೆ ಅವರ ಜತೆ ಕಾಣಿ​ಸಿ​ಕೊಂಡಿದ್ದು. ಸ್ಟಾರ್‌ ನಟ. ಆದರೆ, ಸಿಂಪಲ್‌ ಮ್ಯಾನ್‌. ಇದೇ ನಾನು ಶಿವಣ್ಣ ಅವ​ರಲ್ಲಿ ಕಂಡು​ಕೊಂಡಿದ್ದು. ಹೊಸ ಕಲಾ​ವಿ​ದ​ರಿಗೆ ಸೆಟ್‌​ನಲ್ಲಿ ತುಂಬಾ ಸಲ​ಹೆ​ಗ​ಳನ್ನು ನೀಡು​ತ್ತಿ​ದ್ದರು. ಒಬ್ಬ ಹೀರೋ ಜತೆ ನಟಿ​ಸಿ​ದ್ದೇನೆ ಎನ್ನು​ವು​ದ​ಕ್ಕಿಂತ ಒಬ್ಬ ಅದ್ಭುತ ಕಲಾ​ವಿದ ಜತೆ ಅಭಿ​ನ​ಯಿ​ಸಿ​ರುವ ಖುಷಿ ಇದೆ. ‘ಕವ​ಚ’ ಚಿತ್ರದ ಮೂಲಕ ನಾನು ದೊಡ್ಡ ಕಲಾ​ವಿ​ದರ ಜತೆಗೆ ತೆರೆ ಹಂಚಿ​ಕೊಂಡಿದ್ದು ನನ್ನ ಅದೃಷ್ಟ. ಅಲ್ಲದೆ ಸೆಂಚುರಿ ಸ್ಟಾರ್‌ ಜತೆ ನಟಿ​ಸುವ ಪಾತ್ರ ಎಂದಾಗ ನಾನು ಹಿಂದೆ ಮುಂದೆ ನೋಡದೆ ಒಪ್ಪಿ​ಕೊಂಡೆ.

ಸರಿ, ಈ ಚಿತ್ರ​ದಲ್ಲಿ ನಿಮ್ಮ ಪಾತ್ರ​ವೇ​ನು?

ಇದು ಜಿ ವಿ ಆರ್‌ ವಾಸು ನಿರ್ದೇ​ಶ​ನದ ಸಿನಿಮಾ. ನಾನು ಇಲ್ಲಿ ಪಂಜಾಬಿ ಹುಡುಗಿ ಪಾತ್ರ​ದಲ್ಲಿ ಕಾಣಿ​ಸಿ​ಕೊಂಡಿ​ರುವೆ. ತುಂಬಾ ಮಾಡರ್ನ್‌ ಹುಡುಗಿ. ಈ ಜನ​ರೇ​ಷನ್‌ ಹುಡು​ಗಿ​ಯರ ಸಂಚಲ ಮನ​ಸ್ಸು​ಗ​ಳನ್ನು ಪ್ರತಿ​ನಿ​ಧಿ​ಸುವ ಪಾತ್ರ ನನ್ನದು. ಪ್ರತಿ​ಯೊ​ಬ್ಬ​ರಿಗೂ ಇದು ಕನೆಕ್ಟ್ ಆಗು​ತ್ತದೆ.

ನೀವು ಮೂಲ ಚಿತ್ರ ನೋಡಿ​ದ್ದೀರಾ? ಅಲ್ಲಿಗೂ ಇಲ್ಲಿಗೂ ಏನು ಬದ​ಲಾ​ವ​ಣೆ?

ನೋಡಿ​ದ್ದೇನೆ. ಮಲ​ಯಾಳಂ ‘ಒಪ್ಪಂ’ ಚಿತ್ರದ ಕತೆ​ ಕನ್ನಡ ಪ್ರೇಕ್ಷ​ಕ​ರಿಗೂ ಖಂಡಿತ ಇಷ್ಟ​ವಾ​ಗು​ತ್ತದೆ. ಆ ಕಾರ​ಣಕ್ಕೆ ಅದನ್ನು ಇಲ್ಲಿ ರೀಮೇಕ್‌ ಮಾಡ​ಲಾ​ಗು​ತ್ತಿದೆ. ಒಳ್ಳೆಯ ಸಿನಿಮಾ. ಕತೆ​ಯಲ್ಲಿ ಯಾವುದೇ ರೀತಿಯ ಬದ​ಲಾ​ವಣೆ ಇಲ್ಲ. ಕನ್ನ​ಡಕ್ಕೆ ತಕ್ಕಂತೆ ಪಾತ್ರ​ಗ​ಳನ್ನು ನಿರ್ದೇ​ಶ​ಕರು ಸಂಯೋ​ಜನೆ ಮಾಡಿ​ದ್ದಾರೆ. ಸಸ್ಪೆನ್ಸ್‌ ಜತೆ ಥ್ರಿಲ್ಲರ್‌ ಇರುವ ಒಂದು ಕ್ರೈಮ್‌ ಕತೆ.

ಈ ಚಿತ್ರದ ಮೇಲೆ ನಿಮ​ಗಿ​ರುವ ನಿರೀ​ಕ್ಷೆ​ಗ​ಳೇ​ನು?

ಕವಚ ಸಿನಿಮಾ ತೆರೆಗೆ ಬಂದ ಮೇಲೆ ಕನ್ನ​ಡ​ದಲ್ಲಿ ನನಗೆ ಹೆಚ್ಚು ಅವ​ಕಾ​ಶ​ಗಳು ಸಿಗ​ಲಿವೆ. ಯಾಕೆಂದರೆ ನನ್ನ ಪಾತ್ರ ಅಷ್ಟುಚೆನ್ನಾ​ಗಿದೆ. ಆ ನಂಬಿ​ಕೆ​ಯಲ್ಲೇ ಸಿನಿಮಾ ಬಿಡು​ಗ​ಡೆಯ ದಿನ​ವನ್ನು ಎದುರು ನೋಡು​ತ್ತಿ​ದ್ದೇನೆ.

ಕನ್ನ​ಡ​ದಲ್ಲಿ ನೀವು ನಟಿ​ಸಿದ ಸಿನಿ​ಮಾ​ಗಳು ಯಾವು​ವು?

‘ಧ್ವನಿ’ ಹಾಗೂ ‘ಡೀಲ್‌ ರಾಜ’ ಸಿನಿ​ಮಾ​ಗಳು. ಮೊದ​ಲನೇ ಚಿತ್ರಕ್ಕೆ ಚಿತ್ರೋ​ತ್ಸ​ವ​ಗ​ಳಲ್ಲಿ ಒಳ್ಳೆಯ ಪ್ರಶಂಸೆ ಸಿಕ್ಕಿತು. ಕಮ​ರ್ಷಿ​ಯ​ಲ್ಲಾ​ಗಿಯೂ ಬಿಡು​ಗಡೆ ಆಯಿ​ತು. ಇನ್ನೂ ಕೋಮಲ್‌ ಜತೆ ನಟಿ​ಸಿದ ‘ಡೀಲ್‌ ರಾಜ’ ಸಿನಿಮಾ ಪ್ರೇಕ್ಷ​ಕ​ರಿಗೆ ನನ್ನ ಕಮ​ರ್ಷಿ​ಯ​ಲ್ಲಾಗಿ ಪರಿ​ಚಯ ಮಾಡಿ​ಸಿತು. ಈಗ ರಾಧಿಕಾ ಕುಮಾ​ರ​ಸ್ವಾಮಿ ಹಾಗೂ ಜೆ ಡಿ ಚಕ್ರ​ವರ್ತಿ ಕಾಂಬಿ​ನೇ​ಷ​ನ್‌​ನಲ್ಲಿ ಬರು​ತ್ತಿ​ರುವ ‘ಕಾಂಟ್ರಾ​ಕ್ಟ್’ ಚಿತ್ರ​ದಲ್ಲಿ ನಟಿ​ಸುತ್ತಿ​ದ್ದೇನೆ. ಇದು ಬಹು ಭಾಷೆ​ಯಲ್ಲಿ ತಯಾ​ರಾ​ಗು​ತ್ತಿ​ರುವ ಸಿನಿಮಾ.

ಬೇರೆ ಭಾಷೆ​ಯಲ್ಲೂ ನಟಿ​ಸು​ತ್ತಿ​ದ್ದೀ​ರ​ಲ್ಲ?

ಹೌದು, ಈಗಷ್ಟೆಒಂದು ತೆಲುಗು ಸಿನಿಮಾ ಒಪ್ಪಿ​ಕೊಂಡು ಶೂಟಿಂಗ್‌​ನಲ್ಲಿ ತೊಡಗಿ​ಸಿ​ಕೊಂಡಿ​ದ್ದೇನೆ. ಮೆಗ​ಸ್ಟಾರ್‌ ಚಿರಂಜೀವಿ ಅವರ ಸಂಬಂಧಿ ಅಲ್ಲೂ ವಂಶಿ ನಾಯ​ಕ​ನಾಗಿ ನಟಿ​ಸು​ತ್ತಿ​ರುವ ಚಿತ್ರ. ಹೆಸರು ‘ಲಕ​ನ್‌ ಎಂಬುದು. ಹಾರರ್‌ ಕಾಮಿಡಿ ಸಿನಿಮಾ. ಇದರ ನಡು​ವೆ ತಮಿಳಿನ ಆಲ್ಬಂ ಸಾಂಗ್‌ ಹೆಜ್ಜೆ ಹಾಕಿ​ದ್ದೇನೆ. ಇನ್ನೂ ‘ಮಿಯಾ ಮೋರ್‌’ ಎನ್ನು​ವ ಇಂಗ್ಲಿಷ್‌ ಕಿರು ಚಿತ್ರ ಮಾಡಿ​ದ್ದೇನೆ. ಇದ​ನ್ನ ಕನ್ನ​ಡಕ್ಕೂ ಡಬ್‌ ಮಾಡುವ ಯೋಚನೆ ಇದೆ. ಮನು​ಷ್ಯರು ಮತ್ತು ಪರಿ​ಸ​ರದ ಸಂಬಂಧದ ಕತೆ ಇರುವ ಚಿತ್ರ​ವಿ​ದು.