ಪ್ರತಿಯೊಬ್ಬರ ಬದುಕಿನಲ್ಲಿ ನೋವು-ಸಾವು, ಕಷ್ಟ-ಸುಖ ಇರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ.  ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಆ ಒಂದು ಪಯಣದ ಕಥೆಯನ್ನು ಇಟ್ಟುಕೊಂಡು ಗುಲಾಲ್.ಕಾಂ ಎನ್ನುವ ಸಿನಿಮಾವೊಂದು ತೆರೆಗೆ ಬರುತ್ತಿದೆ. 

'ಬ್ರಹ್ಮಚಾರಿ' ಹುಡುಗಿಗೆ ಇವರ ಮೇಲೆ ಪ್ಯಾರ್‌ಗೆ ಆಗ್ಬುಟೈತೆ ಶಿವಾ..!

ದೇವರು ಪ್ರತಿಯೊಬ್ಬರಿಗೂ ಶಕ್ತಿ ಕೊಟ್ಟಿರುತ್ತಾನೆ. ಅದನ್ನು  ಗುರುತಿಸಲು ಗುರು ಅಂತ ಒಬ್ಬರು ಇರಬೇಕು. ಕೋಲಾರ, ಬೆಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ ಕಡೆಯಿಂದ ಐದು ಹುಡುಗರು ಗುರುವನ್ನು ಆದರ್ಶವಾಗಿಟ್ಟುಕೊಂಡು ಅವರೊಂದು ಆಲ್ಬಂ ರಚನೆ ಮಾಡುತ್ತಾರೆ. ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಮುಲಕ ಗುಲಾಲ್.ಕಾಂ ಕಥೆ ತೆರೆದುಕೊಳ್ಳುತ್ತದೆ. 

 

ಈ ಸಿನಿಮಾವನ್ನು ಶಿವು ಜಮಖಂಡಿ ನಿರ್ದೇಶನ ಮಾಡಿದ್ದಾರೆ. ತಬಲನಾಣಿ, ಬಿಗ್‌ಬಾಸ್‌ನ ದಿವಾಕರ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದಕಾಲಿ, ಮಲ್ಲೇಶ್ ಸೂರ್ಯ, ಶಂಕರ ಅಂಬಿಗೇರಿ, ಸೋನು ಪಾಟೀಲ್ ಸೇರಿದಂತೆ ಒಟ್ಟಾರೆ 120 ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ.

ತಬಲನಾಣಿ, ಬಿಗ್‌ಬಾಸ್‌ನ ದಿವಾಕರ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದಕಾಲಿ, ಮಲ್ಲೇಶ್ ಸೂರ್ಯ, ಶಂಕರ ಅಂಬಿಗೇರಿ, ಸೋನು ಪಾಟೀಲ್ ಸೇರಿದಂತೆ ಒಟ್ಟಾರೆ 120  ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ.