ವಿಶೇಷ ಅಂದರೆ ಈ ಪೋಸ್ಟರ್‌ನಲ್ಲಿ ರಕ್ಷಿತಾ ಕೂಡ ಎಣ್ಣೆ ಬಾಟಲ್ ಕೈಯಲ್ಲಿಡಿದು ನಿಂತಿದ್ದಾರೆ. ಜತೆಗೆ ರಾಣಾ ಹಾಗೂ ಚಿತ್ರದ ನಾಯಕಿ ರಚಿತಾ ರಾಮ್ ಕೂಡ ಇದ್ದಾರೆ. ಕ್ರೇಜಿ ಕ್ವೀನ್ ಹಾಗೂ ಡಿಂಪಲ್ ಕ್ವೀನ್ ಜತೆ ರಾಣಾ ಸಿಕ್ಕಾಪಟ್ಟೆ ಕಲರ್ ಫುಲ್ಲಾಗಿ ಕಾಣುತ್ತಿದ್ದಾರೆ.

#Ekloveya ಚಿತ್ರದ ಮೊದಲ ಟಿಕ್‌ಟಾಕ್‌; ಟೀಸರ್‌ ಹಾಡಿಗೆ ನೀವು ಕೈ ಜೋಡಿಸಿ!

ಮೋಷನ್ ಪೋಸ್ಟರ್ ಜತೆಗೆ ಚಿತ್ರದ ಟೀಸರ್ ಬಿಡುಗಡೆಯ ದಿನಾಂಕವನ್ನೂ ಪ್ರೇಮ್ ಅವರು ಪ್ರಕಟಿಸಿದ್ದಾರೆ. ಪ್ರೇಮಿಗಳ ದಿನಕ್ಕೆ ‘ಏಕ್ ಲವ್ ಯಾ’ ಚಿತ್ರದ ಟೀಸರ್ ಅನಾವರಣಗೊಳ್ಳುತ್ತಿದೆ. ಈಗಾಗಲೇ ಏ2 ಯೂಟ್ಯೂಬ್ ಚಾನಲ್
ನಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಂದಿದೆ. ಫೆ.14ರಂದು ಚಿತ್ರದ ಟೀಸರ್ ಕೂಡ ಬರಲಿದೆ ಎಂಬುದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ‘ಚಿತ್ರದಲ್ಲಿ ರಕ್ಷಿತಾ ಕೂಡ ಗೆಸ್ಟ್ ರೋಲ್ ಮಾಡಿದ್ದಾರೆ. ಇದು ಅವರ ಸೋದರನ ಮೊದಲ ಸಿನಿಮಾ. ಹೀಗಾಗಿ ಅವರೂ ಕಾಣಿಸಿಕೊಳ್ಳುತ್ತಾರೆ.

ಒಂದು ಹಾಡಿನಲ್ಲಿ ರಕ್ಷಿತಾ ಹೆಜ್ಜೆ ಹಾಕಿದ್ದಾರೆ. ನಮ್ಮ ನಿರೀಕ್ಷೆಯಂತೆ ಸಿನಿಮಾ ಚೆನ್ನಾಗಿ ಬಂದಿದೆ’ ಎಂಬುದು ಪ್ರೇಮ್ ಹೇಳುವ ಮಾತುಗಳು. ರಕ್ಷಿತಾ ಫಿಲಮ್ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. 

 

 
 
 
 
 
 
 
 
 
 
 
 
 

ಲವ್ ಫೇಲಾಯ್ತು ಅಂತ ಹುಡುಗ್ರು ಎಣ್ಣೆ ಹಾಕಿ‌ ಗೋಳಾಡಿದ್ದು ಓಲ್ಡ್ ವರ್ಸನ್.ಈಗ ಲವ್ ಫೇಲಾದ ಹುಡುಗೀರಿಗೆಲ್ಲಾ ಬರ್ತಿದೆ ನ್ಯೂ ಸೆನ್ಸೇಷನ್.ಇನ್ಮೇಲೆ ಹೆಣೈಕ್ಳು ಗುಂಡಾಕಿ ಹಾಡ್ತಾರೆ ಫೀಲಿಂಗ್ ಪದ.. ಇದು ಏಕ್ ಲವ್ ಯಾ ಮೋಷನ್ ಪೋಸ್ಟರ್.youtu.be/uZWZ-BwBEeYವ್ಯಾಲೆಂಟೈನ್ ಡೇಗೆ ಬರ್ತಿದೆ ಟೀಸರ್. @A2Music2 teaser onFeb14th 10Am. Love u all 🙏❤️

A post shared by Prem❣️s (@directorprems) on Feb 7, 2020 at 8:54pm PST