Asianet Suvarna News Asianet Suvarna News

50 ಲಕ್ಷ ಕಮಿಷನ್ ಆರೋಪ, ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟನೆ

ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಚಿತ್ರದ  ನಿರ್ದೇಶಕ ಎ ಪಿ ಅರ್ಜನ್‌ ವಿರುದ್ಧ ಕೇಳಿ ಬಂದಿರುವುದು ಸುಳ್ಳು ಆರೋಪ ಎನ್ನಲಾಗಿದೆ

Kannada Martin film VFX cheating case Director AP Arjun in trouble gow
Author
First Published Jul 26, 2024, 4:13 PM IST | Last Updated Jul 27, 2024, 8:37 AM IST

ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಚಿತ್ರದ   ನಿರ್ದೇಶಕ ಎ ಪಿ ಅರ್ಜನ್‌ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ನಿರ್ದೇಶಕರಿಂದಲೇ ನಿರ್ಮಾಪಕರಿಗೆ ಮೋಸವಾಗಿದೆ ಎಂದು ಸುದ್ದಿಯಾಗಿತ್ತು.  ಸುಮಾರು 50 ಲಕ್ಷ ಮೋಸ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಅವರು ಸಂಪೂರ್ಣ ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಪಿ ಅರ್ಜುನ್ ನನಗೂ ಮಾಧ್ಯಮದ ಮೂಲಕ ಗೊತ್ತಾಯ್ತು, 50 ಲಕ್ಷ, 75 ಲಕ್ಷ ಕಮಿಷನ್ ತಗೊಂಡಿದ್ದೀನಿ ಅಂತಾ ಆರೋಪಿಸಲಾಗುತ್ತಿದೆ. ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ದಾರೆ. ಸಿ.ಜಿ ಮೋಸದ ವಿಚಾರದಲ್ಲಿ ಇಬ್ಬರ ಮೇಲೆ ಆರೋಪ ಮಾಡಲಾಗಿದೆ. ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಆರೋಪಿಗಳು.. ಆ ಎಫ್ ಐ ಆರ್ ನಲ್ಲಿ ನನ್ನ ಹೆಸರು ಇರಲಿಲ್ಲ. ನನ್ನ ಮೇಲೆ ಸುಮ್ಮನೇ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಪೊಲೀಸರು ನನ್ನ ಕರೆಸಿ ವಿಚಾರಣೆ ನಡೆಸಿದ್ರು ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ  'ಮಾರ್ಟಿನ್' ಚಿತ್ರದ  ನಿರ್ಮಾಪಕರಿಗೆ ಮೋಸ ಆಗಿದೆ. CG ವರ್ಕ್ ಗಾಗಿ ಕೊಟ್ಟಿದ್ದ 2.5 ಕೋಟಿ ರೂ ಹಣದಲ್ಲಿ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡಲಾಗಿದೆ 

ಅಮೃತ್‌ ಭಾರತ್‌ ಯೋಜನೆಯಡಿ ರಾಜ್ಯದ 59 ರೈಲು ನಿಲ್ದಾಣಗಳು ಮೇಲ್ದರ್ಜೆಗೆ, 7559 ಕೋಟಿ ರೂ ಮೀಸಲು

ಡಿಜಿಟಲ್‌ ಟೆರೇನ್ ಕಂಪನಿಗೆ CG ವರ್ಕ್ ಮಾಡಿ ಕೊಡಲು ಹಣ ಸಂದಾಯ‌ ಮಾಡಿದ್ದ ಮಾರ್ಟಿನ್ ನಿರ್ಮಾಪಕ,  ಆದರೆ ದುಡ್ಡು ಪಡೆದು ಕೆಲಸ ಮಾಡದೆ ಟೆರೇನ್ ಸಂಸ್ಥೆ ವಂಚನೆ ಮಾಡಿದೆ ಎಂದು  ಸುನಿಲ್ ರೆಡ್ಡಿ ಮತ್ತು ಸತ್ಯರೆಡ್ಡಿ ಎಂಬುವವರ ಮೇಲೆ‌ ದೂರು ದಾಖಲಾಗಿದೆ.

ಸಿನಿಮಾ ಕಂಪ್ಲೀಟ್ ಆಗೋ ನಿಟ್ಟಿನಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಗೌಪ್ಯತೆ ಕಾಪಾಡಿದ್ದರು.  ಇದೀಗ ಸತ್ಯರೆಡ್ಡಿ ಹಾಗೂ ಸುನಿಲ್ ರೆಡ್ಡಿ ಹೆಸರು FIRನಲ್ಲಿ ಪ್ರಸ್ತಾಪಿಸಿ, ಮೂರನೇ ಆರೋಪಿ ಇತರರು  ಎಂದು ಉಲ್ಲೇಖಿಸಿದ್ದು,  ಆ ಇತರರಲ್ಲಿ ಯಾರಿದ್ದಾರೆ ಎನ್ನುವ ಪ್ರಶ್ನೆ ಅಂತೂ ಮೂಡಿದೆ.

ಸದನದಲ್ಲಿ ತುಳುವಿನಲ್ಲಿ ಸುನಿಲ್‌-ಖಾದರ್‌ ಚರ್ಚೆ, ಯಾವ ಭಾಷೆ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಸ್ವೀಕರ್ ಉತ್ತರವಿದು

ಸತೀಶ್ ಮತ್ತು ಸುನೀಲ್ ಅವರನ್ನು ಇತ್ತೀಚೆಗೆ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ  ಕಮೀಷನ್ ನೀಡಿರೋದಾಗಿ ಆರೋಪಿ ಸುನಿಲ್ ರೆಡ್ಡಿ ಹೇಳುತ್ತಿದ್ದಾರೆ. ವಿಎಫ್‌ಎಕ್ಸ್ ಕೆಲಸವನ್ನು ತಮಗೆ ಹಂಚಿಕೆ ಮಾಡಲು ಇಬ್ಬರಿಂದ 50 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂದು ಸುನಿಲ್ ಆರೋಪಿಸಿದ್ದಾರಂತೆ.  ಅಕ್ಟೋಬರ್ 11ಕ್ಕೆ ವಿಶ್ವದಾದ್ಯಂತ 'ಮಾರ್ಟಿನ್' ಬಿಡುಗಡೆಗೆ ತಯಾರಿ ನಡೆದಿದೆ.  ಈ ಹಿಂದೆಯೂ ಮಾರ್ಟಿನ್ ಚಿತ್ರತಂಡದಲ್ಲಿ ಮನಸ್ತಾಪಗಳಿವೆ ಎಂಬ ಗುಲ್ಲು ಎದ್ದಿತ್ತು. ಹೀಗಾಗಿ ನಿರ್ಮಾಪಕ ಉದಯ್ ಮೆಹ್ತಾ  ಮತ್ತು ತಂಡದ ನಡುವಿನ ಭಿನ್ನಾಭಿಪ್ರಾಯದ ಹೊಗೆ ಈಗ ಬಹಿರಂಗವಾಗುತ್ತಿದೆ.

ನಟ ಧ್ರುವ ಸರ್ಜಾ ನಾಯಕನಾಗಿರುವ ಮಾರ್ಟಿನ್ ಚಿತ್ರಕ್ಕೆ  ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್‌ ನಾಯಕಿಯರಾಗಿದ್ದಾರೆ. ಎಪಿ ಅರ್ಜುನ್‌ ನಿರ್ದೇಶಿಸಿ, ಉದಯ್‌ ಮೆಹ್ತಾ ನಿರ್ಮಿಸಿರುವ, ಅರ್ಜುನ್‌ ಸರ್ಜಾ ಕತೆ ಬರೆದಿರುವ ಈ ಚಿತ್ರದ ಟೀಸರ್‌ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಕ್ವಾಲಿಟಿ ಮೇಕಿಂಗ್‌, ಭರ್ಜರಿ ಆ್ಯಕ್ಷನ್‌, ತಾಂತ್ರಿಕತೆಯ ಮೆರಗು, ಧ್ರುವ ಸರ್ಜಾ ಅವರ ಔಟ್‌ ಲುಕ್‌ನಿಂದ ಟೀಸರ್‌ ಬೆಂಕಿ ಕೆಂಡದಂತೆ ಮೂಡಿಬಂದಿತ್ತು. ಕಳೆದ ಫ್ರೆಬ್ರವರಿಯಲ್ಲಿ ‘ಮಾರ್ಟಿನ್‌’ ಟೀಸರ್‌ 60 ಮಿಲಿಯನ್‌ ಹಿಟ್ಸ್‌ ಪಡೆದು ಟ್ರೆಂಡಿಂಗ್‌ ನಲ್ಲಿತ್ತು.

Latest Videos
Follow Us:
Download App:
  • android
  • ios