Asianet Suvarna News Asianet Suvarna News

ಚಿ ।। ಸೌ ।। ಪಾರ್ವತಿ & ಚಿ ।। ರಾ ।। ಮುತ್ತುರಾಜ್ ವಿವಾಹದ ಆಹ್ವಾನ ಪತ್ರಿಕೆ ನೋಡಿದ್ರಾ ?

ಡಾ ರಾಜ್ ಕುಮಾರ್ ಈ ಹೆಸರಿಗೊಂದು ಶಕ್ತಿಯಿದೆ,ನಿಸ್ವಾರ್ಥ ಭಕ್ತಿಯಿದೆ. ಅಣ್ಣಾವ್ರು ಅನ್ನೋ ಶಬ್ದದ ಜೊತೆ ಕನ್ನಡಿಗರಿಗೆ ದೈವಿಕ , ಭಾವನಾತ್ಮಕ ಸಂಬಂಧದ ಕೊಂಡಿಯೊಂದು ಬೆಸೆದುಕೊಂಡಿದೆ .ಇಂತಹ ಮೇರು ವ್ಯಕ್ತಿತ್ವದ ಒಬ್ಬ ವ್ಯಕ್ತಿಯನ್ನು ಪಡೆದ ಕರುನಾಡೇ ಧನ್ಯ , ಕನ್ನಡಿಗರ ಪುಣ್ಯ . ಮುತ್ತುರಾಜರ ಜನ್ಮ ದಿನದ ಈ ಸಂದರ್ಭದಲ್ಲಿ  ಅವರ ಮದುವೆ ಬಗೆಗಿನ ವಿಶೇಷವಾದ ಸಂಗತಿ ಇಲ್ಲಿದೆ ನೋಡಿ.. 

Kannada late actor Dr Rajkumar Parvathamma wedding invitation
Author
Bangalore, First Published Apr 24, 2020, 2:39 PM IST

ಡಾ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಡಾ ರಾಜ್ ಅವರ ಬದುಕಿನ ವಿಶೇಷ ಘಳಿಗೆಯ ಒಂದು ಅಪರೂಪದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.1953 ರ ಜೂನ್ 25 ರಂದು ನಂಜಂಗೂಡಿನಲ್ಲಿ ನೆರವೇರಿದ ಮುತ್ತುರಾಜ್ (ಡಾ ರಾಜ್)  ಹಾಗು ಪಾರ್ವತಮ್ಮನವರ ವಿವಾಹ ಮಹೋತ್ಸವದ ಅಪರೂಪದ ಆಹ್ವಾನ ಪತ್ರಿಕೆ ಇದೀಗ ಲಭ್ಯವಾಗಿದೆ ನೋಡಿ . 

ಕನ್ನಡದ ಖ್ಯಾತ ಸಾಹಿತಿ ಅನಕೃ ಅವರ 'ಕನ್ನಡಕ್ಕೆ ಅನೇಕರಿದ್ದಾರೆ ಆದರೆ ನನಗಿರುವುದೊಂದೇ ಕನ್ನಡ' ಎಂಬ ಮಾತಿನಂತೆ ಅಕ್ಷರಶ ಬದುಕಿ ತೋರಿಸಿದವರು ಡಾ . ರಾಜ್ ಕುಮಾರ್ . ತಮ್ಮ ಇಡೀ ಜೀವನವನ್ನು ಕನ್ನಡಕ್ಕೋಸ್ಕರ ಮೀಸಲಿಟ್ಟ ಅಪರೂಪದ ನಟ .ಆಡುಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರಗಳಿಲ್ಲ ಎಂಬಂತೆ ತಾವು ಪೋಷಿಸುತಿದ್ದ ಪಾತ್ರಗಳಿಗೆ ಜೀವ ತುಂಬಿ ಸಮಾಜಕ್ಕೆ ಮಾನವೀಯ  ಮೌಲ್ಯಗಳ ಸಂದೇಶವನ್ನು ತಮ್ಮ ಸಿನಿಮಾಗಳ ಮೂಲಕ ರವಾನಿಸುತ್ತಿದ್ದರು .  

ಡಾ.ರಾಜ್‌ ಹುಟ್ಟುಹಬ್ಬ; ಅಣ್ಣಾವ್ರೇಕೆ ನಮ್ಮ ಮನಸ್ಸಲ್ಲಿ ಉಳಿಯುತ್ತಾರೆ!

ವಿದ್ಯಾಭ್ಯಾಸ ಕಡಿಮೆ ಆದರೂ ಬದುಕಿನಲ್ಲಿ ಶಿಕ್ಷಣ ಒಂದು ಭಾಗವಷ್ಟೇ ಅದಕ್ಕಿಂತ ಮಿಗಿಲಾಗಿ ನಮ್ಮಲಿರುವ  ವಿನಯ, ವಿಧೇಯತ , ಸರಳತ , ಸಜ್ಜನಿಕೆ ಮತ್ತು ವಿಶಿಷ್ಟ ಪ್ರತಿಭೆ ಎಂದಿಗೂ ನಮ್ಮ ಕೈಬಿಡುವುದಿಲ್ಲ ಎನ್ನುವುದನ್ನು ಸಾಕ್ಷತ್ ನಿರೂಪಿಸಿದ ದೇವತಾಮನುಷ್ಯ ಡಾ ರಾಜ್ ಕುಮಾರ್. ವಿಶೇಷವೆಂದರೆ ದೊಡ್ಮನೆಯೆಂದೇ ಹೆಸರುವಾಸಿಯಾಗಿರುವ ಇವರ ಕುಟುಂಬದವರೆಲ್ಲರೂ ದೊಡ್ಡವರ ಹಾದಿಯನ್ನೇ ಅನುಸರಿಸುತ್ತಿದ್ದಾರೆ . 

ಹಣ ಮತ್ತು ಗುಣದ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಸುತ್ತಾ ಇವೆರಡರ ನಡುವೆ  ನಾವು ಹೇಗೆ ಬದುಕಬೇಕೆಂಬ ಅರಿವು ಮೂಡಿಸಿದ್ದಾರೆ . ಅಣ್ಣಾವ್ರು ಸಮಾಜಮುಖಿ ಕೆಲಸಗಳನ್ನು ಎಂದೂ ಪ್ರಚಾರಕ್ಕಾಗಿ   ಬಳಸಿಕೊಳ್ಳುತ್ತಿರಲಿಲ್ಲ ಮತ್ತು ಅವರು ಬಲಗೈಲಿ ಮಾಡಿದ ಸಹಾಯ ಎಡಗೈಗೆ ತಿಳಿಯುತ್ತಿರಲಿಲ್ಲ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.  ಸಾಲು ಸಾಲು ಸಿನಿಮಾಗಳಿಂದ ಸದಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ  ರಾಜ್ ರವರು ಕುಟುಂಬದ ಜವಾಬ್ಧಾರಿ ವಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ವ್ಯಾವಹಾರಿಕವಾಗಿ ತುಂಬಾ ಮೋಸ ಹೋಗುತ್ತಿದ್ದರು ಮತ್ತು ಅವರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದವರೇ ಹೆಚ್ಚು ಎನ್ನುವ ಮಾತಿದೆ ಆದರೆ ಪಾರ್ವತಮ್ಮನವರು ಅಣ್ಣಾವ್ರ ಜೀವನಕ್ಕೆ ಕಾಲಿಟ್ಟ ಮೇಲೆ ಅದೆಲ್ಲದರ ಸಂಪೂರ್ಣ ಜವಾಬ್ಧಾರಿ ವಹಿಸಿಕೊಂಡು ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಂದು ಸ್ತ್ರೀಶಕ್ತಿಯ ಬೆಂಬಲ ಇರುತ್ತದೆ ಎನ್ನುವುದನ್ನು ನಿಸಂದೇಹವಾಗಿ ಸಾಬೀತು ಮಾಡಿದ್ದಾರೆ . 

Kannada late actor Dr Rajkumar Parvathamma wedding invitation

20 ಕ್ಕೂ ಹೆಚ್ಚು ಕನ್ನಡ  ಸಿನಿಮಾಗಳಲ್ಲಿ ಅಭಿನಯಿಸಿ ಎಷ್ಟೇ ಎತ್ತರಕ್ಕೆ ಬೆಳಿದಿದ್ದರು ನಾನೊಬ್ಬ ನಟನೆಯ ವಿದ್ಯಾರ್ಥಿ ಎಂದು ಹೇಳುತ್ತಿದ್ದರಂತ.  ಇತ್ತೀಚಿಗೆ ರಾಘವೇಂದ್ರ ರಾಜ್ ಕುಮಾರ್ ಅವರು ಚಿ. ಉದಯ ಶಂಕರ್ ಮತ್ತು ರಾಜಕುಮಾರ ಅವರ ಮಾತುಕತೆಯ ಆಡಿಯೋ ಕ್ಲಿಪ್ ಒಂದನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದರು .  ಅದರಲ್ಲಿ ಉದಯ್ ಶಂಕರ್ ಅವರು ನೀವು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತೀರಿ ಅದರ ಹಿಂದಿನ ರಹಸ್ಯವೇನು ಎಂದು ಕೇಳಿದಾಗ ಯಾವುದೋ ಒಂದು ಕಾಣದ ಶಕ್ತಿ ನಮ್ಮನ್ನು ಆ ಪಾತ್ರದ ಒಳಗೆ ನೂಕುತ್ತದೆ ಅಷ್ಟೇ ಅದು ಹೇಗೆ ಎನ್ನುವುದು ವಿವರಿಸುವುದು ಕಷ್ಟ  ನಾನು ಪ್ರತಿದಿನ ಶೂಟಿಂಗ್ ಹೋಗುವಾಗಲೂ ಭಯದಿಂದಲೇ ಹೋಗುತ್ತೇನೆ ಎಂದು ಹೇಳಿದ್ದರು . 

ಡಾ. ರಾಜ್‌ ಮಾಡಿದ ಸಹಾಯವನ್ನು ಸ್ಮರಿಸಿದ ಅಭಿಮಾನಿ..!

ವೃತ್ತಿ ರಂಗಭೂಮಿಯಿಂ , ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ , ನಾಯಕನಾಗ , ಗಾಯಕನಾಗಿ ಅಪಾರ ಅಭಿಮಾನಿ ದೇವರ ಬಳಗವನ್ನು ಹೊಂದಿರುವ ರಾಜ್ ರವರು ಕೊನೆಯವರೆಗೂ ರಾಜಕೀಯದಿಂದ ದೂರ ಉಳಿದವರು. ಪ್ರಶಸ್ತಿಗಳು, ಬಿರುದುಗಳು ಅವರನ್ನು ಅದೆಷ್ಟೇ ಹುಡುಕಿಕೊಂಡು ಬಂದರೂ ಅದೆಲ್ಲವನ್ನು ಮೀರಿದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ತಾನು ಬೆಳೆದು ನಿಂತವರು ಈ ಮುತ್ತುರಾಜ್ . 

ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಹೀಗೆ ಎಲ್ಲಾ ರೀತಿಯ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಿದ್ದರು .ತಮ್ಮ ಸಿನಿಮಾ , ಪಾತ್ರಗಳ ಮೂಲಕ ಸಮಾಜ ಬದಲಾವಣೆಗೆ ನಾಂದಿ  ಹಾಡಿದವರು ಅಣ್ಣಾವ್ರು ಅದಕ್ಕೆ ಉತ್ತಮ ಉದಾಹರಣೆ ಅಂದ್ರೆ ಬಂಗಾರದ ಮನುಷ್ಯ ಎಂಬ ಸಿನಿಮಾ. ಈ ಸಿನಿಮಾ ನೋಡಿ ಆಗಿನ ಕಾಲಕ್ಕೆ ಬಹಳಷ್ಟು ಯುವಜನರು ಕೃಷಿಯತ್ತ ಮುಖಮಾಡಿದರು ಎಂಬುದು ಈಗ ಇತಿಹಾಸ . ಈಗಿನ ಅದೆಷ್ಟೋ ಸ್ಟಾರ್ ನಟರು ಅಭಿನಯಿಸಿದರೇ ಅಣ್ಣಾವ್ರ ಥರ ಅಭಿನಯಿಸಬೇಕು, ಈ ಪಾತ್ರಕ್ಕೆ ನನಗೆ ಅಣ್ಣಾವ್ರೇ ಸ್ಪೂರ್ತಿ ಎಂದು ಹೇಳುತ್ತಲೇ ಇರುತ್ತಾರೆ ಆ ರೀತಿಯ ಪ್ರಭಾವ ಬೀರಿ ಚಂದನವನದ ಅಥವಾ ಕನ್ನಡದ ರಾಯಭಾರಿಯಾಗಿದ್ದಾರೆ. 

ಆ ಗತ್ತು, ಗಾಂಭೀರ್ಯ, ಸರಳತೆ, ಸೌಜನ್ಯ, ಸಜ್ಜನಿಕೆ, ಮುಗ್ಧತೆ ಇವೆಲ್ಲದರ ಏಕತಾ ಮೂರ್ತಿ ನಟ ಸಾರ್ವಭೌಮ ಡಾ ರಾಜ್ ಕುಮಾರ್.

ಚಿತ್ರರಂಗ ಎಂದೂ ಮರೆಯದ ಮಾಣಿಕ್ಯ ಡಾ. ರಾಜ್; ಅವರಿಗಿದೋ ಫೋಟೋ ನಮನ!

ಕೊನೆಯದಾಗಿ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಈ ಸವಿನೆನಪಲ್ಲಿ ನಾವೆಲ್ಲರೂ ಯಾವಾಗಲೂ ಹೇಳೋ ಆ ಒಂದು ಮಾತು ನೆನೆಯೋಣ 'ಅಣ್ಣಾವ್ರ ಬಾಯಲ್ಲಿ ಕನ್ನಡ ಕೇಳೋದೇ ಚೆಂದ' ಈ ಮಾತನ್ನ ನೀವೂ ಒಪ್ತಿರಾ ಅಲ್ವಾ ? 

Follow Us:
Download App:
  • android
  • ios