ರಂಗಿತರಂಗ ನಿರ್ಮಾಪಕ ಪ್ರಕಾಶ್‌ ನಿರ್ಮಾಣದ ಮತ್ತೊಂದು ಹಾರರ್‌ ಸಿನಿಮಾ ಮಾಡುತ್ತಿದ್ದಾರೆ. ದಿಯಾ ಖ್ಯಾತಿಯ ಖುಷಿ ಹಾಗೂ ಪ್ರೇಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಒಂದು ವಿಭಿನ್ನವಾದ ‘ಸ್ಪೂಕಿ ಕಾಲೇಜು’ ಎನ್ನುವ ಶೀರ್ಷಿಕೆಯ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ‘ರಂಗಿತರಂಗ’ ಹಾಗೂ ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್‌ ಕೆ ಪ್ರಕಾಶ್‌ ನಿರ್ಮಾಣದ ಸಿನಿಮಾ ಇದು. 103 ವರ್ಷ ಇತಿಹಾಸ ಇರುವ ಧಾರವಾಡದ ಕಾಲೇಜಿನಲ್ಲಿ ನವೆಂಬರ್‌ ಮೊದಲ ವಾರದಿಂದ ಇದಕ್ಕೆ ಚಿತ್ರೀಕರಣ ಶುರುವಾಗಲಿದೆ. ನಂತರ ದ್ವಿತೀಯ ಹಂತದ ಚಿತ್ರವು ದಾಂಡೇಲಿ ದಟ್ಟಅರಣ್ಯದಲ್ಲಿ ನಡೆಯಲಿದೆ.

ಧಾರಾವಾಹಿಯಿಂದ ಹೊರಬಿದ್ದ ನಟ; 'ಮತ್ತೆ ವಸಂತ' ಕಥೆ ನಾಯಕ ಯಾರು?

ಹಾರರ್‌, ಕಾಮಿಡಿ ಹಾಗೂ ಸೈಕಲಾಜಿಕಲ… ಥ್ರಿಲ್ಲರ್‌ ಕತೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಭರತ್‌ ಜಿ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರಾದ ಯೋಗರಾಜ್‌ ಭಟ್‌, ರಮೇಶ್‌ ಅರವಿಂದ್‌ ಅವರ ಬಳಿ ಕೆಲಸ ಮಾಡಿರುವ ಭರತ್‌ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ.

View post on Instagram

‘ಪ್ರೀಮಿಯರ್‌ ಪದ್ಮಿನಿ’ ಚಿತ್ರದಲ್ಲಿ ಅಭಿನಯಿಸಿದ್ದ ವಿವೇಕ್‌ ಸಿಂಹ, ‘ದಿಯಾ’ ಚಿತ್ರದ ನಾಯಕಿ ಖುಷಿ ರವಿ ಹಾಗೂ ಪೃಥ್ವಿ ರಾಷ್ಟಕೂಟ ಅವರು ‘ಸ್ಪೂಕಿ ಕಾಲೇಜು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಪ್ರಕಾಶ್‌ ಬೆಳವಾಡಿ, ಹನುಮಂತೇ ಗೌಡ, ರಘು ರಮಣಕೊಪ್ಪ, ವಿಜಯ… ಚೆಂಡೂರ್‌, ಎಂ.ಕೆ.ಮಠ, ಅಶ್ವಿನ್‌ ಹಾಸನ್‌ ಮುಂತಾದವರು ಈ ಚಿತ್ರದಲ್ಲಿ ಇದ್ದಾರೆ. ಮನೋಹರ್‌ ಜೋಶಿ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ.