ಸಾಕುನಾಯಿಗೆ ಮುತ್ತಿಟ್ಟ ನಟಿ ಕೃತಿ ಕರಬಂಧ, ಎಲ್ಲೆಡೆ ವೈರಲ್ ಆಗುತ್ತಿರುವ ಫೋಟೋಗೆ ನೆಟ್ಟಿಗರು ಮಾಡಿದ ಕಾಮೆಂಟ್‌ ನೀವು ನೋಡಲೇಬೇಕು... 

ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಕೃತಿ ವೃತ್ತಿ ಜೀವನದಲ್ಲಿ ಬಿಗ್ ಹಿಟ್ ತಂದುಕೊಟ್ಟ ಸಿನಿಮಾವೇ 'ಗೂಗ್ಲಿ'. ರಾಕಿಂಗ್ ಸ್ಟಾರ್‌ ಯಶ್‌ಗೆ ಜೋಡಿಯಾಗಿ ಕಾಣಿಸಿಕೊಂಡು ಈ ಸಿನಿಮಾ ಯಶಸ್ವಿಯಾಗಿ 150 ದಿನ ಪ್ರದರ್ಶನ ಕಂಡಿತ್ತು ಅಲ್ಲದೇ ಈ ಸಿನಿಮಾದ ಎಲ್ಲಾ ಹಾಡುಗಳು ಸೂಪರ್‌ ಹಿಟ್‌ ಲಿಸ್ಟ್ ಗೆ ಸೇರಿವೆ. 

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೃತಿ ಇನ್‌ಸ್ಟಾಗ್ರಾಂನ ಪೋಸ್ಟ್ ಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣವೇ ಅವರ ಸಾಕು ನಾಯಿ...

ಯಶ್‌ ಚಿತ್ರದ ನಾಯಕಿಗೂ ಕೊರೋನಾ ಕಾಟ; 14 ದಿನ ಕ್ವಾರಂಟೈನ್‌ ಅನಿವಾರ್ಯ! 

ಕೃತಿ ಪೋಸ್ಟ್:

ಹಸ್ಕಿ ಜಾತಿಯ ನಾಯಿಯನ್ನು ಸಾಕಿರುವ ಕೃತಿ ಅದರ ಜೊತೆ ಲಿಪ್‌ಲಾಕ್‌ ಮಾಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. 'ಇದು ನಿಜವಾದ ಪ್ರೀತಿ' ಎಂದು ಬರೆದುಕೊಂಡಿದ್ದಾರೆ. 3 ಲಕ್ಷ 45 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಪಡೆದುಕೊಂಡಿರುವ ಈ ಫೋಟೋಗೆ ನೆಟ್ಟಿಗರು ವಿಚಿತ್ರವಾದ ಕಾಮೆಂಟ್‌ ಮಾಡಿದ್ದಾರೆ.

View post on Instagram

'ಇದು ನಿಜವಾದ ಪ್ರೀತಿ ಆದರೆ ಮದುವೆ ಆಗುವುದಿಲ್ವಾ?', ನಿಮ್ಮ ಮಾಜಿ ಪ್ರಿಯಕರ ಕೈ ಕೊಟ್ಟ ಕಾರಣಕ್ಕೆ ಇದು ರಿಯಲ್ ಲವ್‌ ಅಲ್ಲ', ಹಾಗೂ 'ನಿಮ್ಮ ಶ್ವಾನ ತುಂಬಾನೇ ಲಕ್ಕಿ' ಹೀಗೆ ವಿಭಿನ್ನ ರೀತಿಯಲ್ಲಿ ಜನ ಎಂದು ಕಾಮೆಂಟ್‌ ಮಾಡಿದ್ದಾರೆ. 

7 ವರ್ಷ ಪೂರ್ಣಗೊಳಿಸಿದ ಗೂಗ್ಲಿ:

ಪವನ್ ಒಡಿಯಾರ್ ನಿರ್ದೇಶನ ಮತ್ತು ಜಯಣ್ಣ ನಿರ್ಮಾಣದಲ್ಲಿ ಮೂಡಿ ಬಂದ ಗೂಗ್ಲಿ ಸಿನಿಮಾ ಜುಲೈ 19ಕ್ಕೆ ರಿಲೀಸ್‌ ಆಗಿ 7 ವರ್ಷಗಳನ್ನು ಪೂರೈಯಿಸುತ್ತದೆ. ಅದರ ನೆನಪಿಗೆ ಎಂದು ಚಿತ್ರೀಕರಣ ವಿಡಿಯೋವನ್ನು ಕೂಡ ಶೇರ್ ಮಾಡಿದ್ದರು.

View post on Instagram

ಸುಶಾಂತ್ ಪರ ನಿಂತ ಕೃತಿ:

ಅಗಲಿದ ನಟ ಸುಶಾಂತ್ ಸಿಂಗ್ ಕೊನೆ ಸಿನಿಮಾ 'ದಿಲ್‌ ಬೆಚಾರ'ವನ್ನು ಎಲ್ಲರೂ ತಪ್ಪದೆ ನೋಡಬೇಕೆಂದು ಕೃತಿ ಪ್ರತಿ ದಿನವೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಚಿತ್ರದ ಚಿಕ್ಕ ವಿಡಿಯೋ ಶೇರ್ ಮಾಡಿ 'ಗೆಳೆಯರೇ ನಾವೆಲ್ಲಾ ಈ ಸಿನಿಮಾವನ್ನು ತಪ್ಪದೆ ನೋಡಬೇಕು. ಸುಶಾಂತ್ ಕೊನೆಯ ಸಿನಿಮಾವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು' ಎಂದು ಬರೆದಿದ್ದರು.

View post on Instagram