ಸ್ಯಾಂಡಲ್‌ವುಡ್‌ ರಾಕಿಂಗ್ ಕಪಲ್ ಯಶ್‌ ಮತ್ತು ರಾಧಿಕಾ ಪಂಡಿತ್ ಎಷ್ಟು ಫೇಮಸೋ ಅವರ ಮಕ್ಕಳೂ ಅಷ್ಟೇ ಫೇಮಸ್‌. ಲಾಕ್‌ಡೌನ್‌ನಿಂದಾಗಿ ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಯಶ್‌, ಪುತ್ರನ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ವೈರಲ್:
ಜೂನಿಯರ್‌ ಯಶ್‌ಗೆ ಮನೆಯಲ್ಲಿ ಆಟವಾಡಲು ಒಂದು ಪುಟ್ಟ ಕೆಂಪು ಕಾರಿದ್ದು, ಟ್ಟಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡು ಪ್ಲೇ ಆದ ಕೂಡಲೇ ಸ್ಟೇರಿಂಗ್ ವೀಲ್ ಸಹಾಯ ಪಡೆದು, ಡ್ಯಾನ್ಸ್  ಮಾಡಲು ಶುರು ಮಾಡಿದ್ದಾರೆ. ಪುಟ್ಟ ಕಂದಮ್ಮನ ಎನರ್ಜಿ ನೋಡಿ ಯಶ್ ಫುಲ್ ಥ್ರಿಲ್ ಆಗಿದ್ದಾರೆ. ಅದರಲ್ಲಿಯೂ ಮಗನಿಗಿನ್ನೂ ನಿಲ್ಲಲೂ ಬರುವುದಿಲ್ಲ. ಆದರೆ, ಹಾಡಿಗೆ ಡ್ಯಾನ್ಸ್ ಮಾಡೋದ ನೋಡಿ ತಂದೆ ಯಶ್ ಫುಲ್ ಖುಷಿಯಾಗಿದ್ದಾರೆ.

 

'ಅನ್ನು ನಿಂತುಕೊಳ್ಳಲೂ ಸಾಧ್ಯವಿಲ್ಲ. ಆದರೆ ಸಂಗೀತ ಕೇಳಿದ ತಕ್ಷಣ ನಮ್ಮ ಪುಟ್ಟ ಕಂದಮ್ಮ ಹೆಜ್ಜೆ ಹಾಕಲು ಶುರು ಮಾಡುತ್ತಾನೆ. ದಯವಿಟ್ಟು ಹಿಂದೆ ಕೇಳುತ್ತಿರುವ ನನ್ನ ತುಂಬು ಉತ್ಸಾಹದ ಧ್ವನಿಯನ್ನು ನಿರ್ಲಕ್ಷಿಸಿ..' ಎಂದು ಯಶ್‌ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಆ್ಯಕ್ಟಿವ್ ಇಲ್ಲದ ಯಶ್‌ ಅಪರೂಪಕ್ಕೊಂದು ವಿಡಿಯೋ ಮತ್ತು ಫೋಟೋ ಶೇರ್ ಮಾಡುತ್ತಾರೆ. ಈ ಹಿಂದೆ ಐರಾ ಮನೆಯಲ್ಲಿ ಹಠ ಮಾಡಿ ತಂದೆಗೆ ಊಟ ಮಾಡಿಸುತ್ತಿದ್ದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.

ಚಿಕ್ಕ ವಯಸ್ಸಿಗೇ ಸೆಲೆಬ್ರಿಟಿ ಕಿಡ್‌ಗಳಾಗಿರುವ ಐರಾ ಮತ್ತು ಜೂನಿಯರ್‌ ಯಶ್‌ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ಫ್ಯಾನ್ ಪೇಜ್‌ನಲ್ಲಿ ವೈರಲ್ ಆಗುತ್ತವೆ.