ದಕ್ಷಿಣ ಚಿತ್ರರಂಗದ ಮುದ್ದು ಮುಖದ ಚೆಲುವ ನಟಿ ಭಾವನ ಇದೇ ಮೊದಲ ಬಾರಿಗೆ ತಮ್ಮ ಪ್ರೀತಿ, ಪ್ರೇಮದ ವಿಚಾರವನ್ನು ಬಹಿರಂಗವಾಗಿ ಬರೆದುಕೊಂಡಿದ್ದಾರೆ. ಇತ್ತೀಚಿಗೆ ಒಬ್ಬರನೊಬ್ಬರು ಪ್ರೀತಿಸಿ 9 ವರ್ಷ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ...

Fake Account: ಬೇಸರದಿಂದ ಅಭಿಮಾನಿಗಳಲ್ಲಿ 'ಜಾಕಿ' ನಟಿ ಮನವಿ!

ಮಲಯಾಳಂ ನಟಿ, ಕನ್ನಡದ ಹುಡುಗನನ್ನು ಮದುವೆಯಾದ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಆದರೆ ಇದು ಎಷ್ಟು ವರ್ಷದ ಲವ್? ಯಾರು ಮೊದಲು ಪ್ರಪೋಸ್ ಮಾಡಿದ್ದು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. 2011ರಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ 'ಜಾಕಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಇದಾದ ನಂತರ ಗೊಲ್ಡನ್ ಸ್ಟಾರ್ ಗಣೇಶ್‌ ಜೊತೆ 'ರೋಮಿಯೋ' ಸಿನಿಮಾದಲ್ಲಿ ಅಭಿನಯಿಸಿದ್ದರು. ಅಲ್ಲೇ ನೋಡಿ ಭಾವನಾಗೆ ಲವ್ ಆಗಿದ್ದು.

'ರೋಮಿಯೋ ಸಿನಿಮಾ ತೆರೆ ಕಂಡು 8 ವರ್ಷ ಆಯ್ತು. ನಮ್ಮ ಪ್ರೀತಿಗೆ 9 ವರ್ಷ ಆಯ್ತು. ಈ ಚಿತ್ರದಿಂದ ನನಗೆ ನಿಮ್ಮ ಪರಿಚಯವಾಯ್ತು.  ನಾನು ಭೇಟಿಯಾಗಿ ಪ್ರೀತಿಸಲು ಆರಂಭಿಸಿದ್ದು ಎಲ್ಲವೂ ಮ್ಯಾಜಿಕ್ ಎಂದೇ ಅನಿಸುತ್ತದೆ.  ಥ್ಯಾಂಕ್ಸ್ ನನ್ನ ಜೀವನಕ್ಕೆ ಕಾಲಿಟ್ಟು ಪ್ರತಿ ಕ್ಷಣವನ್ನೂ ಮೆಮೋರೆಬಲ್ ಮಾಡಿರುವುದಕ್ಕೆ.  ನಾವು ಪ್ರೀತಿಸಿ 9 ವರ್ಷಗಳೇ ಆಯ್ತು. ಎಷ್ಟು ಖುಷಿ ಆಗುತ್ತದೆ ಹೇಳಿಕೊಳ್ಳಲು #LoveAnniversary' ಎಂದು ಭಾವನ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

ರೋಮಿಯೋ ಚಿತ್ರಕ್ಕೆ ಭಾವನ ಪತಿ ನವೀನ್ ಬಂಡವಾಳ ಹಾಕಿದ್ದರು.  ಅಲ್ಲಿ ಆರಂಭವಾದ ಸ್ನೇಹ, ಪ್ರೀತಿಯಾಗಿ ಚಿಗುರಿತ್ತು. 2018ರಲ್ಲಿ ತ್ರಿಶೂರ್‌ನ ತಿರುವಂಬಾಡಿ ದೇವಸ್ಥಾನದಲ್ಲಿ ನವೀನ್ ಮತ್ತು ಭಾವನ ಸಪ್ತಪದಿ ತುಳಿದರು.  ಮದುವೆಯಲ್ಲಿ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು.