Asianet Suvarna News Asianet Suvarna News

ಜನರು ಥಿಯೇಟರ್‌ಗೆ ಬರಲು ನಾನು ಮೆಗಾಸ್ಟಾರ್ ಅಲ್ಲ, ಓಟಿಟಿ ನಂಬಿರುವ ಹುಡುಗ: Danish Sait

ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಂಬಲ್ ಪೊಲೀಟಿಷಿಯನ್ ನೋಗ್‌ರಾಜ್‌ ಚಿತ್ರದ ಬಗ್ಗೆ ಡ್ಯಾನಿಷ್ ಸೇಠ್ ಮಾತನಾಡಿದ್ದಾರೆ. ಓಟಿಟಿಯಲ್ಲಿ ಗೆದ್ದಿದೆ ನಮ್ಮ ಕನ್ನಡ ವೆಬ್‌ ಸೀರಿಸ್‌.... 

Kannada HPN fame Danish Sait talks about internet and Ott platform vcs
Author
Bangalore, First Published Jan 18, 2022, 5:07 PM IST

ಸೋಷಿಯಲ್ ಮೀಡಿಯಾ ಸ್ಟಾರ್, ಐಪಿಎಲ್‌ ಇನ್‌ಸೈಡರ್, ಸ್ಟ್ಯಾಂಡಪ್‌ ಕಾಮಿಡಿಯನ್ ಕಮ್ ನಟ ಡ್ಯಾನಿಷ್ ಸೇಠ್ 'ಹಂಬಲ್ ಪೊಲಿಟೀಷಿಯನ್ ನೋಗ್‌ರಾಜ್‌' ಕನ್ನಡ ವೆಬ್‌ ಸೀರಿಸ್‌ ಓಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. 2018ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಆದರೆ ಈಗ ವೆಬ್‌ ಸೀರಿಸ್ ಮಾಡಿ ಮುಂದುವರೆದ ಭಾಗವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದು ಯಾಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಡ್ಯಾನಿ ಕೊಟ್ಟ ಉತ್ತರವಿದು.... 

'ಅನೇಕ ಮಾಧ್ಯಮ ಮಿತ್ರರನ್ನು ಭೇಟಿ ಮಾಡಿರುವೆ. ನಮ್ಮ ವೆಬ್‌ ಸೀರಿಸ್‌ ಅನ್ನು ತಮ್ಮ ಸಿನಿಮಾ ಎನ್ನುವ ರೀತಿಯಲ್ಲಿ ಓಟಿಟಿ ಕ್ಷೇತ್ರಗಳು ಪ್ರಚಾರ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ. ದೇಶಾದ್ಯಂತ ಜನರು ಓಟಿಟಿಯಲ್ಲಿ ಸಿನಿಮಾ ಅಥವಾ ವೆಬ್‌ ಸೀರಿಸ್‌ ವೀಕ್ಷಿಸುತ್ತಾರೆ. ಇದೇ ಭಾಷೆ ಅದೇ ಭಾಷೆ ಎಂದು ಭೇದಭಾವ ಇಲ್ಲ. ದೊಡ್ಡ ಗುಂಪಿನ ಜನರನ್ನು ನಾನು ಚಿತ್ರಮಂದಿರಕ್ಕೆ ಕರೆತರುವ ಶಕ್ತಿ ನನಗಿಲ್ಲ. ಹೀಗಾಗಿ ಓಟಿಟಿ ಆಯ್ಕೆ ಮಾಡಿಕೊಂಡೆ. ಇದು self awareness, ನನ್ನ ಸಾಮರ್ಥ್ಯ ಏನೆಂದು ತಿಳಿದುಕೊಂಡು, ನಾನು ಫಿಟ್ ಆಗುವುದು. ಈ ಸಮಯದಲ್ಲಿ ಜನರು ಹೊರ ಬಂದು ಸಿನಿಮಾ ನೋಡಲೇ ಬೇಕು  ಎಂದು ನಿರೀಕ್ಷೆ ಮಾಡುವುದಿಲ್ಲ. ಬದಲಿದೆ ನಾನು ಅವರು ಮನೆಯ ಟಿವಿಯಲ್ಲಿ ಅಥವಾ ಮೊಬೈಲ್‌ ಮೂಲಕ ಹೋಗುವೆ. ನನ್ನಂತೆ ಟ್ಯಾಲೆಂಟ್ ಇರುವ ಜನರಿಗೆ ಓಟಿಟಿ ಅವಕಾಶ ನೀಡಿದೆ,' ಎಂದು ಡ್ಯಾನಿಷ್‌ ಇ-ಟೈಮ್ಸ್‌ ಜೊತೆ ಮಾತನಾಡಿದ್ದಾರೆ.

Kannada HPN fame Danish Sait talks about internet and Ott platform vcs

'HPN ನಂತರ ನನ್ನ ಮತ್ತೊಂದು ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ಇದ್ಯಾವುದು ಚಿತ್ರಮಂದಿರಗಳ ರೌಂಡ್ ಮಾಡಿಲ್ಲ. ಈ ವಿಚಾರದಲ್ಲಿ ನಾನು ಸ್ವಲ್ಪ relax ಆಗಿರುವೆ, ಜನರು ಸಿನಿಮಾ ಬ್ಯುಸಿನೆಸ್‌ ಬಗ್ಗೆ ಮಾತನಾಡುತ್ತಾರೆ. ಅದರೆ ಅವರು ಬರೀ ಬ್ಯುಸಿನೆಸ್‌ ಮಾಡುವುದನ್ನು ಮರೆತು ಬರೀ entertainment ಎಂದು ಹೇಳುತ್ತಾರೆ. ಈ ವಿಚಾರದಲ್ಲಿ ನನಗೆ ನಿರ್ಮಾಪಕರ ಮೇಲೆ ಒತ್ತಡ ಹಾಕುವುದಕ್ಕೆ ಇಷ್ಟವಿಲ್ಲ. ಓಟಿಟಿ ಕ್ಷೇತ್ರದಲ್ಲಿ ಸುಲಭವಾಗಿ ಸೇಲ್‌ ಆಗಿರುವುದ ಬಗ್ಗೆ ಮಾಹಿತಿ ಸಿಗುತ್ತದೆ. ನಾನು ಈ ರೀತಿ ವಿವಿಧ ವಿಚಾರಗಳ ಬಗ್ಗೆ ತಿಳಿದುಕೊಂಡು ಜನರನ್ನು ಮನೋರಂಜಿಸಲು ತಯಾರಾಗುತ್ತಿರುವೆ,' ಎಂದು ಡ್ಯಾನಿಷ್ ಹೇಳಿದ್ದಾರೆ. 

Danish Saitಗೆ ದೊಡ್ಡ ವ್ಯಕ್ತಿಗಳು ಪರಿಚಯವಿದೆ, ಕೆಎಲ್‌ ರಾಹುಲ್‌ ಮನೆಗೆ ಬಂದಿದ್ರು: ನಟ Vijay Chendur

'ನೋಗ್‌ರಾಜ್‌ ಲುಕ್‌ ಅಚಾನಕ್‌ ಆಗಿ ಆಗಿದ್ದು. ಎಲ್ಲಾ ವಿಭಿನ್ನ ಲುಕ್ ಪ್ರಯತ್ನ ಮಾಡಿದ ನಂತರ ಇದನ್ನು ಆಯ್ಕೆ ಮಾಡಿದ್ದು. ನಮ್ಮ ನಿರ್ದೇಶಕರು ಸಾದ್‌ ಖಾನ್‌ ದೊಡ್ಡ ಶ್ರಮ ವಹಿಸಿ ನೋಗ್‌ರಾಜ್‌ನ ತಯಾರಿ ಮಾಡಿದ್ದರು. ಇಲ್ಲಿ ನೀವು ನಿರ್ದೆಶಕರ ದೃಷ್ಟಿಕೋನ ತಿಳಿದುಕೊಳ್ಳಬಹುದು. ದಶಕಗಳಿಂದ ನಾನು ಡಿಜಿಟಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವೆ. ರೇಡಿಯೋದಲ್ಲಿ ನಾನು ಪ್ರ್ಯಾಂಕ್ ಮಾಡುವ ಮೂಲಕ ಶುರು ಮಾಡಿಕೊಂಡ ಕೆಲಸ ಇದು, ಫೇಸ್‌ಬುಕ್‌ನಲ್ಲಿ ಈ ವಿಡಿಯೋಗಳನ್ನು ಹಂಚಿ ಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಟ್ಟಿಟರ್‌, ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ ಅಷ್ಟಿರಲಿಲ್ಲ. ಆದರೀಗ ಪ್ರತಿಯೊಬ್ಬರು ತಮ್ಮ ಐಡೆಂಟಿಟಿನ ಪ್ರದರ್ಶಿಸುತ್ತಿದ್ದಾರೆ,' ಎಂದಿದ್ದಾರೆ.

'ಪುನೀತ್ ರಾಜ್‌ಕುಮಾರ್ ಅಣ್ಣ ಅವರ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದು incredible experience. ಅವರ ಬಗ್ಗೆ ನಾನ್‌ ಸ್ಟಾಪ್ ಮಾತನಾಡಬಹುದು. ಅವರಿಟ್ಟುಕೊಂಡಿದ್ದ ಗುರಿ ಅದ್ಭುತವಾಗಿತ್ತು. ಅವರು ಎಂದೂ ಯಾರನ್ನೂ ಫ್ರೆಶರ್‌ ರೀತಿ ನೋಡುತ್ತಿರಲಿಲ್ಲ. ಅವರು ಎಂದೂ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿ ಎಂದು ನಮಗೆ ಹೇಳಿಲ್ಲ ಅಥವಾ ನಮ್ಮ economic ನಂಬರ್‌ ಎಷ್ಟಿದೆ ಎಂದು ಪ್ರಶ್ನೆ ಮಾಡಿಲ್ಲ. ಒಳ್ಳೆಯ ಸಿನಿಮಾ ಬಜೆಟ್‌ನಲ್ಲಿ ಮಾಡಿದ್ದಾರೆ ಒಳ್ಳೆಯ ಮನೋರಂಜನೆ ನೀಡಲಿದೆ ಎಂದು ಮಾತ್ರ ನಂಬಿದ್ದರು,' ಎಂದು ಅಪ್ಪು ಬಗ್ಗೆ ಡ್ಯಾನಿ ಮಾತನಾಡಿದ್ದಾರೆ.

Follow Us:
Download App:
  • android
  • ios