ಕನ್ನಡ ಚತ್ರರಂಗ ಬಹುನಿರೀಕ್ಷಿತ ಸಿನಿಮಾ 'ಸ್ನೇಹಿತ' ಆಡಿಯೋ ಬಿಡುಗಡೆ. ಚಿತ್ರಮಂದಿರಕ್ಕೆ ಬಂದು ಬೆಂಬಲಿಸಿ ಎಂದು ಮನವಿ ಮಾಡಿಕೊಂಡ ನಿರ್ದೇಶಕರು. 

ಹೊಸ ಜೋಡಿ ಧನುಷ್‌ ಹಾಗೂ ಸುಲಕ್ಷ ಕೈರಾ ನಟನೆಯ ‘ಸ್ನೇಹಿತ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಸಂಗೀತ್‌ ಸಾಗರ್‌ ಈ ಚಿತ್ರದ ನಿರ್ದೇಶಕರು. ಅಶೋಕ್‌ ಆರ್‌ ನಿರ್ಮಾಪಕರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಪ್ರೀತಿ ಹಾಗೂ ಸ್ನೇಹದ ಮಹತ್ವವನ್ನು ಹೇಳುವ ಸಿನಿಮಾ ಇದು. ನಿರ್ದೇಶನದ ಜತೆಗೆ ಸಂಗೀತವನ್ನೂ ನೀಡಿದ್ದೇನೆ. ಸಿನಿಮಾ ಮಾಡುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ನಮ್ಮ ಚಿತ್ರ ಸದ್ಯದಲ್ಲೇ ಚಿತ್ರಮಂದಿರಗಳಿಗೆ ಬರುತ್ತಿದೆ. ನೋಡಿ ಬೆಂಬಲಿಸಿ’ ಎಂದರು ಸಂಗೀತ್‌ ಸಾಗರ್‌. ನಾಯಕ ಧನುಷ್‌, ‘ಸ್ನೇಹಿತ ಚಿತ್ರದಲ್ಲಿ ನಾನು ಹೀರೋ ಆಗಿದ್ದೇನೆ ಎನ್ನುವುದಕ್ಕಿಂತ ಎಂ ಎಸ್‌ ಉಮೇಶ್‌ ಅವರತಂಹ ಹಿರಿಯ ನಟರ ಜತೆ ಅಭಿನಯಿಸಿದ್ದೇನೆ ಎಂದು ಹೇಳುವುದಕ್ಕೆ ಖುಷಿ ಆಗುತ್ತದೆ’ ಎಂದರು. ಸುಲಕ್ಷ ಕೈರಾ ಅವರಿಗೆ ಇದು ಮೊದಲ ಸಿನಿಮಾ.

ಮೊದಲ ಬಾರಿಗೆ '5ಡಿ' ರೀತಿಯ ಚಿತ್ರ ನಿರ್ದೇಶಿಸಿದ್ದೇನೆ: ಎಸ್‌ ನಾರಾಯಣ್‌

ನೆಹರು ಬ್ಯಾಂಡ್‌ ಸೆಟ್‌ ನಡೆಸುತ್ತಿದ್ದ ಅಶೋಕ್‌ ಆರ್‌ ಭರವಸೆ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಶಿವರಾಮಣ್ಣ, ಮನದೀಪ್‌ ರಾಯ…, ಆರ್‌ ಟಿ ರಮ, ಕಿಲ್ಲರ್‌ ವೆಂಕಟೇಶ್‌, ಪ್ರಣಯ ಮೂರ್ತಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಾ ಮಾ ಹರೀಶ್‌, ಬಾ ಮಾ ಗಿರೀಶ್‌, ಹಿರಿಯ ನಟ ಉಮೇಶ್‌, ವಿತರಕ ನರ್ಗಿಸ್‌ ಬಾಬು, ನಿರ್ದೇಶಕ ಬಿ ಆರ್‌ ಕೇಶವ, ನಿತ್ಯಾನಂದ ಪ್ರಭು ಅತಿಥಿಗಳಾಗಿ ಆಗಮಿಸಿದ್ದರು.

YouTube video player