ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಘೋಷಣೆ, ಟೀಸರ್‌, ಪೋಸ್ಟರ್‌ ಬಿಡುಗಡೆಗೆ ಈ ಸಲ ಸ್ವಾತಂತ್ರೋತ್ಸವ ಸಾಕ್ಷಿಯಾಯ್ತು. ಕೊರೋನಾ ಸಂಕಷ್ಟದಲ್ಲೂ ಸ್ವಾತಂತ್ರ್ಯ ಸಂಭ್ರಮವನ್ನು ಕನ್ನಡ ಚಿತ್ರರಂಗ ಆಚರಿಸಿದ ರೀತಿ ಹೊಸ ಭರವಸೆ ಮೂಡಿಸುವಂತಿತ್ತು.

ರಾಜತಂತ್ರ

ಇದು ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾ. ರಾಘಣ್ಣ ಅವರ ಹೊಸ ಗೆಟಪ್‌ ಈ ಚಿತ್ರದ ವಿಶೇಷ. ಜೆ ಎಂ ಪ್ರಹ್ಲಾದ್‌ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಪಿ ವಿ ಆರ್‌ ಸ್ವಾಮಿ ನಿರ್ದೇಶಕರು. ಟೈಟಲ್‌ ಜತೆಗೆ ಚಿತ್ರದ ಫಸ್ಟ್‌ ಲುಕ್‌ ಕೂಡ ಬಂದಿದೆ. ರಾಜನಂತೆ ಕೂತಿರುವ ರಾಘವೇಂದ್ರ ರಾಜ್‌ಕುಮಾರ್‌ ಪೋಸ್ಟರ್‌ಗಳು ಕುತೂಹಲ ಮೂಡಿಸಿವೆ. ಅಲ್ಲದೆ ಆ.15ರಂದು ರಾಘವೇಂದ್ರ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬ, ಜೊತೆಗೆ ಸ್ವಾತಂತ್ರ್ಯ ಸಂಭ್ರಮ. ಈ ಎರಡು ಕಾರಣಗಳಿಗೆ ‘ರಾಜತಂತ್ರ’ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ರಾಘಣ್ಣ ನಟನೆಯ ಮತ್ತೊಂದು ಚಿತ್ರ‘ಆಡಿಸಿದಾತ’ ಟೀಸರ್‌ ಕೂಡ ಅನಾವರಣಗೊಂಡಿದೆ.

View post on Instagram

ಹೆಡ್‌ ಬುಷ್‌

ವರಮಹಾಲಕ್ಷ್ಮೀ ಹಬ್ಬಕ್ಕೆ ‘ರತ್ನನ್‌ ಪ್ರಪಂಚ’ ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದ ಡಾಲಿ ಧನಂಜಯ್‌ ಇದೀಗ ಮತ್ತೊಂದು ಚಿತ್ರಕ್ಕೂ ಸೈನ್‌ ಮಾಡಿದ್ದು, ಅದರ ಟೈಟಲ್‌ ಬಿಡುಗಡೆ ಆಗಿದೆ. ಅಗ್ನಿ ಶ್ರೀಧರ್‌ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರದ ಹೆಸರು ‘ಹೆಡ್‌ ಬುಷ್‌’. ಬೆಂಗಳೂರಿನ ಭೂಗತ ಲೋಕದ ಕತೆಯಾಧರಿಸಿದ್ದು. ಈ ಚಿತ್ರದಲ್ಲಿ ಧನಂಜಯ್‌ ಅವರದು ಎಂ ಪಿ ಜಯರಾಜ್‌ ಪಾತ್ರ. ಶೂನ್ಯ ಈ ಚಿತ್ರದ ನಿರ್ದೇಶಕ, ಅಶು ಬೆದ್ರ ನಿರ್ಮಾಪಕ. ನಟ ಪುನೀತ್‌ ರಾಜ್‌ಕುಮಾರ್‌ ಅವರು ಟೈಟಲ್‌ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ.

View post on Instagram

ಬಕ್ರ್ಲಿ

ನಿರ್ಮಾಪಕ ಆನೆಕಲ್‌ ಬಾಲರಾಜ್‌ ಪುತ್ರ ಸಂತೋಷ್‌ ‘ಬಕ್ರ್ಲಿ’ ಟೈಟಲ್‌ನಲ್ಲಿ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಸುಮಂತ್‌ ಕ್ರಾಂತಿ ನಿರ್ದೇಶನದ ಜೊತೆಗೆ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಾಹಸ ಪ್ರಧಾನ ಸಿನಿಮಾ ಇದಾಗಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಕ್ಲೈಮ್ಯಾಕ್ಸ್‌ ಹಾಗೂ ಒಂದು ಹಾಡಿನ ಶೂಟಿಂಗ್‌ ಮಾತ್ರ ಬಾಕಿ ಉಳಿದುಕೊಂಡಿದೆ. ಸಿಮ್ರಾನ್‌ ನಾಟೆಕರ್‌ ಚಿತ್ರದ ನಾಯಕಿ. ಈ ಹಿಂದೆ ‘ಗಣಪ’ ಹಾಗೂ ‘ಕರಿಯ 2’ ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡವರು ಸಂತೋಷ್‌.

ನಟ ಉಪೇಂದ್ರ ಮಕ್ಕಳು ಬಗ್ಗೆ ಕೇಳುತ್ತಿರುವ ಈ ವಿಚಾರ ನಿಜಾನಾ?

ಸೂಪರ್‌ಸ್ಟಾರ್‌

ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಹೀರೋ ಆಗಿರುವ ಸಿನಿಮಾ. ಉಪ್ಪಿ ಅವರದ್ದೇ ಹಳೆಯ ಚಿತ್ರದ ಟೈಟಲ್‌ ಮೂಲಕ ನಿರಂಜನ್‌ ಸೋಲೋ ಹೀರೋ ಆಗಿ ಬರುತ್ತಿದ್ದಾರೆ. ಟೈಟಲ್‌ ಟೀಸರ್‌ ಜತೆಗೆ ಚಿತ್ರದ ಪೋಸ್ಟರ್‌ ಕೂಡ ಬಂದಿದೆ. ರಮೇಶ್‌ ವೆಂಕಟೇಶ್‌ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಸೂಪರ್‌ಸ್ಟಾರ್‌ ಎನ್ನುವ ಟೈಟಲ್‌ನಿಂದ ಗಮನ ಸೆಳೆಯುತ್ತಿದೆ.

View post on Instagram

ಶಂಭೋ ಶಿವ ಶಂಕರ್‌

ಈ ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ಬಿಡುಗಡೆ ಮಾಡಿದ್ದು ನಟರಾದ ಧನಂಜಯ್‌ ಹಾಗೂ ವಸಿಷ್ಠ ಸಿಂಹ. ಸೆಪ್ಟೆಂಬರ್‌ ತಿಂಗಳಲ್ಲಿ ಶೂಟಿಂಗ್‌ ಆರಂಭವಾಗಲಿದೆ. ಹಿಂದೆ ‘ಜನುಮದ ಜೋಡಿ’ ಹಾಗೂ ‘ನಾಯಕಿ’ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್‌ ಕೋನಮಾನಹಳ್ಳಿ ಈ ಚಿತ್ರದ ನಿರ್ದೇಶಕರು. ಅಭಯ್‌ ಪುನೀತ್‌, ರೋಹಿತ್‌, ರಕ್ಷಕ್‌ ಈ ಚಿತ್ರದ ಮೂವರು ನಾಯಕರು. ಸೋನಾಲ್‌ ಮಾಂತೆರೋ ನಾಯಕಿ.

ಹೊಸ ಓಟಿಟಿ ಪ್ಲಾಟ್‌ಫಾಮ್‌ರ್‍ 'ಪ್ರಗುಣಿ';ಆರಂಭದಲ್ಲಿಯೇ ಶಾರ್ಟ್‌ಫಿಲ್ಮ್‌ ಸ್ಪರ್ಧೆ ಆಯೋಜನೆ!

ಹೀಗೆ ಹೊಸ ಚಿತ್ರಗಳ ಜತೆಗೆ ಒಂದಿಷ್ಟುಹಳೆಯ ಚಿತ್ರಗಳ ಪೋಸ್ಟರ್‌ಗಳು ಬಿಡುಗಡೆ ಆಗಿವೆ. ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ನಾಯಕ ಪ್ರಮೋದ್‌ ನಟನೆಯ ‘ಇಂಗ್ಲಿಷ್‌ ಮಂಜ’ ಚಿತ್ರಕ್ಕೆ ಮುಹೂರ್ತ ಆಗಿದೆ.