Asianet Suvarna News Asianet Suvarna News

ಡಾ ರಾಜ್‌ಕುಮಾರ್ ಈ ದಾಖಲೆ ನಿಮಗೆ ಗೊತ್ತಿದ್ಯಾ? ನೋಡಿದ್ರೆ ಪಕ್ಕಾ ಶಾಕ್ ಆಗಿ ಹೌಹಾರ್ತೀರಾ!

ಇದೇ ಚಿತ್ರವು 1996ರಲ್ಲಿ ಶ್ರೀಲಂಕಾದ ಸಿಂಹಳಿ ಭಾಷೆಯಲ್ಲಿ ರೀಮೇಕ್ ಆಗಿ ಅಲ್ಲೂ ಸೂಪರ್ ಸಕ್ಸಸ್ ಕಂಡಿತು. ಬಳಿಕ ಈ ಚಿತ್ರವು ಓರಿಯಾ ಭಾಷೆಯಲ್ಲಿ ರೀಮೇಕ್ ಆಗಿತ್ತು. 2001ರಲ್ಲಿ ಬಂಗಾಳಿಯಲ್ಲಿ ಹಾಗೂ 2002ರಲ್ಲಿ ಬಾಂಗ್ಲಾದೇಶದ ಬಂಗಾಳಿಯಲ್ಲಿ ಈ ಚಿತ್ರವು ತೆರೆಗೆ ಬಂದು ಅಲ್ಲೂ..

Kannada film dr rajkumar lead Anuraga Aralithu remakes in seven languages srb
Author
First Published Aug 9, 2024, 5:35 PM IST | Last Updated Aug 9, 2024, 5:34 PM IST

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಭಾಷೆಗಳಿಗೆ ರೀಮೇಕ್ ಆದ ಚಿತ್ರವೊಂದು ಡಾ ರಾಜ್‌ಕುಮಾರ್ (Dr Rajkumar) ಹೆಸರಿನಲ್ಲಿದೆ. ಅದು ಕನ್ನಡದ 'ಅನುರಾಗ ಅರಳಿತು'. ಡಾ ರಾಜ್‌ಕುಮಾರ್, ಗೀತಾ ಹಾಗೂ ಮಾಧವಿ ನಟನೆಯ ಅನುರಾಗ ಅರಳಿತು ಚಿತ್ರವು ಹೆಚ್‌ಜಿ ರಾಧಾದೇವಿಯವರ ಅನುರಾಗದ ಅಂತಃಪುರ ಕಾದಂಬರಿ ಆಧಾರಿತ ಈ ಚಿತ್ರವು 1986ರಲ್ಲಿ ಎಂಎಸ್‌ ರಾಜಶೇಖರ್ ನಿರ್ದೇಶನದಲ್ಲಿ ಮೂಡಿ ಬಂತು. ಹಿರಿಯ ನಟನಟಿಯರಾದ ಅಶ್ವಥ್ ಹಾಗೂ ಪಂಡರಿಬಾಯಿ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದರು. 

ಅಂದು, 1986ರಲ್ಲಿ ತೆರೆಕಂಡ ಈ ಚಿತ್ರವು ಬರೋಬ್ಬರಿ 50 ವಾರಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡು ಸೂಪರ್ ಹಿಟ್ ಎನಿಸಿತ್ತು. ಈ ಚಿತ್ರವು ಕೇವಲ ಭಾರತದ ಭಾಷೆಗಳಲ್ಲಿ ಮಾತ್ರವಲ್ಲದೇ ಭಾರತದ ಗಡಿಯನ್ನು ಸಹ ದಾಟಿ, ವಿದೇಶಗಳಲ್ಲೂ ರೀಮೇಕ್ ಆಗಿತ್ತು. ಅನುರಾಗ ಅರಳಿತು ಚಿತ್ರವು ಒಟ್ಟೂ ಏಳು ಭಾಷೆಗಳಲ್ಲಿ ಅಂದೇ ರೀಮೇಕ್ ಆಗಿ ಬಿಡುಗಡೆಗೊಂಡು ಎಲ್ಲಾ ಭಾಷೆಗಳಲ್ಲೂ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. 

ಹಿಂದಿಯ ಗೋವಿಂದ ಅಪ್ಪು ಬಗ್ಗೆ ಏನಂದ್ರು, ಜಗತ್ತಿಗೇ ಗೊತ್ತಿಲ್ಲದ ಸೀಕ್ರೆಟ್ ಒಂದು ಹೊರಬಿತ್ತು!

ಕನ್ನಡದ ಈ ಚಿತ್ರವನ್ನು ಮೊಟ್ಟಮೊದಲ ಬಾರಿಗೆ ತಮಿಳಿನಲ್ಲಿ1992ರಲ್ಲಿ 'ಮಣ್ಣನ್' ಹೆಸರಿನಲ್ಲಿ ರೀಮೇಕ್ ಮಾಡಲಾಯ್ತು. ಅಲ್ಲಿ ಅದು ಸೂಪರ್ ಹಿಟ್ ಆಗಿತ್ತು. ತಮಿಳಿನ ಈ ಚಿತ್ರದಲ್ಲಿ ರಜನಿಕಾಂತ್‌ಗೆ ಜೋಡಿಯಾಗಿ ಖುಷ್ಬೂ ಹಾಗು ವಿಜಯಶಾಂತಿ ಕಾಣಿಸಿಕೊಂಡಿದ್ದರು. ಇನ್ನು ತೆಲುಗಿನಲ್ಲಿ ಈ ಚಿತ್ರವು 1992ರಲ್ಲಿ ತೆರೆಗೆ ಬಂದಿತ್ತು. ಚಿರಂಜೀವಿ ನಾಯಕತ್ವದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಜೋಡಿಯಾಗಿ ನಗ್ಮಾ ಹಾಗೂ ವಾಣಿ ವಿಶ್ವನಾಥ್ ನಟಿಸಿದ್ದರು. 

ತೆಲುಗಿನಲ್ಲಿ ಈ ಚಿತ್ರವು ಬರೋಬ್ಬರಿ 10 ಕೋಟಿ ಗಳಿಸಿ, ಆ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಅತಿ ಹೆಚ್ಚಿನ ಗಳಿಕೆ ದಾಖಲಿಸಿತು. ಈ ಅನುರಾಗ ಅರಳಿತು ಚಿತ್ರವು ಹಿಂದಿಯಲ್ಲಿ 1994ರಲ್ಲಿ 'ಲಾಡ್ಲಾ' ಹೆಸರಿನಲ್ಲಿ ರೀಮೇಕ್ ಆಯಿತು. ಅನಿಲ್ ಕಪೂರ್ ಜೋಡಿಯಾಗಿ ಈ ಚಿತ್ರದಲ್ಲಿ ಶ್ರೀದೇವಿ ಹಾಗು ರವೀನಾ ಟಂಡನ್ ನಟಿಸಿದ್ದರು. ಅಲ್ಲಿ ಕೂಡ ಈ ಚಿತ್ರವು ಸೂಪರ್ ಹಿಟ್ ಆಯ್ತು. 2 ಕೋಟಿಯಲ್ಲಿ ತಯಾರಾದ ಈ ಬಾಲಿವುಡ್ ಚಿತ್ರವು ಜಗತ್ತಿನಾದ್ಯಂತ 14 ಕೋಟಿ ಗಳಿಸಿ ಜನಮೆಚ್ಚುಗೆ ಗಳಿಸಿತು. 

ಶಂಕರ್‌ ನಾಗ್ ಕಂಡ್ರೆ ಡಾ ರಾಜ್‌ಕುಮಾರ್‌ಗೆ ಆಗ್ತಾ ಇರ್ಲಿಲ್ಲ ಅನ್ನೋದು ಶುದ್ಧ ಸುಳ್ಳು, ಇಲ್ಲಿ ನೋಡಿ!

ಇದೇ ಚಿತ್ರವು 1996ರಲ್ಲಿ ಶ್ರೀಲಂಕಾದ ಸಿಂಹಳಿ ಭಾಷೆಯಲ್ಲಿ ರೀಮೇಕ್ ಆಗಿ ಅಲ್ಲೂ ಸೂಪರ್ ಸಕ್ಸಸ್ ಕಂಡಿತು. ಬಳಿಕ ಈ ಚಿತ್ರವು ಓರಿಯಾ ಭಾಷೆಯಲ್ಲಿ ರೀಮೇಕ್ ಆಗಿತ್ತು. 2001ರಲ್ಲಿ ಬಂಗಾಳಿಯಲ್ಲಿ ಹಾಗೂ 2002ರಲ್ಲಿ ಬಾಂಗ್ಲಾದೇಶದ ಬಂಗಾಳಿಯಲ್ಲಿ ಈ ಚಿತ್ರವು ತೆರೆಗೆ ಬಂದು ಅಲ್ಲೂ ಕೂಡ ಅಭೂತಪೂರ್ವ ದಾಖಲೆ ಬರೆಯಿತು. ಒಟ್ಟೂ 7 ಭಾಷೆಗಳಲ್ಲಿ ರೀಮೇಕ್ ಆಗಿ 50ಕ್ಕೇ ಹೆಚ್ಚು ಬಾರಿ ತೆರೆಕಂಡು ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಥಮಗಳಿಗೆ ನಾಂದಿ ಹಾಡಿತು. 

ಹೀಗೆ ಅನುರಾಗ ಅರಳಿತು ಚಿತ್ರದ ನಾಯಕರಾಗಿರುವ ಡಾ ರಾಜ್‌ಕುಮಾರ್ ಅವರು ಹಲವು ಪ್ರಥಮಗಳನ್ನು ಕಂಡ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ಜೊತೆಗೆ, ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡಿರದ ದಾಖಲೆ ಅವರ ಹೆಸರಿಗೆ ಸೇರಿಕೊಂಡಿತು. ಒಟ್ಟಿನಲ್ಲಿ, ಕನ್ನಡದ 'ಅನುರಾಗ ಅರಳಿತು' ಚಿತ್ರವು ಅಂದೇ ಹಲವು ಭಾಷೆಗಳಿಗೆ ರೀಮೇಕ್ ಆಗುವ ಮೂಲಕ ಕನ್ನಡದ ಕಂಪನ್ನು ವಿದೇಶಗಳಲ್ಲಿ ಕೂಡ ಪಸರಿಸಿತ್ತು. 

ಹಲೋ, ಇಲ್ಲಿ ಸ್ವಲ್ಪ ನೋಡ್ರೀ... ಕಾಂತಾರ ಖ್ಯಾತಿ ರಿಷಬ್ ಶೆಟ್ಟಿ ಕಾಲೆಳಿದಿದ್ದು ಯಾರನ್ನ ಗೊತ್ತಾ?

Latest Videos
Follow Us:
Download App:
  • android
  • ios