ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಫಲಿತಾಂಶ,ಅಧ್ಯಕ್ಷರಾಗಿ ಎಂ ನರಸಿಂಹಲು ಆಯ್ಕೆ!
ಕರ್ನಾಟಕ ಚಲನಚಿತ್ರ ಮಂಡಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಚುನಾವಣೆಯಲ್ಲಿ ಸಾರಾ ಗೋವಿಂದ್ ಬಣಕ್ಕೆ ಗೆಲುವಾಗಿದೆ.
ಬೆಂಗಳೂರು(ಡಿ.14) ಬಹುನಿರೀಕ್ಷಿತ ಕರ್ನಾಟಕ ಚಲನಚಿತ್ರ ಮಂಡಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಬಣಕ್ಕೆ ಗೆಲುವಾಗಿದೆ. ಸಾರಾ ಗೋವಿಂದ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ ನರಸಿಂಹಲು ಗೆಲುವಿನ ನಗೆ ಬೀರಿದ್ದಾರೆ. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಎಂ ನರಸಿಂಹಲು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ ಸಫಾಯರ್ ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣಾ ಫಲಿತಾಂಶ
ಅಧ್ಯಕ್ಷ: ಎಂ ನರಸಿಂಹಲು
ಉಪಾಧ್ಯಕ್ಷ:ಸಫಾಯರ್ ವೆಂಕಟೇಶ್
ಡಿಸ್ಟ್ರಬ್ಯೂಟರ್ ವಲಯ:
ಶಿಲ್ಪಾ ಶ್ರೀನಿವಾಸ್- ಉಪಾಧ್ಯಕ್ಷ
ಎಂ ಎನ್ ಕುಮಾರ್, ಸೆಕ್ರೆಟರಿ
ಪ್ರದರ್ಶಕರ ಉಪಾಧ್ಯಕ್ಷ - ಕೆ. ರಂಗಪ್ಪ
ಸೆಕ್ರೆಟರಿ -ಕುಶಾಲ್
ಖಜಾಂಚಿ - ಚಿಂಗಾರಿ ಮಹದೇವ್
ನಿರ್ಮಾಪಕರ ವಲಯ
ಕಾರ್ಯದರ್ಶಿ-ರಾಮಕೃಷ್ಣ ಡಿ.ಕೆ
ಗೌರವ ಕಾರ್ಯದರ್ಶಿ- ರಾಮಕೃಷ್ಣ ಡಿಕೆ
ಗೌರವ ಕಾರ್ಯದರ್ಶಿ ವಿತರಣೆ- ಕುಮಾರ್ ಎಂ ಎನ್
ಪ್ರದರ್ಶಕರು- ಕುಶಾಲಾ ಎಂ ಸಿ