ಯುಗಾದಿಗೆ ತೆಲುಗಿನಲ್ಲಿ ವಿಶ್ ಮಾಡಿದ ಶಿಲ್ಪಾ ಶೆಟ್ಟಿ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅನೇಕ ವರ್ಷಗಳ ಬಳಿಕ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಿರುವ ಶಿಲ್ಪಾ ಶೆಟ್ಟಿಯನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಶಿಲ್ಪಾ ಶೆಟ್ಟಿ ಫಸ್ಟ್ ಲುಕ್ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶಿಲ್ಪಾ ಶೆಟ್ಟಿ ಕೆಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಸತ್ಯಪತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಸತ್ಯವತಿ ಲುಕ್ ರಿಲೀಸ್ ಮಾಡಲಾಗಿದೆ.
ಅಂದಹಾಗೆ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾದ ಫಸ್ಟ್ ಲುಕ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫಸ್ಟ್ ಲುಕ್ ಶೇರ್ ಮಾಡುವ ಜೊತೆಗೆ ಯುಗಾದಿಗೆ ವಿಶ್ ಮಾಡಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ಯುಗಾದಿ ಶುಭಾಶಯ ತಿಳಿಸಿದ್ದು ತೆಲುಗಿನಲ್ಲಿ. ಕನ್ನಡ ಸಿನಿಮಾದ ಪೋಸ್ಟರ್ ಹಂಚಿಕೊಂಡು ತೆಲುಗು ಭಾಷೆಯಲ್ಲಿ ಶುಭಾಶಯ ತಿಳಿಸಿದ್ದಾರೆ. ಇದು ಕನ್ನಡಗರ ಕೋಪಕ್ಕೆ ಕಾರಣವಾಗಿದೆ. ಮಾಡುತ್ತಿರುವುದು ಕನ್ನಡ ಸಿನಿಮಾ ಆದರೆ ತೆಲುಗಿನಲ್ಲಿ ವಿಶ್ ಮಾಡುತ್ತಿದ್ದೀರಾ ಎಂದು ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಭಿಮಾನಿಗಳ ತರಾಟೆ
ಕನ್ನಡ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಶಿಲ್ಪಾ ಶೆಟ್ಟಿಗೆ ತರಾಟೆ ತೆಗೆದುಕೊಂಡಿದ್ದಾರೆ. 'ಮಾಡ್ತಿರೋದು ಕನ್ನಡ ಸಿನಿಮಾ, ಹೇಳ್ತೀರೊದು ತೆಲುಗು ಅಲ್ಲಿ, ನೀವು ಕರ್ನಾಟಕದಲ್ಲಿ ಹುಟ್ಟಿ ಸಾರ್ಥಕ ಆಯ್ತು ಬಿಡಿ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಯಾವ ಭಾಷೆಯ ಚಿತ್ರದಲ್ಲಿ ನಟಿಸುತಿದ್ದಿರಿ ಗೊತ್ತಿದೀಯಾ ನಿಮಗೆ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಕಾಮೆಂಟ್ ಮಾಡಿ, 'ಪ್ರೇಮ್ ಸ್ಟೋರಿನಾ ಕನ್ನಡ ಅಥವಾ ತೆಲುಗಿನಲ್ಲಿ ಹೇಳಿದ್ರಾ?' ಎಂದು ಕೇಳುತ್ತಿದ್ದಾರೆ. ಮಂಗಳೂರಿನನವರು ನೀವು, ಕನ್ನಡದಲ್ಲಿ ನಿಟಿಸುತ್ತಿದ್ದೀರಾ ಅದರೆ ತೆಲುಗಿನಲ್ಲಿ ವಿಶ್ ಮಾಡುತ್ತಿದ್ದೀರಿ' ಎಂದು ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಕೆಡಿ ಕನ್ನಡ ಸಿನಿಮಾ ಅಲ್ವಾ ಎಂದು ಮತ್ತೋರ್ವ ಪ್ರಶ್ನೆ ಮಾಡಿದ್ದಾನೆ.
ಸತ್ಯವತಿಯಾಗಿ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದ ಶಿಲ್ಪಾ ಶೆಟ್ಟಿ; 'KD' ಲುಕ್ ವೈರಲ್
ಕೆಡಿ ಸಿನಿಮಾದ ಬಗ್ಗೆ
ಕೆಡಿ ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಬಾಲಿವುಡ್ ಸ್ಟಾರ್ ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್-2 ಬಳಿಕ ಸಂಜಯ್ ದತ್ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಅಕುಲ್‌ನನ್ನು ಎತ್ತಿ ಕೆಳಗೆ ಬೀಳಿಸಿದ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್; ಹಳೆಯ ವಿಡಿಯೋ ವೈರಲ್
ಕೆಡಿ ಪಕ್ಕಾ ಮಾಸ್ ಸಿನಿಮಾ. 1970 ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಹೆಚ್ಚು ಏನು ರಿವೀಲ್ ಮಾಡಿಲ್ಲ. ದೊಡ್ಡ ಮಟ್ಟದಲ್ಲಿ ಕೆಡಿ ಸಿನಿಮಾ ಮೂಡಿಬರುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಾಗುತ್ತಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಸದ್ಯ ಸತ್ಯವತಿ ಲುಕ್ ರಿಲೀಸ್ ಮಾಡಿರುವ ಸಿನಿಮಾತಂಡ ಇನ್ನು ಉಳಿದ ಪಾತ್ರಗಳ ಲುಕ್‌ಅನ್ನು ಸದ್ಯದಲ್ಲೇ ಅನಾವರಣ ಮಾಡುವ ಸಾಧ್ಯತೆ ಇದೆ.
