Asianet Suvarna News Asianet Suvarna News

ನವರಂಗ್​ ಚಿತ್ರಮಂದಿರದ ಮಾಲಿಕ, ಖ್ಯಾತ ನಿರ್ಮಾಪಕ ಕೆ.ಸಿ.ಎನ್ ಮೋಹನ್ ನಿಧನ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನವರಂಗ್, ಊರ್ವಶಿ​ ಚಿತ್ರಮಂದಿರದ ಮಾಲಿಕ, ಕನ್ನಡ ಸಿನಿಮಾರಂಗದ ಖ್ಯಾತ ನಿರ್ಮಾಪಕ ಕೆ.ಸಿ.ಎನ್ ಮೋಹನ್ ನಿಧನರಾಗಿದ್ದಾರೆ. 

kannada famous producer kcn mohan passes away sgk
Author
First Published Jul 2, 2023, 2:56 PM IST

ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ, ಅನೇಕ ನವರಂಗ್,  ಊರ್ವಶಿ ಚಿತ್ರಮಂದಿರಗಳಮಾಲಿಕ  ಕೆಸಿಎನ್​ ಮೋಹನ್​ ನಿಧನರಾಗಿದ್ದಾರೆ. ಸಿನಿಮಾರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದ ಕೆಸಿಎನ್​ ಮೋಹನ್ ನಿರ್ಮಾಪಕರಾಗಿ ಹಾಗೂ ಪ್ರದರ್ಶಕರಾಗಿ ಸಿನಿಮಾರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಮಾಪಕ ಕೆಸಿಎನ್ ಮೋಹನ್ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೋಹನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೆಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ವೈಫಲ್ಯದಿಂದ ಕೆಸಿಎನ್​ ಮೋಹನ್​ ನಿಧನರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಕೆಸಿಎನ್ ಮೋಹನ್ ನಿಧನಕ್ಕೆ   ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಹಲವಾರು ಸಿನಿಮಾಗಳನ್ನು ಕೆಸಿಎನ್​ ಮೋಹನ್​ ನಿರ್ಮಾಣ ಮಾಡಿದ್ದರು. ಸ್ಯಾಂಡಲ್ ವುಡ್‌ನ ದೊಡ್ಡ ದೊಡ್ಡ ಕಲಾವಿದ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ನವರಂಗ್​, ಊರ್ವಶಿ ಚಿತ್ರಮಂದಿರಗಳ ಮಾಲೀಕರಾಗಿದ್ದ ಅವರು ಪ್ರದರ್ಶಕರಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು.

ಭೀಕರ ರಸ್ತೆ ಅಪಘಾತ: 'ದಿಲ್ ಸೆ ಬುರಾ ಲಗ್ತಾ ಹೇ' ಮೀಮ್ ಖ್ಯಾತಿಯ ಯೂಟ್ಯೂಬರ್ ದೇವರಾಜ್ ನಿಧನ

ನಟಿ ರಮ್ಯಾ ನಟನೆಯ ‘ಜೂಲಿ’, ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಜಯಸಿಂಹ’, ‘ಧರ್ಮ ಯುದ್ಧ’, ಶಂಕರ್​ ನಾಗ್​ ನಟನೆಯ ‘ಭಲೇ ಚತುರ’ ಸೇರಿದಂತೆ ಮುಂತಾದ ಸಿನಿಮಾಗಳನ್ನು ಕೆಸಿಎನ್​ ಮೋಹನ್​ ನಿರ್ಮಾಣ ಮಾಡಿದ್ದರು. ಮೋಹನ್​ ಅವರ ತಂದೆ ಕೆಸಿಎನ್​ ಗೌಡ ಕೂಡ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

'ಪೊಗರು' ಸಿನಿಮಾದಲ್ಲಿ ನಟಿಸಿದ್ದ ಜರ್ಮನ್ ಬಾಡಿಬಿಲ್ಡರ್ ನಿಧನ: 30ನೇ ವಯಸ್ಸಿಗೆ ಪ್ರಾಣಬಿಟ್ಟ ಜೋ ಲಿಂಡ್ನರ್

ಡಾ. ರಾಜ್​ಕುಮಾರ್​ ನಟನೆಯ ಹಲವು ಸಿನಿಮಾಗಳಿಗೆ ಕೆಸಿಎನ್​ ಗೌಡ ಅವರು ಬಂಡವಾಳ ಹೂಡಿದ್ದರು. ಕಪ್ಪು ಬಿಳುಪಿನಲ್ಲಿ ಮೂಡಿಬಂದಿದ್ದ ರಾಜ್​ಕುಮಾರ್​ ನಟನೆಯ ‘ಸತ್ಯ ಹರಿಶ್ಚಂದ್ರ’ ಮತ್ತು ‘ಕಸ್ತೂರಿ ನಿವಾಸ’ ಸಿನಿಮಾವನ್ನು ಕಲರ್​ಗೆ ಪರಿವರ್ತಿಸಿ ಬಿಡುಗಡೆ ಮಾಡಿದ ಖ್ಯಾತಿ ಕೆಸಿಎನ್​ ಮೋಹನ್​ ಅವರಿಗೆ ಸಲ್ಲುತ್ತದೆ. ಮೋಹನ್​ ಅವರ ಪತ್ನಿ ರೇಣುಕಾ ಮೋಹನ್ ಅವರು ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದರು. ‘ಜೂಲಿ’ ಸಿನಿಮಾ ಮೂಡಿಬಂದಿದ್ದು ರೇಣುಕಾ ಅವರ ನಿರ್ದೇಶನದಲ್ಲಿ. 2017ರಲ್ಲಿ ರೇಣುಕಾ ನಿಧನರಾದರು.

Latest Videos
Follow Us:
Download App:
  • android
  • ios