ಈ ಬಾರಿ ಕೃಷ್ಣ ಅವರು ಕೈಗೆತ್ತಿಕೊಂಡಿರುವ ಎರಡು ಚಿತ್ರಗಳ ಪೈಕಿ ಒಂದು ಚಿತ್ರಕ್ಕೆ ಹೊಸಬರು ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಮತ್ತೊಂದು ಚಿತ್ರದ ನಿರ್ದೇಶನದ ಸಾರಥಿಯಾಗಿ ಕೃಷ್ಣ ಅವರೇ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಈ ಎರಡೂ ಚಿತ್ರಗಳನ್ನು ತಾವೇ ನಿರ್ಮಿಸುತ್ತಿದ್ದಾರೆ.

‘ಪೈಲ್ವಾನ್’ ಪೈರಸಿ ಆರೋಪಿ ರಾಕೇಶ್ ಬಂಧನ 

‘ಎರಡು ಚಿತ್ರಗಳಿಗೆ ಸ್ಕಿ್ರಪ್ಟ್‌ ಪೂಜೆ ಮಾಡಿದ್ದೇನೆ. ಸಾಮಾನ್ಯವಾಗಿ ನನ್ನ ನಿರ್ದೇಶನದ ಪ್ರತಿ ಚಿತ್ರದ ಮುಹೂರ್ತ ಚಾಮುಂಡಿ ಬೆಟ್ಟದಲ್ಲೇ ನಡೆಯುತ್ತದೆ. ಈ ಬಾರಿ ಕೋವಿಡ್‌ ಕಾರಣಕ್ಕೆ ಸರಳವಾಗಿ ಪೂಜೆ ಮಾಡಿಕೊಂಡಿದ್ದೇವೆ. ಎರಡೂ ಚಿತ್ರಗಳಲ್ಲಿ ಸ್ಟಾರ್‌ ಹೀರೋಗಳೇ ನಟಿಸುತ್ತಿದ್ದಾರೆ. ಕತೆ ಓಕೆ ಆಗಿದೆ. ಈ ಬಗ್ಗೆ ಮಾತುಕತೆ ಆಗಿದ್ದು, ಸದ್ಯದಲ್ಲೇ ಅವರ ಹೆಸರುಗಳನ್ನು ಘೋಷಣೆ ಮಾಡಲಿದ್ದೇನೆ. ಎಂದಿನಂತೆ ದೊಡ್ಡ ಕಮರ್ಷಿಯಲ್‌ ಸಿನಿಮಾಗಳನ್ನೇ ಕೈಗೆತ್ತಿಕೊಂಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಕೃಷ್ಣ.

 

ಕೃಷ್ಣ ಅವರು ನಿಖಿಲ್‌ ಕುಮಾರ್‌ ಜತೆ ಸಿನಿಮಾ ಮಾಡುವ ಸುದ್ದಿ ಇತ್ತು. ಸದ್ಯಕ್ಕೆ ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಮುಂದೆ ಮಾಡಲಿದ್ದೇವೆ ಎಂಬುದು ಕೃಷ್ಣ ಅವರ ಮಾತು.

ಹೊಸಬರಿಗೆ ಅವಕಾಶ

ಈ ಎರಡು ಚಿತ್ರಗಳ ಜತೆಗೆ ಮತ್ತಿಬ್ಬರು ಹೊಸಬರ ಕತೆಗಳನ್ನು ಸಿನಿಮಾ ಮಾಡುತ್ತಿದ್ದಾರೆ ಕೃಷ್ಣ. ಈ ಎರಡೂ ಚಿತ್ರಗಳೂ ಪ್ರಯೋಗಾತ್ಮಕತೆಯಿಂದ ಕೂಡಿದ್ದು, ಸ್ಕಿ್ರಪ್ಟ್‌ ಕರೆಕ್ಷನ್‌ ನಡೆಯುತ್ತಿದೆ. ಇತ್ತೀಚೆಗೆ ಕೃಷ್ಣ, ಭಿನ್ನ ರೀತಿಯ ಸಿನಿಮಾ ಮಾಡುವ ಉದ್ದೇಶದೊಂದಿಗೆ ಕತೆ, ರೈಟರ್ಸ್‌ಗೆ ಆಹ್ವಾನ ನೀಡಿದ್ದರು. ಇವರಲ್ಲಿ ಆಯ್ಕೆ ಆದ ಎರಡು ಕತೆಗಳನ್ನೇ ಮುಂದೆ ತಮ್ಮ ಸಂಸ್ಥೆಯಲ್ಲಿ ಸಿನಿಮಾ ಮಾಡಲಿದ್ದಾರೆ ಕೃಷ್ಣ.