ಬೆಳ್ಳಂಬೆಳಗ್ಗೆ ಟಾಟಾ ಸ್ಕೈ ಸಿಬ್ಬಂದಿಯೊಬ್ಬರ ಜೊತೆ ಮಾತನಾಡಿದ ನಿರ್ದೇಶಕ ಚೈತನ್ಯ ಭಾರತದ ಅಧಿಕೃತ ಭಾಷೆ, ಕರ್ನಾಟಕದಲ್ಲಿ ಜನರು ಹೆಚ್ಚಾಗಿ ಬಳಸುವ ಕನ್ನಡ ಭಾಷೆ ಬಗ್ಗೆ ಬರೆದುಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಭಾರತ ದೇಶದಲ್ಲಿ ಪ್ರತಿ ಮಾತೃಭಾಷೆಗೂ ಆಯಾ ರಾಜ್ಯಗಳಲ್ಲಿ ಹೆಚ್ಚಿನ ಪ್ರಮುಖ್ಯತೆ ಪಡೆದುಕೊಳ್ಳುತ್ತದೆ. ಆದರೆ ಜನರೊಂದಿಗೆ ಸಂವಹನ ನಡೆಸಲು ಸುಲಭವಾದ ಭಾಷೆ ಎಂದು ವಿಂಗಿಡಿಸಿಕೊಂಡಿರುವ ಇಂಗ್ಲಿಷ್ ಮತ್ತು ಹಿಂದಿಗೆ ಇನ್ನಷ್ಟು ವಿಶೇಷ ಸ್ಥಾನವಿದೆ ಎಂಬುವುದರಲ್ಲಿ ಅನುಮಾನವೇ ಇಲ್ಲ. ತಮ್ಮ ಕಾರ್ಯವೈಖರಿಯಿಂದ ನಾವು ಇನ್ನೊಬ್ಬರೊಟ್ಟಿಗೆ ಮಾತನಾಡಲು ಆಯ್ಕೆ ಮಾಡಿಕೊಳ್ಳುವುದು ಹಿಂದಿ. ಏಕೆಂದರೆ ಅದು ದೇಶದ ಬಹು ಜನರು ಬಳಸುವ ಭಾಷೆಯಾಗಿರುವುದರಿಂದ.
ಲಕ್ಷ್ಮಣ್ ಸವದಿಗೆ ಒಲಿದ DCM ಹುದ್ದೆ; ಅವಾಚ್ಯ ಪದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕ!
ಈ ಬಗ್ಗೆ ಸ್ಯಾಂಡಲ್‌ವುಡ್ ನಿರ್ದೇಶಕ ಕೆ ಎಂ ಚೈತನ್ಯ ಫೇಸ್‌ಬುಕ್‌ನಲ್ಲಿ ಒಂದು ಘಟನೆಯೊಂದರ ಉದಾಹರಣೆ ನೀಡಿ, ಬರೆದು ಕೊಂಡಿದ್ದಾರೆ. ಆ ಮೂಲಕ ಮಾತೃ ಭಾಷೆ ಹಾಗೂ ಕರ್ನಾಟಕದಲ್ಲಿ ಕನ್ನವಡೇ ಸಾರ್ವಭೌಮ ಎಂಬುದರ ಬಗ್ಗೆ ಹೇಳಿದ್ದಾರೆ.
'ಇಂದು ಬೆಳಗ್ಗೆ ಟಾಟಾ ಸ್ಕೈ ಕಂಪನಿಯಿಂದ ಕರೆ ಬಂದಿತ್ತು. ಮಹಿಳೆಯೊಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಕೆಲವು ಸಾಲುಗಳ ನಂತರ ನಾನು ಅವರಲ್ಲಿ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಮಾತನಾಡಲು ವಿನಂತಿಸಿಕೊಂಡೆ. ನಾನು ಹಿಂದಿಭಾಷಾ ವಿರೋಧಿ ಅಲ್ಲ. ನನಗೆ ಹಿಂದೆ ಸಿನಿಮಾಗಳು ಹಾಗೂ ಹಿಂದಿ ಹಾಡುಗಳು ತುಂಬಾನೇ ಇಷ್ಟ. ಆದರೆ ಕನ್ನಡಿಗನಾಗಿ ನಾನು ಕೆಲವು ವಿಚಾರಗಳನ್ನು ಮಿಸ್ ಮಾಡಿಕೊಳ್ಳುವೆ,' ಎಂದು ತಮಗೆ ಕನ್ನಡ ಭಾಷೆ ಬಗ್ಗೆ ಇರುವ ಅಭಿಮಾನವನ್ನು ಹಂಚಿಕೊಂಡಿದ್ದಾರೆ.
'ಬೇರೆ ಭಾಷೆಯವರ ಜೊತೆ ಮಾತನಾಡುವಾಗ ನಾನು ಒಂದೋ ನನ್ನ ಭಾಷೆಯಲ್ಲಿ ಮಾತನಾಡುವೆ, ಇಲ್ಲವಾದರೆ ಇಂಗ್ಲಿಷ್ ಆಯ್ಕೆ ಮಾಡಿಕೊಳ್ಳುವೆ. ಆದರೆ ಹಿಂದೆ ಮಾತನಾಡುವವರು ಮಾತ್ರ ಎಲ್ಲರಿಗೂ ಹಿಂದಿ ಗೊತ್ತಿದೆ ಎಂದುಕೊಳ್ಳುತ್ತಾರೆ. ಇದಕ್ಕೆ ಕಾರಣ ಈಗಲೂ ಜನರು ಹಿಂದೆ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಭಾವಿಸಿರುವುದು. ಆದರೆ ಅದು ಸತ್ಯ ಅಲ್ಲ,' ಎಂದು ಮನದಟ್ಟು ಮಾಡಿದ್ದಾರೆ.
ಕಾನೂನು ಏನು ಹೇಳುತ್ತದೆ?
ಕಾನೂನಿನ ಪ್ರಕಾರ ಭಾರತದಲ್ಲಿರುವ ಪ್ರತಿ ಭಾಷೆಯೂ ಅಧಿಕೃತ ಭಾಷೆಗಳೇ. ಅದರಲ್ಲೂ ಕೆಲವರು ಇಂಗ್ಲಿಷ್ ಏಕೆ ಬಳಸ ಬೇಕು? ಅದು ನಮ್ಮ ಭಾರತದ ಭಾಷೆ ಅಲ್ಲ ಎಂದು ವಾದ ಮಾಡುವವರೂ ಇದ್ದಾರೆ. ಆದರೆ ನಿಜ ಹೇಳಬೇಕೆಂದರೆ ದಕ್ಷಿಣ ಭಾರತದ ಜನರಿಗೆ ಹಿಂದಿ ಹಾಗೂ ಇಂಗ್ಲೀಷ್ ಎರಡೂ ಒಂದೇ. ಎರಡೂ ನಮ್ಮ ಭಾಷೆಯಲ್ಲ. ನಮ್ಮ ಭಾಷೆಯನ್ನು ನಾವು ಗೌರವಿಸಿದರೆ ಮಾತ್ರ ನಾವೂ ಭಾರತೀಯರು. ನಿಮ್ಮ ಆಫೀಸಿನಲ್ಲಿ ಯಾರಾದರೂ ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದರೆ, ನೀವು ನಿಮ್ಮ ಮಾತೃಭಾಷೆಯಲ್ಲಿ ಉತ್ತರಿಸಿ. ಅರ್ಥವಾಗುತ್ತಿಲ್ಲ ಎಂದು ಎದುರಿರುವ ವ್ಯಕ್ತಿ ವಿರೋಧ ವ್ಯಕ್ತ ಪಡಿಸಿದರೆ, ಅವರಿಗೆ ತಪ್ಪು ಏನೆಂದು ಅರ್ಥ ಮಾಡಿಸಿ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಹೀಗೆ ರಾಜ್ಯದ ಕೆಲವು ಸಿನಿ ಮಂದಿ ಕನ್ನಡಕ್ಕಾಗಿ ಕೈ ಎತ್ತಿದರೆ ಬಹುಶಃ ಕನ್ನಡ ಭಾಷೆಯನ್ನು ಉಳಿಸಲು, ಬೆಳೆಸಲು ನೆರವಾಗಬಹುದು.
