1. ಇದು ಆಗಬೇಕಾಗಿದ್ದೇ, ಈಗ ಆಗಿದೆ. ಅದರ ಪರಿಣಾಮ ಬರೀ ಚಿತ್ರೋದ್ಯಮಕ್ಕೆ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಿಗೂ ಆಗಿದೆ.

2. ನಷ್ಟಕಷ್ಟಎನ್ನುವುದು ನಮ್ಮೋರಿಗೆ ಮಾತ್ರವಲ್ಲ. ರೈತರು, ನೌಕರರು, ಕಾರ್ಮಿಕರು, ಉದ್ಯಮಿಗಳು ಹೀಗೆ ಎಲ್ಲರಿಗೂ ಆಗಿದೆ. ನಾವು ಈ ಕ್ಷೇತ್ರದಲ್ಲಿ ಇರೋದ್ರಿಂದ ನಮಗೆ

ಭಾರೀ ತೊಂದರೆ ಆಗಿದೆ ಅಂತನಿಸುತ್ತಿದೆ.

3. ಇದು ಪ್ರಕೃತಿಯ ಮುನಿಸು. ಯಾಕಾಯಿತು, ಏನಾಯಿತು ಅಂತ ನೋಡಹೊರಟರೆ ಅಂತಿಮವಾಗಿ ಪ್ರಕೃತಿ ಮೇಲೆ ಮನುಷ್ಯ ನಡೆಸಿದ ದೌರ್ಜನ್ಯದ ಕಲೆಗಳೇ ಕಾಣುತ್ತಿವೆ. ಈಗ ಅದು ತನ್ನನ್ನು ತಾನು ಸರಿಪಡಿಸಿಕೊಳ್ಳುತ್ತಿದೆ ಅಷ್ಟೇ.

ಸೂರಿ ಕೈ ತಪ್ಪಿಲ್ಲ 'ಕಾಗೆ ಬಂಗಾರ'; ಇಲ್ಲೂ ಇರ್ತಾರೆ ಬಬ್ಲೂ, ಹಾವ್ರಾಣಿ!

4. ನಾವು ಮನುಷ್ಯರೆನ್ನುವುದೇನೋ ನಿಜ, ಆದರೆ ಮನುಷ್ಯತ್ವ ಕಳೆದುಕೊಂಡಿದ್ದೇವೆ. ಅಹಂಕಾರದ ಮೇರೆ ಮೀರಿದೆ. ಆಧುನಿಕತೆಯ ಸೋಗಿನಲ್ಲಿ ಭಾವುಕತೆ ಕಳೆದುಕೊಂಡಿದ್ದೇವೆ. ನನಗನಿಸುತ್ತೆ, ಈ ಕೊರೋನಾ ಎನ್ನುವ ಮಹಾಮಾರಿ ನಮ್ಮ ಅಹಂಕಾರ ಹುಟ್ಟಡಗಿಸಲು ಬಂದಿದೆ.

5. ಕೊರೋನಾ ತುಂಬಾ ನಷ್ಟಉಂಟು ಮಾಡಿದೆ. ಜಗತ್ತೇ ತಲ್ಲಣ ಗೊಂಡಿದೆ. ನಮ್ಮಂತಹ ಸಿನಿಮಾವನ್ನೇ ನಂಬಿದ ಜನ ಕಂಗಾಲಾಗಿದ್ದಾರೆ. ಅವರಿಗೆ ಒಂದು ವ್ಯವಸ್ಥೆ ಆಗಬೇಕು. ಅದೇ ವೇಳೆ ಇದೆಲ್ಲ ಯಾಕಾಗಿ ಆಯಿತು ಅಂತ ಅವಲೋಕನ ಮಾಡಿಕೊಳ್ಳಬೇಕಿದೆ.

6 ನನ್ನ ಸಿನಿಮಾಗಳ ಕೆಲಸವೂ ಸೇರಿ ಸಾಕಷ್ಟುಸಿನಿಮಾ ಕೆಲಸ ನಿಂತಿವೆ. ಹತ್ತಾರು ಸಿನಿಮಾಗಳ ರಿಲೀಸ್‌ ದಿನಾಂಕ ಮುಂದಕ್ಕೆ ಹೋಗಿವೆ. ಇಡೀ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಪ್ರಕೃತಿ ಮುಂದೆ ನಾವೇನು ಮಾಡುವುದಕ್ಕೆ ಸಾಧ್ಯ?

7 ಬರೀ ಚಿತ್ರೋದ್ಯಮ ಮಾತ್ರವಲ್ಲ, ಜಗತ್ತಿಗೇ ಎದುರಾದ ಸಂಕಷ್ಟಇದು. ಉದ್ಯಮದಲ್ಲಿ ಸಂಕಷ್ಟದಲ್ಲಿರುವವರಿಗೆ ನಾವೆಲ್ಲ ನೆರವಿಗೆ ನಿಲ್ಲಬೇಕು. ಇದು ಒಂದು ಪಾಠ. ಬರೀ ಸಿನಿಮಾ ಮಂದಿಗೆ ಮಾತ್ರವಲ್ಲ, ಆಸ್ತಿವಂತರು, ಹಣ ಇರುವವರು ಇಲ್ಲದವರ ನೆರವಿಗೆ ಬರಬೇಕು. ಯಾಕೆಂದರೆ ಇದು ಬಡವರಿಗೆ, ದುರ್ಬಲ ಜನರಿಗೆ ಮಾತ್ರ ಬಂದಿಲ್ಲ. ಎಲ್ಲರಿಗೂ ಬಂದಿದೆ. ಇದನ್ನಾದರೂ ನೋಡಿ, ನಾವು ಪಾಠ ಕಲಿಬೇಕಿದೆ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.