ಕನ್ನಡ ಚಿತ್ರರಂಗದಲ್ಲಿ ಡಾಲಿ ಎಂದೇ ಖ್ಯಾತಿ ಪಡೆದಿರುವ ಧನಂಜಯ್ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಮ್ಮ ಮತ್ತೊಂದು ಚಿತ್ರದ ಟೈಟಲ್‌ 'ರತ್ನನ್‌ ಪ್ರಪಂಚ' ಎಂದು ರಿವೀಲ್ ಮಾಡಿದ್ದಾರೆ. ರೆಟ್ರೋ ಶೇಡ್‌ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

7ನೇ ಕ್ಲಾಸ್‌ನಲ್ಲೇ ರಾಜನಾದ ಖ್ಯಾತ ಸ್ಯಾಂಡಲ್‌ವುಡ್‌ ಖ್ಯಾತ ನಟ!

ಸದ್ಯಕ್ಕೆ ಕೈ ತುಂಬಾ ಸಿನಿಮಾ ಆಫರ್‌ ಹಿಡಿದು ನಿಂತಿರುವ ಧನಂಜಯ್‌ ಅವರನ್ನು ಡಿಫರೆಂಟ್‌ ಪಾತ್ರಗಳಲ್ಲಿ ಅಭಿಮಾನಿಗಳು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಸೂರಿ ನಿರ್ದೇಶನದ 'ಪಾಪ್‌ ಕಾರ್ನ್‌ ಮಂಕಿ ಟೈಗರ್' ಚಿತ್ರದ 'ಬಡವ ರಾಸ್ಕಲ್‌' ಹಾಗೂ 'ಜಯರಾಜ್‌' ಬಯೋಪಿಕ್‌ನಲ್ಲಿಯೂ ಅವರು ಬ್ಯುಸಿಯಾಗಿದ್ದಾರೆ.

 

ಒಂದು ಕಥೆಯಲ್ಲಿ ಹೀರೋ, ಮತ್ತೊಂದು ಕಥೆಯಲ್ಲಿ ವಿಲನ್‌ ಆಗಿ ನಟಿಸುತ್ತಿರುವ ಧನಂಜಯ್ ತಮ್ಮ ಮುಂದಿನ ಸಿನಿಮಾದಲ್ಲಿ ಕನ್ನಡತಿ ಡಿಂಪಲ್ ಕ್ವೀನ್‌ ರಚಿತಾ ರಾಮ್ ಜೊತೆ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಅದು ಇದೇ ಚಿತ್ರ ಕಥೆನಾ ಅಥವಾ ಮತ್ತೊಂದಾ ಎಂಬ ಕ್ಲ್ಯಾರಿಟಿ ಸದ್ಯಕ್ಕೆ ಸಿಕ್ಕಿಲ್ಲ.

ಧರ್ಮಕ್ಕಿಂತಲೂ ವಿಜ್ಞಾನದ ಅರಿವು ಹೆಚ್ಚಿಸಿಕೊಳ್ಳಬೇಕಿದೆ: ಡಾಲಿ ಮನ್‌ ಕಿ ಬಾತ್ 

ಕೆಆರ್‌ಜಿ ಸ್ಟುಡಿಯೋ ಬ್ಯಾನರ್‌ ಅಡಿಯಲ್ಲಿ ಮೂಡಿ ಬರುತ್ತಿರುವ 'ರತ್ನನ್‌ ಪ್ರಪಂಚ' ಚಿತ್ರಕ್ಕೆ ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ಬಂಡವಾಳ ಹಾಕಲಿದ್ದಾರೆ. ಇಷ್ಟು ದಿನಗಳ ಕಾಲ ವಿತರಣೆ ಮಾಡುತ್ತಿದ್ದ ಕೆಆರ್‌ಜಿ ಸ್ಟುಡಿಯೋ, ಇದೆ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕುತ್ತಿದೆ. ವಸಿಷ್ಠ ಸಿನಿಮಾ ಅಭಿನಯದ 'ದಯವಿಟ್ಟು ಗಮನಿಸಿ' ಸಿನಿಮಾ ನಿರ್ದೇಶನ ಮಾಡಿದ ರೋಹಿತ್‌ ಪದಕಿ ಈ ಚಿತ್ರದಕ್ಕೂ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ.