ಡಾಲಿಯನ್ನು ಲವರ್‌ ಬಾಯ್‌ ಆಗಿ ನೋಡಿದ್ದೀರಿ, ವಿಲನ್ ಆಗಿ ನೋಡಿಯಾಗಿದೆ, ಮಾಸ್‌ ಲೀಡರ್‌ ಆಗಿಯೂ ನೋಡಿದ್ದೀರಿ...ಎಂದಾದರೂ ಈ ವೇಷಭೂಷಣದಲ್ಲಿ ನೋಡಿದ್ದೀರಾ? 

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ, ಯಾವ ಪಾತ್ರ ಕೊಟ್ಟರೂ ಚಿಟಿಕೆ ಹೊಡೆಯುವಷ್ಟರಲ್ಲಿ ಪರ್ಫೆಕ್ಟ್‌ ಆಗಿ ಮಾಡಿ ತೋರಿಸು ನಟನೆಂದರೆ ಡಾಲಿ ಧನಂಜಯ್. ಇತ್ತೀಚಿನ ದಿನಗಲ್ಲಿ ಡಾಲಿ ಎಂದೇ ಖ್ಯಾತಿ ಪಡೆದಿರುವ ಧನಂಜಯ್‌ ಶೇರ್ ಮಾಡಿಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ನಟ ಧನಂಜಯ್ ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರ ಅಭಿಮಾನಿಗಳು ಪ್ರತಿ ಫೋಟೋವನ್ನೂ ಸಿಕ್ಕಾಪಟ್ಟೆ ವೈರಲ್‌ ಮಾಡುತ್ತಾರೆ. ದಿ ಲಿಟಲ್‌ ಧನಂಜಯ್‌ ಹೇಗದ್ದಾರೆ ನೋಡಿದ್ದೀರಾ?

ಕೊರೋನಾ ಸಂಕಷ್ಟ: ಜನರ ನೆರವಿಗೆ ಡಾಲಿ ಧನಂಜಯ್‌

ಇನ್‌ಸ್ಟಾಗ್ರಾಂ ಖಾತೆಯಲ್ಲಿ '7ನೇ ತರಗತಿಯಲ್ಲಿ ರಾಜಕುಮಾರನ ಪಾತ್ರದಲ್ಲಿ' ಎಂದು ಬರೆದುಕೊಂಡಿದ್ದಾರೆ, ಈ ಫೋಟೋಗೆ.

ಅಭಿಮಾನಿಗಳ ಕಾಮೆಂಟ್‌:
ಡಾಲಿ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ' ಅವಾಗ್ಲೇ, ಹಂಗೆ.. ಇವಾಗ ಹೇಳ್ಬೇಕಾ, ಅಣ್ಣ ಸೂಪರ್...' ಮತ್ತು 'ನೀವು ಯಾವತ್ತೂ ರಾಜಕುಮಾರನೇ' ಎಂದು ಕಾಮೆಂಟ್‌ ಮಾಡಿದ್ದಾರೆ.

View post on Instagram

ಇತ್ತೀಚೆಗೆ ಡಾಲಿ ಅವರಿಗೆ ಸಿಕ್ಕಾಪಟ್ಟೆ ಆಫರ್ಸ್ ಬರುತ್ತಿದ್ದು, ಕೊರೋನಾ ಸಂಕಷ್ಟದ ನಡುವೆಯೂ ಹಲವು ಅವಕಾಶಗಳನ್ನು ಸೃಷ್ಟಿ,ಸಿಕೊಳ್ಳುತ್ತಿದ್ದಾರೆ. ತಮ್ಮದೇ ಸ್ವಂತ ನಿರ್ಮಾಣದ ಚಿತ್ರವೂ ಸೇರಿ ಐದು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ಡಾಲಿ. ಡಾಲಿ ಹೊಸದಾಗಿ ಒಪ್ಪಿಕೊಂಡಿರುವ ಚಿತ್ರವನ್ನು ನಿರ್ಮಿಸುತ್ತಿರುವುದು ‘ತ್ರಿವಿಕ್ರಮ್‌’ ಚಿತ್ರವನ್ನು ನಿರ್ಮಿಸಿದ್ದ ಸೋಮಣ್ಣ ಹಾಗೂ ಸುರೇಶ್‌. ಕತೆ ಹಾಗೂ ನಿರ್ದೇಶಕರು ಆಯ್ಕೆಯಾಗಬೇಕಿದ್ದು, ಹೊಸ ಚಿತ್ರಕ್ಕೆ ಕಮಿಟ್‌ ಆಗಿ ಅಡ್ವಾನ್ಸ್‌ ಪಡೆದುಕೊಂಡಿದ್ದಾರೆ ಧನಂಜಯ್‌.

ತಮ್ಮದೇ ಮೊದಲ ನಿರ್ಮಾಣದ ‘ಬಡವ rascal‌’ ಚಿತ್ರೀಕರಣ ಮುಗಿಸಿದ್ದಾರೆ. ಅಲ್ಲದೇ ಪುನೀತ್‌ ರಾಜ್‌ಕುಮಾರ್‌ ಅವರ ‘ಯುವರತ್ನ’ ಹಾಗೂ ಧ್ರುವ ಸರ್ಜಾ ಅವರ ‘ಪೊಗರು’ ಚಿತ್ರಗಳಲ್ಲಿ ಮಹತ್ವ ಪಾತ್ರ ನಿರ್ವಹಿಸಿದ್ದಾರೆ. ತೆಲುಗಿನ ಅಲ್ಲೂ ಅರ್ಜುನ್‌ ನಟನೆಯ ‘ಪುಷ್ಪ’ ಚಿತ್ರದಲ್ಲೂ ನೆಗೆಟಿವ್‌ ಪಾತ್ರ ಮಾಡುವುದಕ್ಕೆ ಆಹ್ವಾನ ಬಂದಿದ್ದು, ಕೊರೋನಾ ಸಂಕಷ್ಟ ತಿಳಿಯಾದ ಮೇಲೆ ಈ ಬಗ್ಗೆ ಮಾತುಕತೆ ಮಾಡಲಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಧನಂಜಯ್ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಅವರು ಒಪ್ಪಿಕೊಳ್ಳುತ್ತಿರುವ ಚಿತ್ರಗಳೂ ವಿಶೇಷತೆಯಿಂದ ಕೂಡಿದ್ದು, ಎಲ್ಲವೂ ಒಂದೇ ರೀತಿಯಲ್ಲಿ ಇಲ್ಲ. ಖಳ ನಾಯಕ, ನಾಯಕ ಎಲ್ಲ ರೀತಿಯ ಪಾತ್ರಗಳು ಈ ಕನ್ನಡದ ಪ್ರತಿಭಾನ್ವಿತ ನಟನನ್ನು ಹುಡುಕಿಕೊಂಡು ಬರುತ್ತಿವೆ.