ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಿತು. ‘ಪ್ರಥಮ, ಉತ್ತಮ, ಜೀವನಧಾಮ’ ಎನ್ನುವ ಟ್ಯಾಗ್‌ಲೈನ್‌ ಒಳಗೊಂಡ ಈ ಚಿತ್ರವನ್ನು ಎಸ್‌ ಜೇವರ್ಗಿ, ಪುಷ್ಪಲತಾ ಕುಡ್ಲೂರು ಹಾಗೂ ವೀಣಾ ಶ್ರೀನಿವಾಸ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆಯುವುದರ ಜೊತೆಗೆ ನಾಯಕನಾಗಿ ನಟಿಸುವ ಜವಾಬ್ದಾರಿಯನ್ನೂ ಶಿವಕುಮಾರ್‌ ಜೇವರ್ಗಿ ವಹಿಸಿಕೊಂಡಿದ್ದಾರೆ.

ತೆಲುಗಿನಲ್ಲೂ ತಯಾರಾಗಲಿದೆ ಓಲ್ಡ್‌ ಮಾಂಕ್‌;ಚಿತ್ರಕ್ಕೆ ಬಿಡುಗಡೆ ಮುನ್ನವೇ ಭಾರಿ ಬೇಡಿಕೆ!

ಚಿತ್ರರಂಗದಲ್ಲಿ ಕಳೆದ ಎರಡು ದಶಕಗಳಿಂದ ನೂರಕ್ಕೂ ಹೆಚ್ಚು ಚಲನಚಿತ್ರಗಳಿಗೆ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡಿರುವ ಎಂ.ಆರ್‌.ಕಪಿಲ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಐದನೇ ಚಿತ್ರ ಇದು. ‘ಲಾಕ್‌ಡೌನ್‌ ಸಮಯದಲ್ಲಿ ಇಪ್ಪತ್ಮೂರು ಕಥೆಗಳನ್ನು ರೆಡಿ ಮಾಡಿಕೊಂಡಿದ್ದೆ. ಅದರಲ್ಲಿ ಈ ಕಥೆಯೂ ಒಂದು. ಈಗಿನ ಡಿಜಿಟಲ್‌ ಯುಗದಲ್ಲಿ ಗಂಡ ಹೆಂಡತಿ ನಡುವಿನ ಸಂಬಂಧ ಯಾವ ರೀತಿ ಇರುತ್ತದೆ, ಅವರ ನಡುವೆ ಭಿನ್ನಾಭಿಪ್ರಾಯ ಬಂದಾಗ ಮಕ್ಕಳು ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕತೆ ಹೊಂದಿದೆ ಈ ಸಿನಿಮಾ’ ಎಂದು ಕಪಿಲ್‌ ವಿವರಿಸಿದರು.

ಕೊಲಮಾವು ಕೋಕಿಲ ರೀಮೇಕ್‌ ಹೆಸರು ಪಂಕಜ ಕಸ್ತೂರಿ 

‘ಈ ಚಿತ್ರದಲ್ಲಿ ನನ್ನದು ಸಂಸಾರದ ಹಿರಿಯನ ಪಾತ್ರ. ನಾನು ಮೂಲತಃ ರಂಗಭಮಿ ಕಲಾವಿದ. ಎಸ್‌.ಕೆ. ಭಗವಾನ್‌, ತಿಪಟೂರು ರಘು ಬಳಿ ನಟನೆ ಪಾಠ ಕಲಿತಿದ್ದೇನೆ. ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಪುನೀತ್‌ ಮಾಡಿದ ಪಾತ್ರ ನೋಡಿದ ಮೇಲೆ ನಾನೂ ಚಿತ್ರರಂಗದಲ್ಲಿ ಏಕೆ ಪ್ರಯತ್ನಿಸಬಾರದು ಎನ್ನುವ ಆಸೆ ಮೂಡಿತ್ತು. ಇದೀಗ ಕೈಗೂಡಿದೆ’ ಎಂಬುದು ಚಿತ್ರದ ನಾಯಕ ಶಿವಕುಮಾರ್‌ ಮಾತುಗಳು.

ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ಶಿವಪ್ಪ ಕುಡ್ಲೂರು ಮಾಡುತ್ತಿದ್ದಾರೆ. ಮನೋಜ್ಞ ಕುಡ್ಲುರು ಹಾಗೂ ವಿನಯ್‌ ಹಾಸನ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನೇಶ್‌ ಈಶ್ವರ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ಸಿ. ನಾರಾಯಣ್‌ ಛಾಯಾಗ್ರಹಣ ಮಾಡಲಿದ್ದಾರೆ.