ಮಹಾಮಾರಿ ಕೊರೋನಾ ವೈರಸ್‌ ಜನರ ಮನಸ್ಥಿತಿ ಹಾಗೂ ಆರ್ಥಿಕ ಪರಿಸ್ಥಿತಿ ಜೊತೆ ಆಟವಾಡುತ್ತಿದೆ. ಇದರಿಂದ ಕೆಳವರ್ಗ ಮತ್ತು ಮಧ್ಯಮವರ್ಗದ ಜನರ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಚಿತ್ರ ಪ್ರದರ್ಶನ ಕಾಣದೇ,ಚಿತ್ರೀಕರಣ ನಡೆಯದೆ ಅದೆಷ್ಟೋ ಕಲಾವಿದರ ಜೀವನ ಕಷ್ಟದಲ್ಲಿದೆ. 

ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಕನಸು ಹೊತ್ತ ಕಲಾ ನಿರ್ದೇಶಕ ಲೋಕೇಶ್‌ ಆರ್ಥಿಕ ಸಂಕಷ್ಟದಿಂದ ತಮ್ಮ ಬೆಂಗಳೂರಿನ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಬೆಲ್ ಬಾಟಂ ಚಿತ್ರದ ನಿರ್ಮಾಪಕ ಸಂತೋಷ್‌ ಮಾಹಿತಿ ನೀಡಿದ್ದಾರೆ.

ಬುಲೆಟ್ ಪ್ರಕಾಶ್ ಬೆನ್ನಲ್ಲೇ ಮತ್ತೊಬ್ಬ ಹಾಸ್ಯ ನಟನನ್ನು ಕಳೆದುಕೊಂಡ ಸ್ಯಾಂಡಲ್‌ವುಡ್!

ಮೂಲತಃ ನಾಗಮಂಗಲದವರಾಗಿದ್ದ ಲೋಕೇಶ್‌ ರಕ್ಷಿತ್ ಶೆಟ್ಟಿ ನಿರ್ದೇಶನದ ಅವನೇ ಶ್ರೀಮನ್ನಾರಾಯಣ ಹಾಗೂ ರಿಷಬ್ ಶೆಟ್ಟಿ ಅವರ ಬೆಲ್ ಬಾಟಂ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿ ಆರ್ಟ್‌ ಡಿಪಾರ್ಟ್ಮೆಂಟ್‌ನಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದರು. ಕೆಲವು ವರ್ಷಗಳ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡರು. ಈ ಕಾರಣಕ್ಕೆ ಅಣ್ಣನ ಜೊತೆಗೆ ವಾಸವಿದ್ದ ಲೋಕೇಶ್‌ಗೆ  ಆರ್ಥಿಕ ಸಂಕಷ್ಟ ಎದುರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಲೋಕೇಶ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"