ಶ್ರೀರಂಗಪಟ್ಟಣ: ತಾಯಿ ಹಾಗೂ ಸ್ನೇತರೊಂದಿಗೆ ಆಗಮಿಸಿದ್ದ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಹಿಂದೆ ಕುಟುಂಬ ಸದಸ್ಯರು ಮಾಡಿಕೊಂಡಿದ್ದ ಹರಕೆ ತೀರಿಸಲು ದೇವಾಲಯಕ್ಕೆ ಬಂದಿದ್ದಾಗಿ ದೇವಾಲಯದ ಅರ್ಚಕರು ತಿಳಿಸಿದ್ದಾರೆ.

ಸದ್ಯ ಸ್ಯಾಂಡ್‌ಲ್‌ವುಡ್‌ನಲ್ಲಿ ಈಗಾಗಲೇ ಹಲವು ನಟ, ನಟಿಯರು ಸೇರಿದಂತೆ ಇತರರೂ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿರುವರ ಬಗ್ಗೆ ತನಿಖೆ ನಡೆಯುತ್ತಿದ್ದು, ಅನುಶ್ರೀ ಕೂಡಾ ಈಗಾಗಲೇ ವಿಚಾರಣೆಗೆ ಒಳಪಟ್ಟಿದ್ದಾರೆ.

ಅಲ್ಲದೇ ಖ್ಯಾತ ರಿಯಾಲಿಟಿ ಸ್ಟಾರ್‌ ಜೊತೆ ಅನುಶ್ರೀ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂಬ ಆರೋಪ ಇತ್ತೀಚಿಗೆ ಕೇಳಿ ಬರುತ್ತಿದೆ. ಬಿಗ್ ಬಾಸ್‌ ರಿಯಾಲಿಟಿ ಶೋಗೂ ನಶೆ ನಂಟಿದ್ದು, ಒಂದು ಸೀಝನ್‌ನಲ್ಲಿದ್ದ ನಟಿಗೂ ಡ್ರಗ್ಸ್ ದಂಧೆ ನಂಟಿದೆ ಎಂದು ಸ್ಯಾಮ್ ಫರ್ನಾಂಡೀಸ್‌ ಹೇಳಿದ್ದಾರೆ. ಆದರೆ ವಿಚಾರಣೆ ದಿನದಿಂದಲೂ ಅನುಶ್ರೀ ಒಂದೇ ಮಾತು ಹೇಳುತ್ತಿರುವುದು 'ನನಗೂ ಇದಕ್ಕೂ, ಯಾವುದೇ ಸಂಬಂಧವಿಲ್ಲ. ವ್ಯಕ್ತಿ ಪರಿಚಯವಿದ್ದ ಕಾರಣ ತನಿಖೆಗೆ ಕರೆದಿದ್ದರು' ಎಂದು ಹೇಳಿದ್ದಾರೆ.

ದೇವಾಲಯದಲ್ಲಿ ಅನುಶ್ರೀಯನ್ನು ಕಂಡು ಅಭಿಮಾನಿಗಳು ಸೆಲ್ಫೀ ಪಡೆಯಲು ಮುಗಿಬಿದಿದ್ದಾರೆ. ಆದರೆ ಕೊರೋನಾ ನಿಯಮದ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿ ದೂರ ಸರೆದಿದ್ದಾರೆ. ಆಗ ಸ್ನೇಹಿತರು ಅನುಶ್ರೀಗೆ ರಕ್ಷಣೆ ನೀಡಿದ್ದಾರೆ.

"