12 ವರ್ಷಗಳ ನಂತರ ಮತ್ತೆ ಚರ್ಚೆ ಆಗುತ್ತಿದೆ ಬಹುಭಾಷಾ ನಟಿ ಯಮುನಾ ವೇಶ್ಯಾವಾಟಿಕೆ ಪ್ರಕರಣ. ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ನಟಿ.... 

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಅಭಿನಯಿಸಿರುವ ನಟಿ ಯಮುನಾ 12 ವರ್ಷಗಳ ಹಿಂದೆ ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ನಾಲ್ಕು ಮಹಡಿಗಳನ್ನು ಬಾಡಿಗೆ ಪಡೆದುಕೊಂಡು, ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಪೊಲೀಸರು ರೇಡ್ ಮಾಡಿ, ನಟಿ ಯಮುನಾರನ್ನು ವಶಕ್ಕೆ ಪಡೆದಿದ್ದರು. ಈ ಘಟನೆಯಲ್ಲಿ ನಾನು ನಿರಪರಾಧಿ ಎಂದು ಸಾಬೀತು ಮಾಡಿದ್ದರೂ, ಜನರು ಪದೆ ಪದೇ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ತಪ್ಪು ಎಂದು ಹೇಳಿಕೊಂಡಿದ್ದಾರೆ. 

'ಎಲ್ಲರಿಗೂ ನಮಸ್ಕಾರ. ಜೀವನದಲ್ಲಿ ನನ್ನನ್ನು ನಾನು ಎಷ್ಟು ಮೋಟಿವೇಟ್ ಮಾಡಿಕೊಂಡರೂ ಕಾಡುತ್ತಿರುವುದು ಒಂದೇ ನೋವು. ಇಷ್ಟು ವರ್ಷವಾದರೂ ಆ ನೋವು ನನ್ನಲ್ಲಿ ಉಳಿದು ಬಿಟ್ಟಿದೆ. ಪದೇ ಪದೇ ನೋವಾಗಲು ಕಾರಣ ಸೋಷಿಯಲ್ ಮೀಡಿಯಾ. ಬಹಳ ವರ್ಷಗಳ ಹಿಂದೆಯೇ ದೊಡ್ಡ ಸಮಸ್ಯೆಯೊಂದನ್ನು ಎದುರಿಸಿ ಅದರಿಂದ ಹೊರ ಬಂದು ನಿಶ್ಚಿಂತೆಯಿಂದ ಜೀವನ ನಡೆಸುತ್ತಿರುವೆ. ಆ ಸಮಸ್ಯೆಯಲ್ಲಿ ಹೇಗೆ ಸಿಲುಕಿಕೊಂಡೆ ಎಂದು ಈಗಾಗಲೇ ಅನೇಕ ಸಂದರ್ಶನದಲ್ಲಿ ಹೇಳಿಕೊಂಡು, ನಾನಾ ರೀತಿಯಲ್ಲಿ ಕ್ಲಾರಿಟಿ ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಸ್ವತಃ ಕೋರ್ಟ್ ಕೂಡ ನನಗೆ ಕ್ಲೀನ್ ಚಿಟ್ ಕೊಟ್ಟಿದೆ. ನನ್ನನ್ನು ನ್ಯಾಯ ಗೆಲ್ಲಿಸಿದೆ. ನ್ಯಾಯಯುತವಾಗಿ ನಾನು ಗೆಲ್ಲುವು ಸಾಧಿಸಿರುವೆ. ಆದರೆ ಸಾಮಾಜಿಕ ಜಾಲತಾಣವನ್ನು ನಾನು ಕಂಟ್ರೋಲ್ ಮಾಡಲು ಆಗುತ್ತಿಲ್ಲ,' ಎಂದು ವಿಡಿಯೋದಲ್ಲಿ ಯಮುನಾ ನೋವು ತೋಡಿಕೊಂಡಿದ್ದಾರೆ.

Mala Sinha: ಖ್ಯಾತ ಬಾಲಿವುಡ್​ ತಾರೆ ಬಾತ್​ರೂಂನಲ್ಲಿ ಸಿಕ್ಕ ಕಂತೆ ಕಂತೆ ಹಣ ವೇಶ್ಯಾವಾಟಿಕೆಯದ್ದು!

'ಇಂದಿಗೂ ಅ ಘಟನೆ ಬಗ್ಗೆ ವಿವಿಧ ರೀತಿಯಲ್ಲಿ ಥಂಬ್‌ನೇಲ್‌ನ ಸೃಷ್ಟಿಸಿ, ಸಂಬಂಧ ಇಲ್ಲದ ರೀತಿಯಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಅದಕ್ಕೆ ಸಂಬಂಧ ಪಟ್ಟ ಯಾವುದೇ ವಿಡಿಯೋ ನೋಡಲ್ಲ. ಅದರಲ್ಲಿ ಏನೋ ಇದೆ ಎಂದು ಜನರು ನೋಡಬಹುದು ಆದರೆ ನಾನು ಮುಟ್ಟುವುದಿಲ್ಲ. ವಿಡಿಯೋದಲ್ಲಿ ಏನೂ ಇಲ್ಲವಾದರೂ, ಥಂಬ್‌ನೇಲ್ಸ್‌ ಮಾತ್ರ ನನಗೆ ತುಂಬಾ ನೋವು ಕೊಡುತ್ತಿದೆ. ನಾನು ಕೂಡ ಮನುಷ್ಯಳೇ ಅಲ್ವಾ? ಆ ಥಂಬ್‌ನೇಲ್ಸ್‌ ನೋಡಿದರೆ ಏನೋ ಗೊತ್ತಿಲ್ಲದ ನೋವು ಅಗುತ್ತದೆ. ನಾನು ಸತ್ತರೂ ಜನರು ಆ ಒಂದು ಘಟನೆಯನ್ನು ಬಿಡುವುದಿಲ್ಲ ಅನಿಸುತ್ತದೆ,' ಎಂದು ಯಮುನಾ ದುಃಖ ತೋಡಿಕೊಂಡಿದ್ದಾರೆ.

1987ರಲ್ಲಿ ಟಾಲಿವುಡ್‌ ಚಿತ್ರಗಳ ಮೂಲಕ ಸಿನಿ ಜರ್ನಿ ಆರಂಭಿಸಿದ ಯಮುನಾ 1989ರಲ್ಲಿ 'ಮೋಡದ ಮರೆಯಲ್ಲಿ' ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಚಿನ್ನ, ಶ್ರೀಮಂಜುನಾಥ, ಹಾಗೆ ಸುಮ್ಮನೆ, ಕಂಠೀರವ, ದಿಲ್ ರಂಗೀಲಾ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಯಮುನಾ ಅವರ ಅಸಲಿ ಹೆಸರು ಪ್ರೇಮಾ. ಸಿನಿಮಾರಂಗದಲ್ಲಿ ಆಗ ಹೆಸರು ಬದಲಾಯಿಸಿಕೊಳ್ಳುವುದು ಟ್ರೆಂಡ್ ಆಗಿದ್ದ ಕಾರಣ ನಿರ್ದೇಶಕ ಬಾಲಚಂದ್ರನ್ ಅವರು ಈ ನಟಿಯ ಹೆಸರನ್ನೂ ಬದಲಿಸಿದ್ದರು.

View post on Instagram