ಬೆಂಗಳೂರಿನ ಕೆಂಗೇರಿ ಬಸ್ ನಿಲ್ದಾಣದ ಬಳಿ ಇರುವ ತಮ್ಮ ವಿಶಾಲವಾದ ಶೂಟಿಂಗ್ ಮನೆಯನ್ನು ಕೋವಿಡ್ ಸೆಂಟರ್ ಆಗಿ ರೂಪಿಸುವ ಮೂಲಕ ಕೊರೋನಾ ಪೇಷೆಂಟ್ ಗಳಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ ಸಾತ್ವಿಕ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನಟಿ ಸಾತ್ವಿಕ, ಮೂರು ಬೆಡ್ ರೂಮುಗಳಿರುವ 60-80 ಅಳತೆಯ ತಮ್ಮ ಮನೆಯನ್ನು ಕೋವಿಡ್ ಕೇಂದ್ರವನ್ನಾಗಿಸಲು ಸರ್ಕಾರ ಮುಂದಾಗಲಿ. 

ತಾವು ಮನೆಯನ್ನು ಉಚಿತವಾಗಿ ನೀಡುವ ಮೂಲಕ ನೀರು ಹಾಗೂ ವಿದ್ಯುತ್ ವೆಚ್ಚವನ್ನೂ ಕೂಡ ತಾವೇ ಬರಿಸುವುದಾಗಿ ಹೇಳಿಕೊಂಡಿದ್ದಾರೆ.

25,000 ಬಾಲಿವುಡ್ ಕಾರ್ಮಿಕರಿಗೆ 3,75,00,000 ನೆರವು ನೀಡಿದ ಸಲ್ಮಾನ್ 

ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ನಟಿ ಸಾತ್ವಿಕ, ‘ಮೊದಲಿಗೆ ನಾನು ಒಂದು ಮನೆಯನ್ನು ಕೋವಿಡ ಸೆಂಟರ್ ನೀಡಬೇಕು ಅಂದುಕೊಂಡಿದ್ದೆ. ಆದರೆ, ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ನಾನು ಚಿತ್ರೀಕರಣಕ್ಕಾಗಿಯೇ ಕಟ್ಟಿಸಿದ್ದ ಮೂರೂ ಮನೆಗಳನ್ನು ಕೋವಿಡ್ ಕೇರ ಸೆಂಟರ್ ಗೆ ನೀಡಲು ಸಿದ್ಧಳಿದ್ದೇನೆ. ಈ ಬಗ್ಗೆ ಸಂಬಂಧಪಟ್ಟವರು ನನ್ನ ಮೊಬೈಲ್ ನಂಬರ್‌ಗೆ ಕಾಲ್ ಮಾಡಬಹುದು. ನಾನು ಕೂಡ ಎಂಪಿ ತೇಜಸ್ವಿ ಸೂರ‌್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಕೆಂಗೇರಿ, ಆರ್‌ಆರ್ ನಗರ ಹಾಗೂ ನಾಗರಭಾವಿಯಲ್ಲಿ ಮೂರು ಕಡೆ ಶೂಟಿಂಗ್ ಹೌಸ್‌ಗಳಿವೆ. ಈ ಮನೆಗಳನ್ನು  ಸರ್ಕಾರ ಬಳಸಿಕೊಳ್ಳಲಿ’ ಎನ್ನುತ್ತಾರೆ.