- ಸಾಲು ಸಾಲು ಸಿನಿಮಾಗಳಿಗೆ ನಾಯಕಿ ಆಗುತ್ತಿರುವುದರ ಹಿಂದಿನ ಗುಟ್ಟನ್ನು ಹೀಗೆ ರಟ್ಟು ಮಾಡಿದ್ದು ನಟಿ ಪ್ರಿಯಾಂಕ ಉಪೇಂದ್ರ. ಸಾಂಸಾರಿಕ ಬದುಕಿಗೆ ಕಾಲಿಟ್ಟ ನಂತರ ವರ್ಷಕ್ಕೆ ಒಂದೋ ಎರಡೋಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರು ಮತ್ತೆ ಹಳೇ ಫಾರ್ಮ್‌ಗೆ ಮರಳಿದ್ದಾರೆ.

ಸ್ಯಾಂಡಲ್‌ವುಡ್‌ 'ದೇವಕಿ' ಪ್ರಿಯಾಂಕಾ ಬ್ಯೂಟಿಫುಲ್‌ ಫೋಟೋ!

‘ಉಗ್ರಾವತಾರ’, ‘ಸೇಂಟ್ ಮಾರ್ಕ್ಸ್ ರೋಡ್’ ಸಿನಿಮಾಗಳ ಜತೆಗೆ ನಿರ್ದೇಶಕ ಪಿ. ವಾಸು ಸಂಬಂಧಿ ಗೌತಮ್ ನಿರ್ದೇಶ ನದ ಹೊಸ ಚಿತ್ರಕ್ಕೂ ಅವರೇ ಈಗ ನಾಯಕಿ. ‘ಉಗ್ರಾವತಾರ’ದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರವಾದರೆ, ‘ಸೆಂಟ್ ಮಾರ್ಕ್ಸ್‌ರೋಡ್’ ನಲ್ಲಿ ಟ್ವಿನ್ಸ್ ಪಾತ್ರ. ಸೆಂಟ್ಸ್ ಮಾರ್ಕ್ಸ್ ರೋಡ್ ಚಿತ್ರದ ಚಿತ್ರೀಕರಣ ಮುಗಿದಿದೆ. ಅದೊಂದು ನೈಜ ಘಟನೆ ಆಧರಿತ ಚಿತ್ರ.  ಕನ್ನಡದ ಜತೆಗೆ ತಮಿಳಿನಲ್ಲೂ ನಿರ್ಮಾಣವಾಗಿದೆ. ಅದರೊಂದಿಗೆ ಒಂದಷ್ಟು ಗ್ಯಾಪ್ ನಂತರ ತಮಿಳಿನಲ್ಲೂ ಕಾಣಿಸಿಕೊಳ್ಳುವ ಹಂಬಲದಲ್ಲಿದ್ದಾರೆ ಪ್ರಿಯಾಂಕ.

ಪ್ರಿಯಾಂಕ ಉಪೇಂದ್ರಗಿಂತ ಪುತ್ರಿ ಐಶ್ವರ್ಯಾಗೇ ಫ್ಯಾನ್ಸ್‌ ಜಾಸ್ತಿ!

ಉಗ್ರಾವತಾರಕ್ಕೆ ವರ್ಕೌಟ್: ಉಗ್ರಾವತಾರ ಹಾಗೂ ಗೌತಮ್ ನಿರ್ದೇಶನದ ಥ್ರಿಲ್ಲರ್ ಸಿನಿಮಾ ಪಾತ್ರಗಳಿಗೆ ಫಿಟ್ ಆಗಲು ಜಿಮ್‌ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ಆ್ಯಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಬೇಕಾಗಿರುವ ಕಾರಣ, ತೂಕ ಕಡಿಮೆ ಮಾಡಿಕೊಳ್ಳುವುದರ ಜತೆಗೆ ಬಾಕ್ಸಿಂಗ್ ಕಲಿಯುತ್ತಿದ್ದಾರೆ.