ವಿದೇಶದಲ್ಲಿ ನೆಲೆಸಿರುವ ನಟಿ ನಯನಾ ಪುಟ್ಟಸ್ವಾಮಿ ಕೊರೋನಾ ವ್ಯಾಕ್ಸಿನ್ ಪಡೆದಿರುವ ಫೋಟೋ ಹಂಚಿ ಕೊಂಡಿದ್ದಾರೆ. ಗರ್ಭಿಣಿಯರು ತಮ್ಮ ಪ್ರಶ್ನೆಗಳನ್ನು ಕಾಮೆಂಟ್‌ನಲ್ಲಿ ಕೇಳಿದ್ದಾರೆ...

ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆ ಲೋಕದಲ್ಲಿ ಮಿಂಚಿರುವ ನಟಿ ನಯನಾ ಪುಟ್ಟಸ್ವಾಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ವಿದೇಶದಲ್ಲಿ (USA) ನೆಲೆಸಿದ್ದಾರೆ. ಕೆಲವು ತಿಂಗಳ ಹಿಂದೆ ತಾಯಿ ಆಗುತ್ತಿರುವ ವಿಚಾರವನ್ನು ಹಂಚಿಕೊಂಡು ನಯನಾ ಇದೀಗ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

'ಈಗಷ್ಟೇ ವ್ಯಾಕ್ಸಿನ್ ತೆಗೆದುಕೊಂಡೆ. ನೀವು ವ್ಯಾಕ್ಸಿನ್ ತೆಗೆದುಕೊಂಡಿಲ್ಲ ಅಂದರೆ ಮೊದಲು ತೆಗೆದುಕೊಳ್ಳಿ. ಇದು ನಮಗೆ ಅತ್ಯಗತ್ಯ. ಯುಎಸ್‌ಎನಲ್ಲಿ ಗರ್ಭಿಣಿಯರಿಗೆ Pfizer ಅಥವಾ Moderna ಮಾತ್ರ ನೀಡಲಾಗುತ್ತದೆ,' ಎಂದು ನಯನಾ ಬರೆದುಕೊಂಡಿದ್ದಾರೆ.

'ನನ್ನ ಗಂಡನಿಗೆ ಇಲ್ಲಿನ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಕ್ಕಿದ ಕಾರಣ ನಾನು ಇಲ್ಲಿದೆ ಬರಬೇಕಾಯಿತು. ಹೀಗಾಗಿ ನಾನು ಇಲ್ಲಿಯೇ ನನ್ನ ಆಸಕ್ತವುಳ್ಳ ಫೀಲ್ಡ್‌ನಲ್ಲಿ ಕೋರ್ಸ್ ಮಾಡುವೆ. ಕೆಲ ವರ್ಷಗಳ ನಂತರ ಕರ್ನಾಕಟಕ್ಕೆ ಬಂದು ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತೇನೆ. ನನಗೆ ಇಷ್ಟವಿರುವ ಫೀಲ್ಡ್‌ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಇದು ಒಳ್ಳೆ ಅವಕಾಶ,'ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಪ್ರೆಗ್ನೆನ್ಸಿ ರಿವೀಲ್‌ ಮಾಡಿದ ನಂತರ ಬ್ಯಾಕ್‌ ಟು ಬ್ಯಾಕ್ ಸೆಲ್ಫೀ ಶೇರ್ ಮಾಡಿಕೊಳ್ಳುತ್ತಿರುವ ನಯನಾ ಪುಟ್ಟಸ್ವಾಮಿ 

ಸುನಿಲ್ ಪುರಾಣಿಕ್, ರಾಘವೇಂದ್ರ ರಾಜ್‌ಕುಮಾರ್, ಗಿರಿಜಾ ಲೋಕೇಶ್, ಪ್ರಿಯಾಂಕಾ ಚಿಂಚೋಲಿ, ರವಿಶಂಕರ್ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

View post on Instagram

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona