ಕೊನೆಗೂ ಮೇಘನಾ ರಾಜ್‌ ದುಬಾರಿ ಬ್ಯಾಗ್ ರಿವೀಲ್; ಮಗನ ವಸ್ತುಗಳಿಲ್ಲ ಎಂದು ಕಾಲೆಳೆದ ನೆಟ್ಟಿಗರು

ಅಭಿಮಾನಿಗಳು ಮುಂದಿಟ್ಟ ಡಿಮ್ಯಾಂಡ್ ಈಡೇರಿಸಿದ ಮೇಘನಾ ರಾಜ್. ನಟಿಯರ ಬ್ಯಾಗ್‌ ಹೇಗಿದೆ ಅನ್ನೋ ಕ್ಯೂರಿಯಾಸಿಟಿ ಜನರಿಗಿದೆ......

Kannada actress Meghana Raj share whats in my bag with fans vcs

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಬ್ಯಾಗಲ್ಲಿ ಏನಿದೆ ಎಂದು ತೋರಿಸಿ, ವಿಡಿಯೋ ಮಾಡಿ ಎಂದು ಪದೇ ಪದೇ ಅಭಿಮಾನಿಗಳು ಕೇಳುತ್ತಿದ್ದರಂತೆ ಹೀಗಾಗಿ ವಿಡಿಯೋ ಮಾಡುವ ಮೂಲಕ ಅಪ್ಡೇಟ್‌ ನೀಡಿದ್ದಾರೆ. ಮೇಘನಾ ವಿಡಿಯೋದಲ್ಲಿ ತೋರಿಸಿರುವ ಐಷಾರಾಮಿ ಬ್ರ್ಯಾಂಡ್ louis vuitton.  ಬ್ರೌನ್ ಬಣ್ಣದ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ ಎಂದು ಒಂದೊಂದಾಗಿ ತೋರಿಸಿದ್ದಾರೆ.

'ಯೂಟ್ಯೂಬ್ ಚಾನೆಲ್ ಎಂದ ತಕ್ಷಣ ನಮ್ಮ ಪರ್ಸನಲ್‌ ಲೈಫ್‌ ಸ್ನೀಕ್‌ ಪೀಕ್‌. ನಮ್ಮ ಜೀವನದ ಪಾಸಿಟಿವ್‌ಗಳನ್ನು ಹಂಚಿಕೊಳ್ಳುತ್ತೀವಿ. ಇದು ಒಂದು ಪ್ರಪಂಚ ಆದರೆ ಹೆಣ್ಣು ಮಕ್ಕಳಿಗೆ ಮತ್ತೊಂದು ಪ್ರಪಂಚವಿದೆ ಅದು ನಾವು ಕ್ಯಾರಿ ಮಾಡುವ ಹ್ಯಾಂಡ್‌ಬ್ಯಾಗ್‌ಗಳಲ್ಲಿ. ನನ್ನ ಜೀವನದ ಬಗ್ಗೆ ಬಹುತೇಕ ವಿಚಾರಗಳನ್ನು ಹಂಚಿಕೊಂಡಿರುವೆ ಬ್ಯಾಗ್‌ ಬಿಟ್ಟು. ಈಗ ಅದನ್ನು ತೋರಿಸುತ್ತಿರುವೆ' ಎನ್ನುತ್ತ ಮೇಘನಾ ತಮ್ಮ ವಿಡಿಯೋ ಆರಂಭಿಸಿದ್ದಾರೆ.

ಬ್ಯಾಗ್‌ನಿಂದ ಮೊದಲು ಎರಡು ಫೋನ್‌ ಹೊರ ತೆಗೆಯುತ್ತಾರೆ. ಒಂದು ಪರ್ಸನಲ್‌ಗೆಂದು ಮತ್ತೊಂದು ಕೆಲಸದ ವಿಚಾರಕ್ಕೆ. ಸದಾ ಚಾಕೋಲೇಟ್‌ ಇಟ್ಟಿರುವೆ ನಾನು ನನ್ನ ಮಗ ತಿಂದಿರುತ್ತೀವಿ. ಪ್ರತಿಯೊಬ್ಬರು ಬಾಚಣಿಗೆ ಇಟ್ಟುಕೊಂಡಿರುತ್ತಾರೆ ನನ್ನ ಬ್ಯಾಗ್‌ನಲ್ಲೂ ಒಂದಿದೆ. ಪ್ರತಿಯೊಬ್ಬರ ಬ್ಯಾಗ್‌ನಲ್ಲಿ ಒಂದು ಪರ್ಸ್‌ ಇರುತ್ತದೆ. ನಾನು ಎಷ್ಟೇ ಪರ್ಸ್‌ ಬದಲಾಯಿಸಿದ್ದರೂ ತಂದೆ ತಾಯಿ ಮತ್ತು ಚಿರು ಫೋಟೋ ಇರುತ್ತದೆ. ಈಗ ಮತ್ತೊಂಡು ಅಡಿಷನ್ ಆಗಿ ನನ್ನ ಮಗ ಸೇರಿಕೊಂಡಿದ್ದಾರೆ. ಪೋನ್‌ನಲ್ಲಿ ಫೋಟೋ ಇರುತ್ತೆ ಆದರೆ ಸದಾ ಜೊತೆಯಲ್ಲಿ ಪಿಸಿಕಲ್ ಫೋಟೋ ಇರಬೇಕು. ಹಣ ಮತ್ತು ಕಾರ್ಡ್‌ಗಳಿಗಿಂತ ನನಗೆ ಈ ಫೋಟೋಗಳು ಮುಖ್ಯವಾಗುತ್ತದೆ' ಎಂದು ಮೇಘನಾ ಹೇಳಿದ್ದಾರೆ.

2 ವರ್ಷದ ರಾಯನ್‌ಗೆ ಹೊಸ ಕಾರು ಗಿಫ್ಟ್‌ ಕೊಟ್ಟ ಮೇಘನಾ ರಾಜ್; ಬರ್ತಡೇ ವಿಡಿಯೋ ವೈರಲ್

'ನನ್ನ ಬ್ಯಾಗಲ್ಲಿ ಎರಡು ತರ ಕನ್ನಡಕ ಇರುತ್ತೆ. ಒಂದು ಪವರ್‌ ಮತ್ತೊಂದು ಸ್ಟೈಲ್ ಮಾಡುವುದಕ್ಕೆ. 100% ಕಾಂಟ್ಯಾಕ್ಟ್ ಲೆನ್ಸ್ ಬಳಸುವುದಕ್ಕೆ ಆಗಲ್ಲ ಅದಿಕ್ಕೆ. ಹಾಡುಗಳನ್ನು ಹೆಚ್ಚಿಗೆ ಕೇಳುವ ಕಾರಣ ಏರ್‌ಪಾಡ್‌ಗಳಿರುತ್ತದೆ. ಕಾಂಪ್ಯಾಕ್ಟ್‌ ಪೌಡರ್‌ ಇರುತ್ತದೆ. ಗಮ್ ಎಂದು ಸ್ಮೆಲ್‌ ಮಾಡುವುದು ಮುಖ್ಯವಾಗುತ್ತದೆ. ಹೊರಗಡೆ ಹೋದರೆ ಮಾತ್ರ ಪರ್ಫ್ಯೂಮ್‌ ಬಳಸುವುದಿಲ್ಲ ಮನೆಯಲ್ಲಿದ್ದರೂ 10-20 ಸಲ ಹಾಕಿಕೊಳ್ಳುವೆ. ನನ್ನ ಮಗ ಆಟವಾಡುತ್ತಿರುವ ಗೊಂಬೆಗಳನ್ನು ಪುಸ್ತಕಗಳ ಮೇಲೆ ಅಂಟಿಸಿಕೊಂಡಿರುವೆ' ಎಂದಿದ್ದಾರೆ.

'ಮೇಕಪ್‌ ಕಡಿಮೆ ಬಳಸುವುದು ಮಸ್ಕಾರ,  ಬಿಂದಿ. ಪ್ರತಿಯೊಬ್ಬ ಹುಡುಗಿಯೂ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ. ಇತ್ತೀಚಿಗೆ ನಾನು ಖರೀದಿ ಮಾಡಿರುವ ವಸ್ತು ಇದು. ಇನ್‌ ಮತ್ತು ಯಾನ್‌  ಬ್ರೇಸ್ಲೆಟ್ ಇದೆ...ಅಂದ್ರೆ ಒಳ್ಳೆಯದು ಮತ್ತು ಕೆಟ್ಟದು ಇದೆ ಎಂದು. ಇದನ್ನು ಬಳಸಿದರೆ ತುಂಬಾ ಪಾಸಿಟಿವ್ ಫೀಲ್ ಬರುತ್ತದೆ. ಮೂರು ಲಿಪ್ಟ್‌ ಸ್ಟಿಕ್‌ ಇರುತ್ತದೆ ಏಕೆಂದರೆ ನಾನು ಎರಡು ಮೂರು ಕಲರ್‌ ಮಿಕ್ಸ್‌ ಮಾಡುವುದು. ಕಣ್ಣಿನ ಡ್ರಾಪ್ಸ್‌, ಪೆನ್‌' ಎಂದು ಪ್ರತಿಯೊಂದು ವಸ್ತುಗಳನ್ನು ತೆಗೆದು ತೋರಿಸಿದ್ದಾರೆ. ಬ್ಯಾಗಲ್ಲಿ ತುಂಬಾ ವಸ್ತುಗಳಿರುವುದು ನೋಡಿ ಮೇಘನಾಗೆ ಶಾಕ್ ಅಗಿತ್ತು. 

ಟ್ರೋಲಿಗರಿಗೆ ಯೂಟ್ಯೂಬ್‌ ವಿಡಿಯೋ ಮೂಲಕ ಖಡಕ್ ಉತ್ತರ ಕೊಟ್ಟ ಮೇಘನಾ ರಾಜ್

ಚಾಕೋಲೇಟ್‌ ಬಿಟ್ಟರೆ ಮಗ ವಸ್ತುಗಳು ಏನೂ ಇಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

ಟ್ರೋಲಿಗರಿಗೆ ಉತ್ತರ:

' ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ಟ್ರೋಲ್‌ ಪೇಜ್‌ಗಳನ್ನು ಹ್ಯಾಂಡಲ್‌ ಮಾಡುತ್ತೀನಿ.  ನನ್ನ ಬಗ್ಗೆ ಯೂಟ್ಯೂಬ್‌ಬಲ್ಲಿ ಸಾವಿರಾರು ವಿಚಾರಗಳು ಹರಿದಾಡುತ್ತಿದೆ. 99% ಸುಳ್ಳು ಸುದ್ದಿ ಇರುತ್ತದೆ ಇವುಗಳನ್ನು ಹೇಗೆ ಮ್ಯಾನೇಜ್ ಮಾಡಬೇಕು ಎಂದು ಯೋಚನೆ ಮಾಡಿದೆ ಅದಿಕ್ಕೆ ಸಿಕ್ಕ ಉತ್ತರ ಏನೆಂದರೆ ಯೂಟ್ಯೂಬ್ ಚಾನೆಲ್ ಆರಂಭಿಸುವುದು' ಎಂದಿದ್ದಾರೆ. 

 

Latest Videos
Follow Us:
Download App:
  • android
  • ios