Asianet Suvarna News

ಮಾಸ್ಕ್‌ ಧರಿಸದೇ ಮಾಜಿ ಸಿಎಂ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ ನಟಿ ಟ್ರೋಲ್!

ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ನಟಿ ಕಾರುಣ್ಯ ರಾಮ್‌ ಫುಡ್‌ ಕಿಟ್ ವಿತರಿಸಿದ್ದಾರೆ. ಈ ವೇಳೆ  ಮಾಜಿ ಸಿಎಂ ಪಕ್ಕ ನಿಂತು  ಫೋಟೋಗೆ ಫೋಸ್ ಕೊಟ್ಟಿರುವುದಕ್ಕೆ ನೆಟ್ಟಿಗರು  ಕ್ಲಾಸ್ ತೆಗೆದುಕೊಂಡಿದ್ದಾರೆ . 

Kannada actress Karunya ram trolled for not wearing mask next to Ex CM of Karnataka
Author
Bangalore, First Published May 8, 2020, 3:49 PM IST
  • Facebook
  • Twitter
  • Whatsapp

ಕೊರೋನಾ ವೈರಸ್‌ ಹಾವಳಿ ಹೆಚ್ಚಾದ ದಿನವೇ ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಅಂದಿನಿಂದ ಇಲ್ಲಿಯವರೆಗೂ ಸಿನಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಕಾರುಣ್ಯ ರಾಮ್‌ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ಸಿಂಪಲ್ ಹುಡುಗಿ ಕಾರುಣ್ಯಾ ರಾಮ್‌ ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು  ಬಯಸುವ ನಟಿ. ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಸಹಾಯ ಮಾಡುತ್ತಾರೆ ಆದರೆ ಈಗ ಸಹಾಯ ಮಾಡಿ ಅವರೇ ಟ್ರೋಲ್‌ ಆಗಿದ್ದಾರೆ.

ರಾಜಕಾರಣಿಗಳ ಜೊತೆ ಕಿಟ್ ವಿತರಣೆ:

ಕಾಯಕವೇ ಕೈಲಾಸ ,ಜನರ ಸೇವೆಯೇ ಜನಾರ್ಧನ ಸೇವೆ ಎಂದು ಸುಮಾರು 35 ವರ್ಷಗಳಿಂದ ಜನರ ಹಾಗು ಸರ್ಕಾರದ ಸೇವೆಯನ್ನು ಮಾಡುತ್ತಾ ಬಂದಿರುವ ಸಹೃದಯವಂತರು,ಹೃದಯ ಶ್ರೀಮಂತರು ಆದ MLC ನಾರಾಯಣಸ್ವಾಮಿ, ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ಮುಖ್ಯ ಸಚೇತಕರು ಸುಮಾರು 10,000 ಕುಟುಂಬಗಳಿಗೆ ರೇಷನ್ ಹಾಗೂ ತರಕಾರಿಗಳನ್ನ  ತಮ್ಮ  ಸ್ವಂತ ವೆಚ್ಚದಿಂದ ವಿತರಿಸಿದರು ,ಮತ್ತು ಲಾಕ್ ಡಾನ್ ಪ್ರಾರಂಭದಿಂದಲೂ ಪ್ರತಿ ದಿನ ಸುಮಾರು 1000ಕ್ಕೂ ಹೆಚ್ಚು ಜನರಿಗೆ  ಊಟದ  ವ್ಯವಸ್ಥೆ ಮಾಡುತ್ತಲೇ ಬಂದಿದ್ದಾರೆ .  ನಿಮಗೆ ಆ ತಾಯಿ ಚಾಮುಂಡೇಶ್ವರಿ ಮತ್ತಷ್ಟು ಆರೋಗ್ಯ,ಸಂಪತ್ತು ಹಾಗು ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಮಟ್ಟಕ್ಕೆ ಬೆಳೆಯಲು ಆಶೀರ್ವದಿಸಲಿ .ಇವರ ಈ ಕೆಲಸವನ್ನು ಶ್ಲಾಘಿಸಲು ನಮ್ಮ  ಮಾಜಿ ಸಿಎಂ ಸಿದ್ಧರಾಮಯ್ಯನವರು ಭಾಗಿಯಾಗಿದ್ದರು ಎಂದು ಬರೆದುಕೊಂಡು ವಿತರಣೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಕ್ಯೂಟಿ ಕಾರುಣ್ಯ ರಾಮ್‌ ಫೋನ್‌ನಲ್ಲಿ ಇದ್ನೆಲ್ಲ ಇಟ್ಕೊಂಡಿದ್ದಾರಾ?

ಕಾರುಣ್ಯಾ ಟ್ರೋಲ್:

ಫುಡ್‌ ಕಿಟ್ ವಿತರಣೆ ನಂತರ ಎಲ್ಲಾ ರಾಜಕಾರಣಿಗಳನ್ನು ಭೇಟಿ ಮಾಡಿ ಮಾತನಾಡಿಸುವಾಗ ಕಾರುಣ್ಯ ರಾಮ್ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಪಕ್ಕ ನಿಂತು ಮಾಸ್ಕ್‌ ಧರಿಸದೇ ಮೂರು ಫೋಟೋಗಳನ್ನು ತೆಗೆಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಸೋಷಿಯಲ್‌ ಡಿಸ್ಟೆನ್ಸ್‌ ಹಾಗೂ ಮಾಸ್ಕ್‌ ರೂಲ್‌ ಫಾಲೋ ಮಾಡದ ಕಾರಣ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ನೆಟ್ಟಿಗರಿಂದ ಫುಲ್‌ ಕ್ಲಾಸ್:

ಮಾಸ್ಕ್‌ ಧರಿಸದೇ ಮಾಜಿ ಸಿಎಂ ಪಕ್ಕ ನಿಂತುಕೊಂಡಿರುವ ಕಾರುಣ್ಯಾ ರಾಮ್‌ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಫೋಟೋಗೆ ಕಾಮೆಂಟ್‌ ಮಾಡಿ ಪಾಠ ಹೇಳಿಕೊಟ್ಟಿದ್ದಾರೆ.  'ಸಿದ್ಧರಾಮಯ್ಯ ಅವರೇ ಮಾಸ್ಕ್‌ ಧರಿಸಿದ್ದಾರೆ ನೀವೇಕೆ ಧರಿಸಿಲ್ಲ' ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಸೋಷಿಯಲ್‌ ಡಿಸ್ಟೆನ್ಸ್‌ ಫಾಲೋ ಮಾಡಿ ಅಷ್ಟೊಂದು  ಪಕಕ್ಕೆ ಯಾಕೆ ನಿಂತುಕೊಂಡಿದ್ದೀರಾ ಎಂದು ಹೇಳಿದ್ದಾರೆ. 

ನೆಟ್ಟಿಗರ ಕಾಮೆಂಟ್‌ ಡಿಲೀಟ್‌:

ಕಾರುಣ್ಯ ರಾಮ್‌ ಮಾಸ್ಕ್‌ ಹಾಗೂ ಸೋಷಿಯಲ್‌ ಡಿಸ್ಟೆನ್ಸ್‌ ಬಗ್ಗೆ ಇರುವ  ನೆಟ್ಟಿಗರ ಕಾಮೆಂಟ್‌ಗಳನ್ನು  ಡಿಲೀಟ್  ಮಾಡಿದ್ದಾರೆ ಎನ್ನಲಾಗಿದೆ. ಪೋಸ್ಟ್‌ ಕಾಮೆಂಟ್‌ ಲಿಸ್ಟ್‌ನಲ್ಲಿ ಎಲ್ಲವೂ ಪಾಸಿಟಿವ್‌ ಆಗಿ ಬರೆದಿರುವುದು ಇದೆ.

ನಟಿ ಮಣಿಯರನ್ನು ಗ್ಲಾಮರಸ್‌ ಆಗಿ ಕಾಣಿಸುವಂತೆ ಮಾಡುತ್ತಾರೆ ಸಮೃದ್ಧಿ ರಾಮ್!

ಲಾಕ್‌ಡೌನ್‌ ಮೇಕ್‌ ಓವರ್‌:

ಲಾಕ್‌ಡೌನ್‌ ವೇಳೆ ಸ್ಪಾ ಹಾಗೂ ಬ್ಯೂಟಿ ಪಾರ್ಲರ್‌ಗಳು ಕ್ಲೋಸ್  ಆಗಿರುವ ಕಾರಣ ಎಲ್ಲರೂ ತಮ್ಮ ಮನೆಯಲ್ಲಿಯೇ ಕೆಲಸಗಳನ್ನು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಟಿಕ್‌ಟಾಕ್‌ ವಿಡಿಯೋ ಮೂಲಕ ಕಾರುಣ್ಯ ಹೊಸ ಲುಕ್‌ ರಿವೀಲ್ ಮಾಡಿದ್ದಾರೆ..

ಒಟ್ಟಿನಲ್ಲಿ ಸಹಾಯ ಮಾಡಿ ಟ್ರೋಲ್ ಆದ ನಟಿ ಇನ್ಮೇಲಾದ್ರೂ  ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮಾಸ್ಕ್‌ ಹಾಗೂ ಸೋಷಿಯಲ್‌ ಡಿಸ್ಟೆನ್ಸ್ ಕಡ್ಡಾಯವಾಗಿ ಪಾಲಿಸಬೇಕು.

Follow Us:
Download App:
  • android
  • ios