ಎರಡನೇ ಪ್ರೆಗ್ನೆನ್ಸಿ ವಿಚಾರವನ್ನು ಡಿಫರೆಂಟ್ ಆಗಿ ರಿವೀಲ್ ಮಾಡಿದ ದಿಶಾ. ಮೂವರಿದ್ದ ಕುಟುಂಬದಲ್ಲಿ ಈಗ ನಾವು ನಾಲ್ವರು.

ಸೋಷಿಯಲ್ ಮೀಡಿಯಾ ಸ್ಟಾರ್, ಕಿರುತೆರೆ ನಟಿ, ಫ್ರೆಂಚ್ ಬಿರಿಯಾನಿ ಸುಂದರಿ ದಿಶಾ ಮದನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಡಿಫರೆಂಟ್ ಆಗಿ ಹಂಚಿಕೊಂಡಿದ್ದಾರೆ. ಪುತ್ರ ವಿಹಾನ್ ಬಿಗ್ ಬ್ರದರ್ ಟೀ-ಶರ್ಟ್‌ ಧರಿಸಿ ಎಂಜಾಯ್ ಮಾಡುತ್ತಿದ್ದಾನೆ.

'ನಿಮ್ಮೊಟ್ಟಿಗೆ ಶೇರ್ ಮಾಡಿಕೊಳ್ಳಲು ಒಂದು ವಿಚಾರವಿದೆ. ಹಾಗೆ ಕೆಲವು ತಿಂಗಳುಗಳಿಂದ ನಾನು ಕಾಣಿಸದೇ ಇರುವುದಕ್ಕೆ ಕಾರಣ ಇಲ್ಲಿದೆ. Haha ಮಾರ್ಚ್ 2022ಕ್ಕೆ ಕಾಯುತ್ತಿರುವೆ. ಮೂರರಿಂದ ನಾಲ್ಕು' ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಮೂಲಕ ತಮ್ಮ ವೈವಾಹಿಕ ಜೀವನದಲ್ಲಿ ಆದ ಬದಲಾವಣೆ, ಯಾವ ಹೊಸತನ ಆಗಮಿಸಿದೆ ಎಂದು ಹೇಳಿದ್ದಾರೆ.

ಕಣ್ಣೆದುರೇ ನರಳುವುದನ್ನು ನೋಡೋದು ಕಷ್ಟ; ನಟಿ ದಿಶಾ ಮದನ್ ಕೊರೋನಾ ಗೆದ್ದ ಕತೆ!

ಶಶಾಂಕ್‌ರನ್ನು ದಿಶಾ ಮೊದಲು ಭೇಟಿ ಮಾಡಿದ್ದು 2016- 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2018ರಲ್ಲಿ ಮೊದಲ ಮಗುವಿಗೆ ತಾಯಿಯಾಗಿದ್ದಾರೆ. 2019ರಲ್ಲಿ ಪುತ್ರ ವಿಹಾನ್‌ನ ಬರ ಮಾಡಿಕೊಂಡಿದ್ದಾರೆ. 2020ರಲ್ಲಿ ಹೊಸ ಮನೆ ಖರೀದಿಸಿ ಗೃಹಪ್ರವೇಶ ಮಾಡಿದ್ದಾರೆ. 2021ರಲ್ಲಿ ಇಡೀ ಕುಟುಂಬ ಕೊರೋನಾ ವೈರಸ್‌ ತಗುಲಿತ್ತು. ತಿಂಗಳುಗಳ ಕಾಲ ವಿಶ್ರಾಂತಿ ಪಡೆದು ಚೇತರಿಸಿಕೊಂಡಿದ್ದಾರೆ. 2022ರಲ್ಲಿ ನನ್ನ ಮೊದಲ ಮಗ ಅಣ್ಣನಾಗುತ್ತಾನೆ ಎಂದು ಹಂಚಿಕೊಂಡಿದ್ದಾರೆ.

ಸಿನಿಮಾ ಸ್ನೇಹಿತರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.

View post on Instagram