ಬಾತ್ ಟಬ್ಬಲ್ಲಿ ಮೇಕಪ್ ಹಿಡಿದು ಪೋಸ್ ಕೊಟ್ಟ 'ಗಾಳಿಪಟ' ನಟಿ ಭಾವನಾ!
ಡಿಫರೆಂಟ್ ಫೋಟೋಶೂಟ್ ಮಾಡಿಸಿದ ನಟಿ ಭಾವನಾ ರಾವ್. ಎಲ್ಲಿ ಕಾಣೆಯಾಗಿದ್ದೀರಾ ಮೇಡಂ ಎಂದು ಪ್ರಶ್ನಿಸಿದ ನೆಟ್ಟಿಗರು.
'ಗಾಳಿಪಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಭಾವನಾ ರಾವ್ ತೆರೆ ಮೇಲಿನ ಅಬ್ಬರ ಕಡಿಮೆ ಆಗಿದ್ದರೂ, ತೆರೆ ಹಿಂದಿನ ಮಾಡೋ ಸದ್ದು ಜೋರಾಗಿರುತ್ತದೆ. ನಿರ್ದೇಶಕಿಯಾಗಲು ರೆಡಿಯಾಗಿರುವ ಭಾವನಾ ಇದ್ದಕ್ಕಿದ್ದಂತೆ ಬಾತ್‌ಟಬ್‌ನಲ್ಲಿ ಮೇಕಪ್ ಹಿಡಿದು ಪೋಸ್ ಕೊಟ್ಟಿದ್ದಾರೆ.
'ಎಲ್ಲಾ ರೂಲ್ಸ್ ಮರಿಯಿರಿ. ಇಷ್ಟ ಪಡಿ, ಧರಿಸಿಕೊಳ್ಳಿ,' ಎಂದು ಮಾಡಿರುವ ಪೋಸ್ಟಿಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಬ್ಲಾಕ್ ಆ್ಯಂಡ್ ಬ್ಲಾಕ್ ಔಟ್‌ಫಿಟ್‌ನಲ್ಲಿ ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮೆರಾಗೆ ಸ್ಮೈಲ್ ಮಾಡಿದ್ದಾರೆ. ಹೀಲ್ಸ್ ಚಪ್ಪಲಿ ಎಲ್ಲೆಲ್ಲೋ ಬಿದ್ದಿವೆ. ಮೇಕಪ್ ಪ್ಯಾಲೇಟ್ ಪಕ್ಕದಲೇ ಇದೆ. ಫೋಟೋ ಏನೋ ಒಂಥರಾ ಡಿಫರೆಂಟ್ ಆಗಿದ್ದು, ಆಕರ್ಷಕವಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ 'ಗಾಳಿಪಟ' ಹಾರಿಸಿ 'ಅಟ್ಟಹಾಸ' ಮೆರೆದ ಭಾವನಾ ರಾವ್ ಎಲ್ಲೋದ್ರು?ಪಡ್ಡೆ ಹುಡುಗರ ಗಮನ ಸೆಳೆಯುತ್ತಿರುವ ಭಾವನಾ ಯಾಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಎಂಬುವುದು ಎಲ್ಲರ ಪ್ರಶ್ನೆ ಆಗಿದೆ. 2019ರಲ್ಲಿ 'ಬೈಪಾಸ್ ರೋಡ್' ಚಿತ್ರದ ಮೂಲಕ ಬಿ-ಟೌನ್‌ಗೆ ಎಂಟ್ರಿ ಕೊಟ್ಟ ಭಾವನಾ ಎಲ್ಲೋ ಕಾಣೆಯಾಗಿದ್ದಾರೆ. 2018ರಲ್ಲಿ ಬಿಡುಗಡೆಯಾದ Rambo 2 ಹಾಗೂ ದಿ ವಿಲನ್ ಕೊನೆಯ ಚಿತ್ರವಾಗಿದೆ.