ದರ್ಶನ್ ಬಗ್ಗೆ ಒಂದಿಷ್ಟು ಹೇಳಿದ ಅನು ಪ್ರಭಾಕರ್, ಇನ್ನೊಂದಿಷ್ಟು ಹೇಳಲ್ಲ ಅಂದಿದ್ಯಾಕೆ?

ತಪ್ಪಾಗಿರೋರಿಗೆ ನಮ್ಮ ನ್ಯಾಯದ, ಮುಂದೆ ನ್ಯಾಯಾಂಗದ ಮುಂದೆ ಯಾರೂ ದೊಡ್ಡೋರಲ್ಲ.. ಲಾ ಮುಂದೆ ಎಲ್ಲರೂ ಈಕ್ವಲ್. ಸೋ ನ್ಯಾಯವಾಗಿ ಅದಕ್ಕೆ ಏನ್ ರಿಸಲ್ಟ್ ಬರ್ಬೇಕೋ ಖಂಡಿತ ಬರ್ಲಿ.. ಅನ್ಯಾಯ ಆಗಿರೋರಿಗೆ ಒಂದು ನ್ಯಾಯ ಸಿಗ್ಲೇಬೇಕು ಅಂತ ಹೇಳಬಹುದು. ಇವತ್ತೂನೂ ನಾನು ಅದನ್ನೇ ಹೇಳ್ತೀನಿ.. 

kannada actress Anu Prabhakar talks about star actor Darshan srb

ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ಸಿಲುಕಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಬಗ್ಗೆ ನಟಿ ಅನು ಪ್ರಭಾಕರ್ ಅವರು ಈಗ ಮಾತನಾಡಿದ್ದಾರೆ. 'ಈಗ' ಎನ್ನುವ ಪದ ಯಾಕೆಂದರೆ, ಈ ಮೊದಲು ಮಾಧ್ಯಮದವರು ಕೊಲೆ ಕೇಸ್ ಆರೋಪಿ ದರ್ಶನ್‌ ಬಗ್ಗೆ ಕೇಳಿದಾಗಿ, ಮಾತನಾಡದೇ ತಪ್ಪಿಸಿಕೊಂಡಿದ್ದರು. ಆದರೆ, ಈಗ ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ. ಹಾಗಿದ್ದರೆ ನಟಿ ಅನು ಪ್ರಭಾಕರ್ ಹೇಳಿದ್ದೇನು, ನೋಡಿ.. 

ಲಾಸ್ಟ್ ಟೈಮ್ ಕೂಡ ಹೇಳ್ಲಿಲ್ಲ ಅಂದ್ರೆ, ಅದು ಲೀಗಲ್ ಇಶ್ಯೂ ಅಲ್ವಾ? ಆಫ್‌ಕೋರ್ಸ್, ಎಲ್ಲರಿಗೂ ಬೇಜಾರು ಇದ್ದೇ ಇದೆ.. ಇಡೀ ಇಂಡಸ್ಟ್ರಿಗೇ ಬೇಜಾರಿದೆ, ಇಂಥ ಒಂದು ಸನ್ನಿವೇಶ ಹೀಗೆ ಕ್ರಿಯೇಟ್ ಆಗಿರೋದು.. ಆದ್ರೆ, ಲೀಗಲ್ ಆಗಿರೋದ್ರಂದ, ಅದ್ರ ಬಗ್ಗೆ ಏನೂ ಮಾತಾಡೋಕೆ ನಂಗೆ, ಸರಿನೂ ಅಲ್ಲ, ಮಾತಾಡ್ಲೂ ಬಾರ್ದು ನನ್ನ ಪ್ರಕಾರ.. ಲೀಗಲ್ ಆಗಿ ಏನೇನು ನಡಿತಾ ಇದ್ಯೋ ಅದು ಕರೆಕ್ಟಾಗಿ ನಡಿತಾ ಇದೆ ನನ್ ಪ್ರಕಾರ.. ಕರೆಕ್ಟಾಗಿ ಸರಿಯಾದ ದಾರಿಲಿ ನಡಿಲಿ.. 

ಕೆಲವೊಂದನ್ನು ಲೈಫಲ್ಲಿ ಕಳ್ಕೊಂಡಾಗ ದೇವರು ಮತ್ತಿನ್ನೇನೋ ಕೊಡ್ತಾನೆ ಎಂದಿದ್ಯಾಕೆ ಚಂದನ್ ಶೆಟ್ಟಿ?

ಹಾಗೇ, ತಪ್ಪಾಗಿರೋರಿಗೆ ನಮ್ಮ ನ್ಯಾಯದ, ಮುಂದೆ ನ್ಯಾಯಾಂಗದ ಮುಂದೆ ಯಾರೂ ದೊಡ್ಡೋರಲ್ಲ.. ಲಾ ಮುಂದೆ ಎಲ್ಲರೂ ಈಕ್ವಲ್. ಸೋ ನ್ಯಾಯವಾಗಿ ಅದಕ್ಕೆ ಏನ್ ರಿಸಲ್ಟ್ ಬರ್ಬೇಕೋ ಖಂಡಿತ ಬರ್ಲಿ.. ಅನ್ಯಾಯ ಆಗಿರೋರಿಗೆ ಒಂದು ನ್ಯಾಯ ಸಿಗ್ಲೇಬೇಕು ಅಂತ ಹೇಳಬಹುದು. ಇವತ್ತೂನೂ ನಾನು ಅದನ್ನೇ ಹೇಳ್ತೀನಿ.. ಈಗ ಇದು ಮಾತಾಡುವಂಥ, ಡಿಸ್‌ಕಶನ್ ಮಾಡುವಂಥ ಸಿಚ್ಯುವೇಶನ್ ಅಲ್ವೇ ಅಲ್ಲ.. ಲೀಗಲ್ ಆಗಿರೋದ್ರಂದ, ಇನ್‌ವೆಸ್ಟಿಗೇಶನ್ ನಡಿತಾ ಇರೋದ್ರಂದ ಇದ್ರ ಬಗ್ಗೆ ನಾವು ಮಾತಾಡ್ದೇ ಇರೋದೇ ಒಳ್ಳೇದು ಅಲ್ವಾ..?' ಎಂದಿದ್ದಾರೆ ನಟಿ ಅನು ಪ್ರಭಾಕರ್. 

ಮುತ್ತಿನಹಾರ ಮುಹೂರ್ತಕ್ಕೆ ಬಂದಿದ್ರು ಪಾರ್ವತಮ್ಮ ರಾಜ್‌ಕುಮಾರ್; ಸುಹಾಸಿನಿ ಗೈರು ಆಗಿದ್ಯಾಕೆ?

ಅಂದಹಾಗೆ, ನಟ ದರ್ಶನ್ ಅವರು ಕಳೆದ ತಿಂಗಳು ಕೊಲೆ ಕೇಸ್ ಆರೋಪಿಯಾಗಿ ಜೈಲು ಸೇರಿದ್ದು ಗೊತ್ತೇ ಇದೆ. ಮೊದಲು ಪೊಲೀಸ್ ಕಸ್ಟಡಿ, ಬಳಿಕ ನ್ಯಾಯಾಂಗ ಬಂಧನದಲ್ಲಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜೈಲು ಸೇರಿದ್ದಾರೆ. ಇಂದು, ಅಂದರೆ 18 ಜುಲೈ 2024ರಂದು ಈ ಮೊದಲು ವಿಧಿಸಿದ್ದ ನ್ಯಾಯಾಂಗ ಬಂಧನದ ಅವಧಿ ಕೂಡ ಮುಕ್ತಾಯವಾಗಲಿದೆ. ಬಹುಶಃ, ಇನ್ನೂ ಸ್ವಲ್ಪ ದಿನ ನ್ಯಾಯಾಂಗ ಬಂಧನ ವಿಸ್ತರಣೆ ಆಗುವ ಚಾನ್ಸ್ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಕನ್ನಡ ಚಿತ್ರರಂಗದ ಸ್ಟಾರ್ ನಟರೊಬ್ಬರು ಕೊಲೆ ಕೇಸ್ ಆರೋಪಿಯಾಗಿ ಜೈಲು ಸೇರಿದ್ದಾರೆ. 

Latest Videos
Follow Us:
Download App:
  • android
  • ios