ಸ್ಯಾಂಡಲ್‌ವುಡ್ ಮಾಸ್ಟರ್ ಪ್ಲಾನರ್‌ ಆಫ್ ಥ್ರಿಲ್ಲಿಂಗ್ ಸೀನ್‌ ಮಂಜು ಅವರು ಸುಮಾರು 30 ವರ್ಷಗಳ ಕಾಲ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿರುವ ಕಾರಣಕ್ಕೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಬೈ ಎಲೆಕ್ಷನ್ ಬಿಸಿ ನಡುವೆ ಮಹಾಲಕ್ಷ್ಮೀಗೆ ಭಾರೀ ಮೊತ್ತದ ಚಿನ್ನದ ಹಾರ, ಕಾರಣ?

ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮಂಜು ಹೆಚ್ಚಾಗಿ ಹೆಸರು ಮಾಡಿದ್ದು ಸಾಹಸ ನಿರ್ದೇಶಕನಾಗಿಯೇ. ಸುಮಾರು ಐನ್ನೂರು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿ 'ಪೊಲೀಸ್ ಸ್ಟೋರಿ' ಚಿತ್ರದ ಮೂಲಕ ನಿರ್ದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ.

'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್‌' ಸಂಸ್ಥೆ ಅವರು ಯುನೈಟೆಡ್‌ ನ್ಯಾಷನಲ್ ಆರ್ಗನೈಸೇಷನ್‌ ಜೊತೆ ಕೈ ಜೋಡಿಸಿ ಥ್ರಿಲ್ಲರ್ ಮಂಜು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಈ ಸಂತೋಷದ ವಿಚಾರವನ್ನು ಮಂಜು ಅವರು ಫೇಕ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.