Asianet Suvarna News

ಹೆಲ್ತ್ ಬುಲಿಟಿನ್ 'ಕೋಮಾದಲ್ಲಿದ್ದಾರೆ ವಿಜಯ್, ಏನೂ ಹೇಳಲು ಸಾಧ್ಯವಿಲ್ಲ'

* ನಟ ಸಂಚಾರಿ ವಿಜಯ್ ಆರೋಗ್ಯ ಪರಿಸ್ಥಿತಿ ಹೇಗಿದೆ? 
* ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ ಆಸ್ಪತ್ರೆ
* ಕೋಮಾ ಸ್ಥಿತಿಯಲ್ಲಿರುವ ವಿಜಯ್
* ಮಾನಿಟರಿಂಗ್ ಮಾಡಲಾಗುತ್ತಿದೆ

Kannada actor Sanchari Vijay condition critical Hospital health bulletin mah
Author
Bengaluru, First Published Jun 13, 2021, 11:08 PM IST
  • Facebook
  • Twitter
  • Whatsapp

ಬೆಂಗಳೂರು (ಜೂ. 13) ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ  ಸಂಚಾರಿ ವಿಜಯ್ ಹೆಲ್ತ್  ಬುಲಿಟಿನ್ ಬಿಡುಗಡೆ ಮಾಡಲಾಗಿದೆ. ದ ಅಪೋಲೋ ಆಸ್ಪತ್ರೆ‌ ವೈದ್ಯರು ಬುಲಿಟಿನ್  ಬಿಡುಗಡೆ ಮಾಡಿದ್ದಾರೆ.

ಈಗಲೂ ನಟ ವಿಜಯ್ ಆರೋಗ್ಯ ಕ್ರಿಟಿಕಲ್ ಸ್ಟೇಜ್ ನಲ್ಲಿದೆ. ಕೋಮಾ ಸ್ಟೇಜ್ ನಿಂದ ಇನ್ನೂ ಹೊರ ಬಂದಿಲ್ಲ. ಕೃತಕ ಉಸಿರಾಟದ ಮೂಲಕ ವಿಜಯ್ ಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿಸಿದ್ದಾರೆ.

ಸಂಕಷ್ಟದ ಸಂದರ್ಭ ಸಂಚಾರಿ ವಿಜಯ್ ಗೆ ನೆರವಾದ ಕಿಚ್ಚ ಸುದೀಪ್

ಶನಿವಾರ ರಾತ್ರಿ 11.45 ರ ಹೊತ್ತಿಗೆ‌ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ತಲೆಗೆ ಹೊಡೆತ ಬಿದ್ದಿದ್ರಿಂದ ಮೆದುಳಿಗೆ ಡ್ಯಾಮೇಜ್ ಆಗಿದೆ. ಮೆದುಳಿನಲ್ಲಿ ರಕ್ತಸ್ರಾವ ವಾಗಿತ್ತು. ತಕ್ಷಣ ಸರ್ಜರಿ ಮಾಡಿ ಸರಿ ಪಡೆಸಿದ್ದೇವೆ. ಈಗ ಅವರು ತೀವ್ರ ನಿಗಾ ಘಟಕದಲ್ಲಿದ್ದು, ಮಾನಿಟರಿಂಗ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

 ವಿಜಯ್ ಅವರ ತಲೆ ಹಾಗೂ ಬಲತೊಡೆಗೆ ಗಂಭೀರ ಪೆಟ್ಟು ಬಿದ್ದಿದೆ. ನಟ ನೀನಾಸಂ ಸತೀಶ್ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದರು. ಜೆಪಿ ನಗರದ 7th ಪೇಸ್ ನಲ್ಲಿ ಅಪಘಾತವಾಗಿದೆ. ಸ್ನೇಹಿತ ನವೀನ್‌ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದರು.

 

Follow Us:
Download App:
  • android
  • ios