ಮಗನ ಹೆಸರಿನಲ್ಲಿ ಚಿರತೆ ದತ್ತು ಪಡೆದ ಡಿಫರೆಂಟ್ ಡೈರೆಕ್ಟರ್.  ಪ್ರಾಣಿ-ಪಕ್ಷಿ ಎಲ್ಲರಿಗೂ ಇಷ್ಟ.

ಕನ್ನಡ ಚಿತ್ರರಂಗದ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮ ಪುತ್ರ ರಣ್ವಿತ್‌ ಶೆಟ್ಟಿ ಹೆಸರಿನಲ್ಲಿ ಒಂದು ವರ್ಷದ ಅವಧಿಗೆ ಇಂಡಿಯನ್‌ ಲೆಪರ್ಡ್‌(ಚಿರತೆ) ಅನ್ನು ದತ್ತು ಪಡೆದಿದ್ದಾರೆ. 

ಕೊರೋನಾ ಕಾರಣಕ್ಕೆ ಸಂಕಷ್ಟದಲ್ಲಿರುವ ಮೃಗಾಲಯದಲ್ಲಿರುವ ಪ್ರಾಣಿ- ಪಕ್ಷಿಗಳಿಗೆ ನೆರವಾಗಲು ಕನ್ನಡದ ಹಲವು ನಟ, ನಟಿಯರು ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ರಿಷಬ್‌ ಶೆಟ್ಟಿ ಕೂಡ ಚಿರತೆಯನ್ನು ದತ್ತು ಸ್ವೀಕರಿಸಿದ್ದಾರೆ. 'ಮೈಸೂರು ಮೃಗಾಲಯದ ವತಿಯಿಂದ ರಣ್ವಿತ್‌ ಶೆಟ್ಟಿ, ರಿಷಬ್ ಶೆಟ್ಟಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಒಂದೊಳ್ಳೆ ಕೆಲಸದಿಂದ ಅನೇಕರು ಸ್ಫೂರ್ತಿಗೊಂಡು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಮುಂದಾಗುತ್ತಾರೆ,' ಎಂದು ಪತ್ರದ ಮೂಲಕ ಚಾಮರಾಜೇಂದ್ರ ಮೃಗಾಲಯ ಧನ್ಯವಾದ ತಿಳಿಸಿದೆ. 

ಶಿವು ಅಡ್ಡದಿಂದ ಗುಡ್‌ ನ್ಯೂಸ್: ರಿಷಬ್ ಶೆಟ್ಟಿನೇ ಡೈರೆಕ್ಟರ್!

'ಹೀರೋ' ಚಿತ್ರದ ರಿಲೀಸ್ ನಂತರ ರಿಷಬ್ ಶೆಟ್ಟಿ ಬೆಲ್ ಬಾಟಂ, ಗರುಡ ಗಮನ ವೃಷಭಾ ವಾಹನ, ಹರಿಕಥೆ ಅಲ್ಲ ಗಿರಿಕತೆ, ರುದ್ರ ಪ್ರಯಾಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸ್ನೇಹಿತ ರಕ್ಷಿತ್ ವಿರುದ್ಧದ ಆರೋಪದಿಂದ ಪಾರು ಮಾಡಿದ್ದಾರೆ. ಹಿರಿಯ ನಟ ಅನಂತ್ ನಾಗ್‌ಗೆ 'ಪದ್ಮ ಪ್ರಶಸ್ತಿ' ನೀಡುವಂತೆ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ.