ಮಧ್ಯಮವರ್ಗ ಡಾರ್ಲಿಂಗ್‌ ಆಗಿದ್ದ, ಇದ್ದರೆ ಇಂಥ ಒಬ್ಬ ಗೆಳೆಯನಿರಬೇಕು ಅಂತ ಹುಡುಗಿಯೂ ಅಳಿಯನಿರಬೇಕು ಅಂತ ಕನ್ಯಾಪಿತನೂ ಆಶೆಪಡುತ್ತಿದ್ದ ಚೆಂದದ ಹುಡುಗ ರಮೇಶ್‌ ಈಗ ಮಾವ ಆಗುತ್ತಿದ್ದಾರೆ.

ನಟ ಎನ್ನುವುದು ಬ್ಯೂಟಿಫುಲ್‌ ರೋಲ್‌; ರಮೇಶ್‌ ಅರವಿಂದ್‌ ಸ್ಫೂರ್ತಿ ಕಥೆ! 

ಹೌದು. ರಮೇಶ್‌ ಮಗಳು ನಿಹಾರಿಕಾ ಮದುವೆ ಇದೇ ಡಿಸೆಂಬರ್‌ 28ರ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆಯಲಿದೆ. ರಮೇಶ್‌ ಅಳಿಯನಾಗುತ್ತಿರುವವರ ಹೆಸರು ಅಕ್ಷಯ್‌. ನಿಹಾರಿಕಾ ಮತ್ತು ಅಕ್ಷಯ್‌ ಕೆಲವು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿ ಪರಸ್ಪರರು ಮೆಚ್ಚಿಕೊಂಡು ಹಿರಿಯರಿಗೆ ವಿಷಯ ತಿಳಿಸಿ ಈಗ ಅವರ ಪ್ರೇಮವು ವಿವಾಹ ಮಂಟಪದ ತನಕ ಬಂದಿದೆ.

‘ಮಗಳ ಮದುವೆಯ ಸಂಭ್ರಮವೇ ಬೇರೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಅದೊಂದು ಸಂತೋಷದ ಸಂಗತಿ. ಮದುವೆಯ ಸಂಭ್ರಮಕ್ಕೆ ಎರಡೂ ಕುಟುಂಬದವರು ಮಾತ್ರ ಇರುತ್ತೇವೆ. ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಇಟ್ಟುಕೊಂಡಾಗ ಚಿತ್ರೋದ್ಯಮದ ಗೆಳೆಯರನ್ನೂ ಇತರ ಮಿತ್ರರನ್ನೂ ಕರೆಯಲು ತೀರ್ಮಾನಿಸಿದ್ದೇನೆ. ಡಿಸೆಂಬರ್‌ 28 ರ ಬೆಳಗ್ಗೆ 10:50ಕ್ಕೆ ಮುಹೂರ್ತ. ಐಯಾಮ್‌ ಎಕ್ಸೈಟೆಡ್‌’ ಅಂದರು ರಮೇಶ್‌ ಅರವಿಂದ್‌.

`ನಾನು ಆಕಾಶದಿಂದ ಹಾರಲಿಕ್ಕೂ ಸಿದ್ಧ' ಎನ್ನುತ್ತಾರೆ ರಮೇಶ್ ಅರವಿಂದ್‌

ಅಕ್ಷಯ್‌ ಖಾಸಗಿ ಸಂಸ್ಥೆಯೊಂದರಲ್ಲಿ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌ ಡಿಸೈನರ್‌ ಆಗಿದ್ದಾರೆ. ಮಗಳು ಪ್ರಾಡಕ್ಟ್ ಮ್ಯಾನೇಜರ್‌ ಆಗಿ ವೃತ್ತಿ ಮಾಡುತ್ತಿದ್ದಾರೆ. ರಮೇಶ್‌ ಅರವಿಂದ್‌ ಮತ್ತು ಅರ್ಚನಾ ದಂಪತಿಗಳ ಬಹುದೊಡ್ಡ ಬಳಗದ ಸಂಭ್ರಮವೂ ಆಗಲಿರುವ ಈ ಮದುವೆಗೂ ಆರತಕ್ಷತೆಗೂ ಎರಡು ವಾರಗಳ ಅಂತರ ಇಟ್ಟುಕೊಂಡಿರುವುದು ಕೂಡ ರಮೇಶ್‌ ಅವರ ಮುಂದಾಲೋಚನೆಗೆ ಸಾಕ್ಷಿ. ಕ್ವಾರಂಟೈನ್‌ ಅವಧಿಯ ನಂತರ ಮತ್ತೊಂದು ಕಾರ್ಯಕ್ರಮ.