ಬಹು ನಿರೀಕ್ಷಿತ ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮುಖ ಭಾಗ ಇದಾಗಿರುವ ಕಾರಣ ಲೇ ಲಡಾಕ್‌ನಲ್ಲಿ ಸೆರೆ ಹಿಡಿಯಲಾಗುತ್ತಿದೆ. ಕೊರೋನಾ ಸೊಂಕು ಹೆಚ್ಚಾಗುತ್ತಿದೆ, ಲಾಕ್‌ಡೌನ್ ಆಗುವ ಮುನ್ನ ಚಿತ್ರೀಕರಣ ಮುಗಿಸಬೇಕು ಎಂದು ತಂಡ ಬೇಗ ಬೇಗ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದೆ. ಲೇಗೆ ಪ್ರಯಾಣ ಮಾಡುವಾಗಲೂ ನಿಖಿಲ್ ಮುಂಜಾಗೃತ ಕ್ರಮಗಳನ್ನು ಕೈಗೊಂಡು, ತಂಡದ ಜೊತೆ ಪ್ರಯಾಣಿಸಿದ್ದರು. 

ನಿಖಿಲ್ ಕುಮಾರಸ್ವಾಮಿ ಕನ್ನಡ ಪೋಸ್ಟ್: ಕನ್ನಡ ಬರೆಯೋಕೆ ಬರಲ್ವಾ? ಟ್ರೋಲ್! 

ಸುಮಾರು ಮೂರ್ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು, ಬಿಡುವು ಮಾಡಿಕೊಂಡು ಪತ್ನಿಗಾಗಿ ಶಾಪಿಂಗ್ ಮಾಡಿದ್ದಾರೆ. ನಿಖಿಲ್ ಫ್ಯಾನ್ ಪೇಜ್‌ವೊಂದರಲ್ಲಿ ಫೋಟೋ ಶೇರ್ ಮಾಡಿಕೊಂಡು, 'ಬಾಳ ಸಂಗಾತಿ ರೇವತಿಗೆ ಗಿಫ್ಟ್ ಖರೀದಿಸುವಲ್ಲಿ ಬ್ಯುಸಿಯಾಗಿರುವ ನಿಖಿಲ್ ಅಣ್ಣ,' ಎಂದು ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದೆ. 'ಅಣ್ಣ ಗಿಫ್ಟ್ ನೀಡುವಾಗ ಅತ್ತಿಗೆ ಜೊತೆ ಫೋಟೋ ಅಪ್ಲೋಡ್ ಮಾಡಿ,', 'ಅತ್ತಿಗೆ ಜತೆ ಯುಗಾದಿ ಫೋಟೋ ಹಾಕಿಲ್ಲ. ಅದಕ್ಕಾದರೂ ಬೆಂಗಳೂರಿಗೆ ಬಂದ ನಂತರ ಒಂದು ಸೆಲ್ಫೀ ಶೇರ್ ಮಾಡಿ,' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ನಿಖಿಲ್ ಹುಟ್ಟುಹಬ್ಬದ ದಿನ ರೈಡರ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಸಖತ್ ಮಾಸ್‌ ಆಗಿರುವ ಈ ಚಿತ್ರ ನಿಖಿಲ್‌ ಅವರನ್ನು ಡಿಫರೆಟ್ ಶೇಡ್‌ನಲ್ಲಿ ತೋರಿಸಿದ್ದಾರೆ ನಿರ್ದೇಶಕ ವಿಜಯ್ ಕುಮಾರ್. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತವಿದ್ದು ಸಿನಿಮಾ ಹಾಡುಗಳು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರೈಡರ್ ರಿಲೀಸ್ ಆಗುತ್ತಿದ್ದು, ನಿಖಿಲ್ ಲುಕ್ ಹೇಗಿರಲಿದೆ ಎಂದು ಇತ್ತೀಚಿಗೆ ಅಪ್ಲೋಡ್ ಮಾಡುತ್ತಿರುವ ಫೋಟೋಗಳಿಂದ ಗೆಸ್ ಮಾಡಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು.