Asianet Suvarna News Asianet Suvarna News

ಫೋಟೋ ದುರ್ಬಳಕೆ ಬಗ್ಗೆ ನಟ ಸಾಧು ಕೋಕಿಲ ದೂರು!

 ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ದುರ್ಬಳಕೆಯಾಗುತ್ತಿರುವ ಸಂಬಂಧ ಹಿರಿಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ದಕ್ಷಿಣ ವಿಭಾಗ ಸಿಇಎನ್‌ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
 

Kannada actor music composer Sadhu kokila files complaint for misusing images
Author
Bangalore, First Published Sep 9, 2020, 1:49 PM IST

ಕನ್ನಡ ಚಿತ್ರರಂಗ ಹೆಸರಾಂತ ಹಾಸ್ಯನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್‌ಗಳು ದುರ್ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಉದ್ದ ಕೂದಲು ಹಾಗೂ ವಸ್ತ್ರ ವಿನ್ಯಾಸದ ರಹಸ್ಯ ಬಿಚ್ಚಿಟ್ಟ ನಾಗಿಣಿ ನಟಿ ನಮ್ರತಾ! 

ಚಲನಚಿತ್ರಗಳಲ್ಲಿ ಅಭಿನಯಿಸಿದ ಪಾತ್ರಗಳ ಫೋಟೋಗಳನ್ನು ಕೆಲವು ಕಿಡಿಗೇಡಿಗಳು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನಾವಶ್ಯಕ ವಿಚಾರಗಳಿಗೆ ನನ್ನ ಫೋಟೋ ಅಂಟಿಸಿ, ಅಪ್‌ಲೋಡ್‌ ಮಾಡಲಾಗುತ್ತಿದೆ. ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾಧು ಕೋಕಿಲ ದೂರು ಕೊಟ್ಟಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಧು ಕೋಕಿಲ ನನ್ನ ಗುರು: ಎಸ್‌ ಪಿ ಬಾಲಸುಬ್ರಮಣ್ಯಂ 

1992ರಲ್ಲಿ 'ಸಾರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪಾದಾರ್ಪಣೆ ಮಾಡಿದ ಸಾಧು ಮಹರಾಜ್‌ ಅನೇಕ ಚಿತ್ರಗಳಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ  'ಓ ಮಲ್ಲಿಗೆ' ಚಿತ್ರದ ಮುಸ್ತಫಾ ಪಾತ್ರ,  ಮಾಣಿಕ್ಯಾ ಚಿತ್ರದ ವೀರಪ್ರತಾಪ ಸಿಂಹ್,  ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಚಿತ್ರದ ಮಂಚೇ ಗೌಡ, ರಾಜಕುಮಾರ ಚಿತ್ರದ ಆಂಟೋಣಿ ಹೀಗೆ ಸಾಕಷ್ಟು ಸಿನಿಮಾಗಳ ಪಾತ್ರಗಳು ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿವೆ.  ನಟನಾಗಿ ಮಾತ್ರವಲ್ಲದೇ 11  ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಹಾಗೂ 100ಕ್ಕೂ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Follow Us:
Download App:
  • android
  • ios