ಯುಟ್ಯೂಬ್‌ನಲ್ಲಿ ಮಿಲಿಯನ್ ವೀಕ್ಷಣೆ, 8 ಲಕ್ಷಕ್ಕೆ ಸಿನಿಮಾ ಕೊಟ್ಟಿದ್ದೀನಿ ಡಬಲ್ ಹಣ ಮಾಡ್ಕೊಂಡಿದ್ದಾರೆ: ಜಗ್ಗೇಶ್
ಪವರ್ ಆಫ್ ಸೋಷಿಯಲ್ ಮೀಡಿಯಾವನ್ನು ಹಂಚಿಕೊಂಡ ನಟ ಜಗ್ಗೇಶ್. ಆಗ ಸಿನಿಮಾಗಳಿಗೆ ಹಾಕುತ್ತಿದ್ದ ಬಂಡವಾಳಗಳು ಎಷ್ಟು?

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ 90ರ ದಶಕದಲ್ಲಿ ನೀಡಿದ ಸೂಪರ್ ಹಿಟ್ ಸಿನಿಮಾಗಳು ಈಗಲೂ ಅಗಾಗ ವೈರಲ್ ಆಗುತ್ತಿದೆ ಟ್ರೋಲ್‌ಗಳಲ್ಲಿ ಬಳಸುತ್ತಿದ್ದಾರೆ ಅಂದ್ರೆ ಅದು ಮೊಬೈಲ್‌ಗಳಿಂದ. ಕಳೆದ ಮೂರ್ನಾಲ್ಕು ವರ್ಷಗಳಿಂದ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಜಗ್ಗೇಶ ಪವರ್ ಆಫ್ ಮೀಡಿಯಾ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹಳೆ ಸಿನಿಮಗಳ ಈಗ ಮಿಲಿಯನ್ ವೀಕ್ಷಣೆ ಪಡೆದಿರುವುದನ್ನು ನೋಡಿ ಖುಷಿ ಪಟ್ಟಿದ್ದಾರೆ.
'ಸೋಷಿಯಲ್ ಮೀಡಿಯಾ ಆವಿಷ್ಕಾರಕ್ಕೆ ನಾನು ಥ್ಯಾಂಕ್ಸ್ ಹೇಳುತ್ತೀನಿ ನಮ್ಮನ್ನು ಬದುಕಿಸಿರುವುದಕ್ಕೆ. ಸೋಷಿಯಲ್ ಮೀಡಿಯಾದಲ್ಲಿ ಇಲ್ಲದಿದ್ದರೆ ನಮ್ಮ ಹಳೆ ಸಿನಿಮಾಗಳ ವಿಡಿಯೋ ಕಾಮಿಡಿ ಮತ್ತು ಮಂಚ್‌ಗಳು ವೈರಲ್ ಆಗುತ್ತಿರಲಿಲ್ಲ. ಹೀಗೆ ಡೆಲ್ಲಿಯಲ್ಲಿ ಬಿಡುವಿದ್ದಾಗ ಕಾರ್ಯಕ್ರಮಗಳು 11ಕ್ಕೆ ಆರಂಭ ಅಂದ್ರೆ ನಾನು 8ಕ್ಕೆ ಬಿಡಬೇಕು ಆಗ ಅಥವಾ ಯಾವ ಹವ್ಯಾಸ ಇಲ್ಲದ ಕಾರಣ ಮನೆಯಲ್ಲಿ ಕುಳಿತುಕೊಂಡು ವಿಡಿಯೋ ನೋಡುತ್ತೀನಿ. ನಾನು ರೀಲ್ಸ್ ನೋಡಿ ಎಂಜಾಯ್ ಮಾಡುತ್ತೀನಿ. ಒಮ್ಮೊಮ್ಮೆ ಪ್ರಾಣಿಗಳು ಹಾವು ಹಿಡಿಯುವ ವಿಡಿಯೋಗಳನ್ನು ನೋಡುತ್ತಿರುವೆ' ಎಂದು ಜಗ್ಗೇಶ್ ಹೇಳಿದ್ದಾರೆ.
ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಿದರೆ ನೆಮ್ಮದಿ ಲಭ್ಯ: ಜಗ್ಗೇಶ್
'ಮೊಬೈಲ್‌ನಲ್ಲಿ ನಾನು ಹೆಚ್ಚು ಸಿನಿಮಾಗಳನ್ನು ನೋಡಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರುವ ಸಣ್ಣ ಪುಟ್ಟ ವಿಡಿಯೋಗಳನ್ನು ನೋಡುತ್ತೀನಿ ನನಗೆ ಕಾಮಿಡಿ ತುಂಬಾ ಇಷ್ಟವಾಗುತ್ತದೆ. ಬಿಹಾರ್ MP ಅವರಿಗೆ ನನ್ನ ವಿಡಿಯೋ ಕಳುಹಿಸಿದೆ ಕಾಮಿಡಿ ನೋಡಿ ಎಷ್ಟು ಚೆನ್ನಾಗಿ ಆಕ್ಟಿಂಗ್ ಮಾಡುತ್ತೀರಿ ಇಲ್ಲಿ ನೋಡಿದರೆ ಗುಮ್ಮ ಹಾಗೆ ಕುಳಿತುಕೊಂಡಿರುತ್ತೀರಿ ಎನ್ನುತ್ತಿದ್ದರು. ಜಗ್ಗೇಶ್ ಕನ್ನಡ ಸಿನಿಮಾ ಅಂತ ಹಾಕಿ ಕಾಣಿಸುತ್ತದೆ ಅಂತ ಹೇಳಿದೆ. ನಾನು ಚೆಕ್ ಮಾಡಿದೆ ಅದೆಷ್ಟೋ ವಿಡಿಯೋಗಳು ಮಿಲಿಯನ್‌ನಲ್ಲಿ ವೀಕ್ಷಣೆ ಪಡೆದುಕೊಂಡಿದೆ. ಇದೇ ರೀತಿ ಆ ಕಾಲದಲ್ಲಿ ಆಗಿದ್ದರೆ ನಮ್ಮ ನಿರ್ಮಾಪಕರು ಕುಬೇರರಾಗುತ್ತಿದ್ದರು ನಾವು ಹಣ ಮಾಡಿದ್ದೀವಿ. ನಿಜ ಹೇಳಬೇಕು ಅಂದ್ರೆ ತರ್ಲೆ ನನ್ನ ಮಗ ಸಿನಿಮಾಗೆ 9 ಲಕ್ಷ ಬಜೆಟ್, ಬಂಡ ನನ್ನ ಗಂಡ ಸಿನಿಮಾ 14 ಲಕ್ಷ ಬಜೆಟ್ ಸುಮಾರು ವರ್ಷ ನಮ್ಮ ಬಜೆಟ್ 20 ಲಕ್ಷ ಇತ್ತು. ರಾಮು ಎಂಟರ್ಪ್ರೈಸ್ ಅವರಿಗೆ ನನ್ನ ಸಿನಿಮಾವನ್ನು 7-8 ಲಕ್ಷಕ್ಕೆ ಕೊಡುತ್ತಿದ್ದೆ ನನ್ನ ಇಡೀ ಪಿಕ್ಚರ್ ಅರ್ಧ ಬಜೆಟ್ ಅವರಿಗೆ ಕೊಡುತ್ತಿದ್ದೆ ಆತ ಆಫ್ಟರ್ ಸಿಟಿನ ಡಬಲ್ ಮೊತ್ತಕ್ಕೆ ಮಾರುತ್ತಿದ್ದರು ಚೆನ್ನಾಗಿ ಲಾಭ ಮಾಡುತ್ತಿದ್ದರು' ಎಂದಿದ್ದಾರೆ ಜಗ್ಗೇಶ್.